»   »  ಮೈಕೇಲ್ ಜಾಕ್ಸನ್ ಗೆ ನೊಬೆಲ್ ಶಾಂತಿ ಪ್ರಶಸ್ತಿ?

ಮೈಕೇಲ್ ಜಾಕ್ಸನ್ ಗೆ ನೊಬೆಲ್ ಶಾಂತಿ ಪ್ರಶಸ್ತಿ?

Subscribe to Filmibeat Kannada

ಪಾಪ್ ಸಂಗೀತ ಗಾರುಡಿಗ ಮೈಕೇಲ್ ಜಾಕ್ಸನ್ ಗೆ ಮರಣೋತ್ತರನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಅವರ ಅಪಾರ ಅಭಿಮಾನಿ ಬಳಗ ಒಕ್ಕೊರಲ ಧ್ವನಿಯೆತ್ತಿದೆ. ಇದಕ್ಕಾಗಿ ಅಂತರ್ಜಾಲದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಎರಡು ಅಂತರ್ಜಾಲ ತಾಣಗಳ ಮೂಲಕ ನೊಬೆಲ್ ಸಮಿತಿಗೆ ಬೇಡಿಕೆ ಸಲ್ಲಿಸಿದ್ದಾರೆ. ವಿಶ್ವದ ಅತ್ಯುನ್ನತ ನೊಬೆಲ್ ಪುರಸ್ಕಾರಕ್ಕೆ ಜಾಕ್ಸನ್ ಹೆಸರನ್ನು ನಾಮನಿರ್ದೇಶನ ಮಾಡಲು ಪಣ ತೊಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಎರಡು ಅಂತರ್ಜಾಲ ತಾಣಗಳು ನಿರಂತರ ಶ್ರಮಿಸುತ್ತಿವೆ. ಈ ಎರಡು ಅಂತರ್ಜಾಲ ತಾಣಗಳಿಗೆ ಜಾಕ್ಸನ್ ಅಭಿಮಾನಿಗಳು ಎಡತಾಕಿದ್ದು. ಜಾಕ್ಸನ್ ಗೆ ನೊಬೆಲ್ ಶಾಂತಿ ಕೊಡಲೇಬೇಕೆಂದು ಈಗಾಗಲೇ 12,000ಕ್ಕೂ ಅಧಿಕ ಸಹಿಗಳು ರವಾನೆಯಾಗಿವೆ.

''ಮನುಕುಲದ ಬಗೆಗಿನ ಜಾಕ್ಸನ್ ಅವರ ಕಳಕಳಿ ನಿಜಕ್ಕೂ ಅನನ್ಯ.ತಮ್ಮಜೀವನದ ಉದ್ದಕ್ಕೂ ಮಾನವೀಯತೆ ಮೆರೆದ ಮಹಾನುಭಾವ ಜಾಕ್ಸನ್'' ಎಂದು ತನ್ನ ಅಹವಾಲಿನಲ್ಲಿ ಅಂತರ್ಜಾಲ ತಾಣವೊಂದು ಜಾಕ್ಸನ್ ರನ್ನು ಬಣ್ಣಿಸಿದೆ.

ಅನಾಥಾಶ್ರಮಗಳಿಗೆ ಜಾಕ್ಸನ್ ಕೋಟ್ಯಾಂತರ ಡಾಲರ್ ಸಹಾಯ ಮಾಡಿದ್ದಾರೆ. ತಮ್ಮ ಕಷ್ಟದ ದಿನಗಳಲ್ಲೂ ಅವರು ನೊಂದವರಿಗೆ ಸಹಾಯ ಮಾಡುವುದನ್ನು ಮರೆಯಲಿಲ್ಲ ಎಂದು ಜಾಕ್ಸನ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮೈಕೇಲ್ ಜಾಕ್ಸನ್ ಅವರಿಗೆ ಮರಣೋತ್ತರ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂಬುದು ಅವರ ಆಗ್ರಹ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada