»   » ಮತ್ತೆ ಡೈನೋಸರ್ ಹಿಡಿದುಕೊಂಡ ಬಂದ ಸ್ಟೀವನ್ ಸ್ಪೀಲ್ಬರ್ಗ್

ಮತ್ತೆ ಡೈನೋಸರ್ ಹಿಡಿದುಕೊಂಡ ಬಂದ ಸ್ಟೀವನ್ ಸ್ಪೀಲ್ಬರ್ಗ್

Posted By:
Subscribe to Filmibeat Kannada
Jurassic Park 4 on the cards
ಡೈನೋಸರ್, ದೈತ್ಯ ಸರೀಸೃಪಗಳು ಅಥವಾ ಮುದ್ದಾಗಿ ಪೆಡಂಭೂತ ಎಂದು ಏನಾದರೂ ಕರೆಯಿರಿ, ತೆರೆ ಮೇಲೆ ಅವುಗಳನ್ನು ನೋಡುವುದೇ ಆನಂದ. ಈ ದೈತ್ಯ ಜೀವಿಗಳ ಕಥೆಯನ್ನು ಆಬಾಲವೃದ್ಧರಿಗೂ ತಲುಪಿಸಿದ ಕೀರ್ತಿ ಸ್ಟೀವನ್ ಸ್ಪೀಲ್ಬರ್ಗ್ ಗೆ ಸಲ್ಲುತ್ತದೆ. ಮೊದಲ ಎರಡು ಜುರಾಸಿಕ್ ಪಾರ್ಕ್ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ ಇತಿಹಾಸ ಸೃಷ್ಟಿಸಿದ ಹಾಲಿವುಡ್ ನ ಶ್ರೇಷ್ಠ ಚಿತ್ರಕರ್ಮಿ. ಈಗ ಮತ್ತೆ ಡೈನೋಸರ್ ಗಳನ್ನು ಹಿಡಿದುಕೊಂಡು ವಿಭಿನ್ನ ಬಗೆಯಲ್ಲಿ ಬೆಳ್ಳಿತೆರೆಯ ಮೇಲೆ ದಾಳಿ ಮಾಡಲು ಸ್ಪೀಲ್ಬರ್ಗ್ ಸಿದ್ಧತೆ ನಡೆಸಿದ್ದಾನೆ.

ಹೌದು ಜುರಾಸಿಕ್ ಪಾರ್ಕ್ 4 ತಯಾರಾಗುತ್ತಿದೆ. ಸಾಹಿತಿ ಮಾರ್ಕ್ ಪ್ರೊಟೊಸೆವಿಚ್ ಜೊತೆ ಸೇರಿ ಕಥೆ ಹೆಣೆಯುತ್ತಿರುವ ಸ್ಟೀಲ್ಬರ್ಗ್ ಪ್ರೇಕ್ಷಕರ ಕುತೂಹಲವನ್ನು ತಣಿಸುವ ತವಕದಲ್ಲಿದ್ದಾರೆ. ಈ ಇಬ್ಬರು ಪ್ರತಿಭಾವಂತ ಈ ಮುಂಚೆ ಕೂಡಾ ವಿಲ್ ಸ್ಮಿತ್ ಹಾಕಿಕೊಂಡು ಓಲ್ಡ್ ಬಾಯ್ ಎಂಬ ಚಿತ್ರ ಮಾಡಲು ಯೋಜನೆಗೆ ಕೈಹಾಕಿದ್ದರು. ನಂತರ ಯಾಕೋ ಅದು ನಿಂತು ಹೋಗಿತ್ತು.

ಮೈಕಲ್ ಕ್ರಿಚ್ಟನ್ ಅವರ ಡೈನೋಸರರ್ಸ್ ಕಾದಂಬರಿ ಆಧಾರದ ಮೇಲೆ ಜುರಾಸಿಕ್ ಪಾರ್ಕ್ ಚಿತ್ರಗಳು ರೂಪುಗೊಂಡಿದೆ. 2001ರಲ್ಲಿ ಬಿಡುಗಡೆಗೊಂಡ ಜುರಾಸಿಕ್ ಪಾರ್ಕ್ 3 ಅನ್ನು ಸ್ಪೀಲ್ಬರ್ಗ್ ಬದಲಿಗೆ ಜೊ ಜಾನ್ ಸ್ಟನ್ ನಿರ್ದೇಶಿಸಿದ್ದರು. ನಾಲ್ಕನೇ ಸರಣಿಯಲ್ಲೂ ಜಾನ್ ತೊಡಗಿಕೊಳ್ಳುವ ಸಾಧ್ಯತೆಗಳು ಕಂಡು ಬಂದಿವೆ.

ಜುರಾಸಿಕ್ ಪಾರ್ಕ್ ಅಂಡ ದ ಲಾಸ್ಟ್ ವರ್ಲ್ಡ್ ಸರಣಿ ಎರಡು ಚಿತ್ರಗಳು ಕ್ರಮವಾಗಿ 915 ಮಿಲಿಯನ್ ಯುಎಸ್ ಡಾಲರ್ ಹಾಗೂ 619 ಯುಎಸ್ ಡಾಲರ್ ಗಳಿಸಿದ್ದವು. ಆದರೆ ಮೂರನೇ ಆವೃತ್ತಿ ಮಾತ್ರ 369 ಮಿಲಿಯನ್ ಯುಎಸ್ ಡಾಲರ್ ಗಳಿಸಿತ್ತು. ಸ್ಪೀಲ್ಬರ್ಗ್ ನ ಡೈರೆಕ್ಟರ್ ಮ್ಯಾಜಿಕ್ ಅಲ್ಲಿ ಮಾಯವಾಗಿತ್ತು.

ಜಾಸ್, ಈಟಿ, ಇಂಡಿಯಾನಾ ಜೊನ್ಸ್, ಎಂಪೈರ್ ಆಫ್ ದ ಸನ್, ಶಿಂಡ್ಲೆರ್ಸ್ ಲಿಸ್ಟ್, ಎಐ, ದ ಟರ್ಮಿನಲ್ ಸೇರಿದಂತೆ ಅನೇಕ ಉತ್ತಮ ಚಿತ್ರಗಳನ್ನು ನೀಡಿರುವ ಸ್ಪೀಲ್ಬರ್ಗ್ ನೂರಕ್ಕೂ ಅಧಿಕ ಪ್ರಶಸ್ತಿಗಳಿಗೆ ನಾಮಾಂಕಿತರಾಗಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಟೆರ್ರಾ ನೋವಾ ಎಂಬ ಟಿವಿ ಸರಣಿ ನಿರ್ಮಾದಲ್ಲಿ ಸ್ಪೀಲ್ಬರ್ಗ್ ಬ್ಯುಸಿಯಾಗಿದ್ದಾರೆ. ಅದು ಮುಗಿದ ಬಳಿಕ ಡೈನೋಗಳ ಜೊತೆ ಆಟ ಆರಂಭ.

English summary
Steven Spielberg is back with Dinosaurs.Though currently 
 he is busy in launching television series 'Terra Nova. He is all set to continue Jurassic Park series. The director of the first two Jurassic Park films is joined with writer Mark Protosevich to bringing back the dinosaurs in Jurassic Park 4.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada