»   » ಆಂಗ್ಲ ಚಿತ್ರದಲ್ಲಿ ಶ್ರೀಲಂಕಾ ಸೌಗಂಧಿಕಾ ಪುಷ್ಪ ಜಾಕ್ವೆಲಿನ್

ಆಂಗ್ಲ ಚಿತ್ರದಲ್ಲಿ ಶ್ರೀಲಂಕಾ ಸೌಗಂಧಿಕಾ ಪುಷ್ಪ ಜಾಕ್ವೆಲಿನ್

Posted By:
Subscribe to Filmibeat Kannada

ಮೂರು ವರ್ಷಗಳ ಹಿಂದೆ 'ಅಲ್ಲಾದ್ದೀನ್' ಚಿತ್ರದ ಮೂಲಕ ಬಾಲಿವುಡ್‌ಗೆ ಅಡಿಯಿಟ್ಟ ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್. ಇದುವರೆಗೆ ಅಭಿನಯಿಸಿದ್ದು ನಾಲ್ಕೇ ನಾಲ್ಕು ಚಿತ್ರಗಳಲ್ಲೇ ಆದರೂ ಆಕೆಯ ಹೆಸರು ಮಾತ್ರ ಹಾಲಿವುಡ್ ತನಕ ತಲುಪಿದೆ.

ಹಾಲಿವುಡ್‌ ಚಿತ್ರವೊಂದರಲ್ಲಿ ಅಭಿನಯಿಸಲು ಜಾಕ್ವೆಲಿನ್‌ಗೆ ಕರೆ ಬಂದಿದೆ. ನಿರ್ಮಾಪಕ ಜೇಮ್ಸ್ ಸಿಂಪ್ಸನ್ ನಿರ್ದೇಶಕನಾಗಿ ಬದಲಾಗಿ ತೆರೆಗೆ ತರುತ್ತಿರುವ ಚಿತ್ರ 'ಡೆಫಿನೇಷನ್ ಆಫ್ ಫಿಯರ್'. ಈ ಚಿತ್ರದ ಮೂಲಕ ಜಾಕ್ವೆಲಿನ್ ಹಾಲಿವುಡ್ ಪಯಣ ಸಾಗಲಿದೆ.

"ನನ್ನ ತಾಯ್ನಾಡಾದ ಶ್ರೀಲಂಕಾದಲ್ಲೂ 'ಪ್ರವೇಗಯಾ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಈಗಾಗಲೆ ಅಲ್ಲಿನ ಚಿತ್ರೋದ್ಯಮ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಭವಿಷ್ಯತ್ತಿನಲ್ಲಿ ನನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಡಿಯಿಟ್ಟಿದ್ದೇನೆ. ಇನ್ನು ಹಾಲಿವುಡ್ ಅವಕಾಶ ಪ್ರತಿಯೊಬ್ಬರಿಗೂ ಕನಸು. ಅಲ್ಲೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತೇನೆ" ಎಂದಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Model-turned-actress Jacqueline Fernandez, who is all set to make a splash in a Canadian-British venture. The 26-year-old has been approached for JacquelineDefinition of Fear, a project that marks the directorial debut of producer James Simpson.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada