»   »  ಜಾಕ್ಸನ್ ಕುರಿತ ಕೊನೆಯ ಚಿತ್ರ 'ದಿಸ್ ಈಸ್ ಇಟ್'

ಜಾಕ್ಸನ್ ಕುರಿತ ಕೊನೆಯ ಚಿತ್ರ 'ದಿಸ್ ಈಸ್ ಇಟ್'

Posted By: Staff
Subscribe to Filmibeat Kannada

ಬಹಳಷ್ಟು ಕುತೂಹಲ ಮೂಡಿಸಿದ್ದ ಪಾಪ್ ದೊರೆ ಮೈಕಲ್ ಜಾಕ್ಸನ್ ಕುರಿತಾದ 'ದಿಸ್ ಈಸ್ ಇಟ್'ಚಲನಚಿತ್ರ ಇದೀಗ ಬಿಡುಗಡೆಯಾಗಿದೆ. ಕೇವಲ ಎರಡು ವಾರಗಳ ಕಾಲ ಮಾತ್ರ ಈ ಚಿತ್ರ ಪ್ರದರ್ಶನ ಕಾಣಲಿದ್ದು ಬೆಂಗಳೂರಿನ ಆಯ್ದ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಿದೆ.

ಲಂಡನ್ ಕ್ಯೂ 2 ಅರೆನಾದಲ್ಲಿ ನಡೆಯಬೇಕಾಗಿದ್ದ ಶೋಗಾಗಿ ಕಠಿಣ ತಯಾರಿಯಲ್ಲಿದ್ದಾಗಲೇ ಜಾಕ್ಸನ್ ಅಗಲಿದ್ದರು. ಅವರ ಅಭಿಮಾನಿಗಳು ಇನ್ನೂ ಈ ಶಾಕ್ ನಿಂದ ಹೊರಬಂದಿಲ್ಲ. ಜಾಕ್ಸನ್ ಸಾವು ಅವರ ಅಭಿಮಾನಿಗಳಿಗೆ ಭರಿಸಲಾಗದ ನೋವನ್ನು ತಂದಿತ್ತು. ಪ್ರದರ್ಶನದ ಟಿಕೆಟ್ ಗಳೂ ಮಾರಾಟವಾಗಿದ್ದವು. ಶೋಗಾಗಿ ನಡೆಸಿದ ಪೂರ್ವ ತಯಾರಿಯ ದೃಶ್ಯಗಳು ದಾಖಲಾಗಿದ್ದವು. ಆ ದೃಶ್ಯಗಳನ್ನು ಆಧರಿಸಿ 'ದಿ ಈಸ್ ಇಟ್' ಚಿತ್ರವನ್ನು ತೆರೆಗೆ ತರಲಾಗಿದೆ.

ಬುಧವಾರ(ಅ.28) ಬಿಡುಗಡೆಯಾಗಿರುವ ಈ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೇವಲ ಎರಡು ವಾರ ಪ್ರದರ್ಶನಗೊಳ್ಳಲಿರುವ 'ದಿಸ್ ಈಸ್ ಇಟ್' ಚಿತ್ರದ ಟಿಕೆಟ್ ಗಾಗಿ ಜಾಕ್ಸನ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎರಡು ವಾರಗಳ ಪ್ರದರ್ಶನದ ಶೇ.95ರಷ್ಟು ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ.

ಸೋನಿ ಪಿಕ್ಚರ್ಸ್ ಬಿಡುಗಡೆ ಮಾಡಿರುವ ಈ ಚಿತ್ರ ಭಾರತದಲ್ಲಿ 150ಕ್ಕೂ ಹೆಚ್ಚು ಪ್ರಿಂಟ್ ಗಳೊಂದಿಗೆ ತೆರೆಕಂಡಿದೆ. ಬೆಂಗಳೂರಿನ ಪಿವಿಆರ್, ಫೇಮ್ ಫೋರಂ ಮಾಲ್, ಫೇಮ್ ಲಿಡೊ, ಇನ್ನೋವೇಟಿವ್ ಮಲ್ಟಿಫ್ಲೆಕ್ಸ್, ಫನ್ ಸಿನಿಮಾಸ್, ನವರಂಗ್, ಇನಾಕ್ಸ್, ವಿಷನ್ ಸಿನಿಮಾಸ್, ಫೇಮ್ ಶಂಕರನಾಗ್, ಊರ್ವಶಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಇಷ್ಟಕ್ಕೂ ಈ ಚಿತ್ರದಲ್ಲಿ ಅಂತಹದ್ದೇನಿದೆ? ಜಾಕ್ಸನ್ ರ 2009ರವರೆಗಿನ 100ಕ್ಕೂ ಅಧಿಕ ಗಂಟೆಗಳ ಪ್ರದರ್ಶನದ ಆಯ್ದ ದೃಶ್ಯಗಳು ಈ ಚಿತ್ರದಲ್ಲಿವೆ. ಜಾಕ್ಸನ್ ಅವರ ವಿಭಿನ್ನ ಮುಖಗಳನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಕೆಲವೊಂದು ಖಾಸಗಿ ದೃಶ್ಯಗಳು ಚಿತ್ರದಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಒಟ್ಟಾರೆ ದಿಸ್ ಈಸ್ ಇಟ್ ಚಿತ್ರವನ್ನು ಸಾಕ್ಷ್ಯಚಿತ್ರ ರೂಪದ ಚಲನಚಿತ್ರ ಎನ್ನಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada