»   » ಜಾಕ್ಸನ್ ಸ್ಮಾರಕ ನೋಡಲು ಅಪಾರ ಲಂಚ

ಜಾಕ್ಸನ್ ಸ್ಮಾರಕ ನೋಡಲು ಅಪಾರ ಲಂಚ

Posted By:
Subscribe to Filmibeat Kannada

ಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ ಸ್ಮಾರಕ ನೋಡಲು ಕ್ಯಾಲಿಫೋರ್ನಿಯಾದಲ್ಲಿ ಅವರ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಜಾಕ್ಸನ್ ಸ್ಮಾರಕಕ್ಕೆ ಬಿಗಿ ಭದ್ರತೆ ಒದಗಿಸಲಾಗಿರುವ ಕಾರಣ ಅವರ ಅಭಿಮಾನಿಗಳು ನಾನಾ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಗೆ 3,000 ಡಾಲರ್ ಲಂಚ ಕೊಟ್ಟು ಜಾಕ್ಸನ್ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಮೈಕೇಲ್ ಜಾಕ್ಸನ್ ಸಮಾಧಿ ಸ್ಥಳವನ್ನು ಕೆಲವು ಕಿಡಿಗೇಡಿಗಳು ಅಪವಿತ್ರಗೊಳಿಸುತ್ತಿದ್ದಾರೆ. ಜಾಕ್ಸನ್ ಘನತೆಗೆ ಕುತ್ತು ತರುವ ಛಾಯಾಚಿತ್ರಗಳು ಅವರ ಸಮಾಧಿ ಬಳಿ ಬಂದು ಬೀಳುತ್ತಿವೆ. ಹಾಗಾಗಿ ಜಾಕ್ಸನ್ ಸಮಾಧಿ ಸ್ಥಳವನ್ನು ರಕ್ಷಿಸಲು ಅವರ ಕುಟುಂಬಿಕರು ಬಿಗಿ ಭದ್ರತೆ ಒದಗಿಸಿದ್ದರು. ಜಾಕ್ಸ್ಸನ್ ಸಮಾಧಿ ನೋಡಲು ನೇರದಾರಿ ಬಂದ್ ಆದ ಕಾರಣ ಅವರ ಅಭಿಮಾನಿಗಳು ಪರ್ಯಾಯ ಮಾರ್ಗ ಕಂಡುಕೊಂಡರು. ಭದ್ರತಾ ಸಿಬ್ಬಂದಿಗೆ 3,000 ಫೌಂಡ್ ಲಂಚ ನೀಡಿ ಸಮಾಧಿ ಸ್ಥಳಕ್ಕೆ ಅಭಿಮಾನಿಗಳು ಭೇಟಿ ನೀಡುತ್ತ್ತಿದ್ದಾರೆ ಎಂಬ ಸುದ್ದಿಯನ್ನು 'ದಿ ಡೈಲಿ ಸ್ಟಾರ್' ಪತ್ರಿಕೆ ವರದಿ ಮಾಡಿದೆ.

ಅಭಿಮಾನಿಗಳು ಜಾಕ್ಸನ್ ಸ್ಮಾರಕಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅವರ ಸಮಾಧಿ ಬಳಿ ಅಗೌರವ ಸೂಚಿಸುವ ಛಾಯಾಚಿತ್ರಗಳನ್ನು ಇಡುತ್ತಿದ್ದಾರೆ. ಜಾಕ್ಸನ್ ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಸಮಾಧಿ ಬಳಿ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುವ ಅಭಿಮಾನಿಗಳು ಅವುಗಳನ್ನು ಅಂತರ್ಜಾಲದಲ್ಲೂ ಹಾಕಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಘಟನೆಗಳಿಂದ ನಮ್ಮ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಜಾಕ್ಸನ್ ಕುಟುಂಬ ಮೂಲಗಳು ತಿಳಿಸಿವೆ.

ಜಾಕ್ಸನ್ ಸಮಾಧಿ ರಕ್ಷಣೆ ಹಾಗೂ ಭದ್ರತೆ ಬಗ್ಗೆ ಚಿಂತೆಗೀಡಾಗಿದ್ದೇವೆ. ಅಮೃತಶಿಲೆಯಲ್ಲಿ ನಿರ್ಮಿಸಿರುವ ಜಾಕ್ಸನ್ ಸ್ಮಾರಕಕ್ಕೆ ಗೀಚಿದ ಗುರುತುಗಳು ಬಿದ್ದಿವೆ. ಹಾಗಾಗಿ ಜಾಕ್ಸನ್ ಸಮಾಧಿಯನ್ನು ರಕ್ಷಿಸಲು ಮುಂದಾಗಿದ್ದೇವೆ. ಜಾಕ್ಸನ್ ಸಮಾಧಿ ನೋಡುವ ಅವಕಾಶವನ್ನು ಅವರ ಅಭಿಮಾನಿಗಳಿಗೆ ಸಂಪೂರ್ಣ ನಿಷೇಧ ಹೇರಲಿದ್ದು ಕೇವಲ ಜಾಕ್ಸನ್ ಕುಟುಂಬಿಕರಿಗೆ ಮಾತ್ರ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನುತ್ತವೆ ಮೂಲಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada