»   » 22 ವರ್ಷ ವಯಸ್ಸಿನ ಸ್ಟಾರ್ ಗಾಯಕನಿಗೆ ಅಂತ್ಯಕ್ರಿಯೆಯ ಚಿಂತೆ!

22 ವರ್ಷ ವಯಸ್ಸಿನ ಸ್ಟಾರ್ ಗಾಯಕನಿಗೆ ಅಂತ್ಯಕ್ರಿಯೆಯ ಚಿಂತೆ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಜಸ್ಟೀನ್ ಬೀಬರ್ ವಿಶ್ವದ ಜನಪ್ರಿಯ ಪಾಪ್ ಗಾಯಕ. ಈತನ ವಯಸ್ಸಿನ್ನೂ 22 ವರ್ಷ, ಈಗಾಗಲೇ ಗೆಳತಿಯರ ಸಾಂಗತ್ಯ, ಜನಪ್ರಿಯತೆಯ ಉತ್ತುಂಗವನ್ನು ಕಂಡಿರುವ ಈತನಿಗೆ ಈಗ ತನ್ನ ಅಂತ್ಯಕ್ರಿಯೆಯ ಬಗ್ಗೆ ಯೋಚಿಸುತ್ತಿದ್ದಾನಂತೆ.

ಪಾಪ್ ಲೋಕದ ದಿಗ್ಗಜರಾದ ಪ್ರಿನ್ಸ್ ಹಾಗೂ ಡೇವಿಡ್ ಬೋಯಿ ಅವರ ನಿಧನದಿಂದ ಸಂಗೀತಲೋಕ ಆಘಾತಕ್ಕೊಳಗಾಗಿದೆ. ನಾನು ನನ್ನ ಅಂತ್ಯಕ್ರಿಯೆ ಬಗ್ಗೆ ಯೋಜನೆ ಹಾಕಿಕೊಳ್ಳಬೇಕಿದೆ ಎಂದು ಬೀಬರ್ ಹೇಳಿಕೊಂಡಿದ್ದಾನೆ.[ವೇಶ್ಯೆ ಜತೆ ಗಾಯಕ ಬೀಬರ್ ಮಲಗಿದ್ನಾ?]

3D Hologram And Solar-Powered Headstone In Justin Bieber's Funeral

ಸರಿ ಸುಮಾರು 180 ಮಿಲಿಯನ್ ಪೌಂಡ್ ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವ ಜಸ್ಟೀನ್ ಬೀಬರ್ ಅವರು ತನ್ನ ವೃತ್ತಿ ಹಾಗೂ ಜೀವನದ ಅಂತಿಮ ಸಮಯ ಸಮೀಪಿಸುತ್ತಿದ್ದಂತೆ ಆಸ್ತಿ ಪಾಸ್ತಿ ದಾನ ಮಾಡುವ ಬಗ್ಗೆ ಕೂಡಾ ಚಿಂತಿಸಿದ್ದಾನಂತೆ.

ಅಂತ್ಯಕ್ರಿಯೆ ನಂತರ ಸೌರಶಕ್ತಿ ಆಧಾರಿತ ಸಮಾಧಿ ಕಲ್ಲು (headstone) ಹಾಗೂ ಸ್ಮರಣ ಫಲಕದಲ್ಲಿ ತನ್ನ ಬಗ್ಗೆ ಹೆಚ್ಚು ಪ್ರದರ್ಶಿಸದೆ, ಅವಿರತವಾಗಿ ವಿಡಿಯೋಗಳು ಓಡುತ್ತಿರಬೇಕು. 3ಡಿ ಹಾಲೋಗ್ರಾಮ್ ಇಮೇಜ್ ನಿರ್ಮಿಸಿಕೊಡುವಂತೆ ಈಗಾಗಲೇ ತಜ್ಞರ ಜೊತೆ ಸಮಾಲೋಚನೆ ನಡೆಸಿರುವ ಮಾಹಿತಿ ಇದೆ. [ಬೀಬರ್ ಹಲ್ಕಾ ಕೆಲಸಕ್ಕೆ ಬಿತ್ತು ಬ್ರೇಕ್]

ನಾನು ಅಳಿದರೂ ನನ್ನ ಸಂಗೀತದ ಮೂಲಕ ಜನ ಮಾನಸದಲ್ಲಿ ನಾನು ಶಾಶ್ವತವಾಗಿ ಉಳಿಯಬೇಕು. ನನ್ನ ಸಮಾಧಿ ಕಲ್ಲು ಕೂಡಾ ಸಂಗೀತ ಹಾಡುತ್ತಿರಬೇಕು ಎಂದು ಜಸ್ಟೀನ್ ಹೇಳಿಕೊಂಡಿದ್ದಾನೆ.

ಜಸ್ಟೀಸ್ ಆಸೆಯನ್ನು ಕಂಡು ಆತನ ಆಪ್ತವಲಯ ಬೆಚ್ಚಿ ಬಿದ್ದಿದೆ. ಮೊದಲಿಗೆ ಇದು ತಮಾಷೆ ಮಾತು ಎಂದು ತಿಳಿದವರು ನಂತರ ತನ್ನ ಬಗ್ಗೆ ಜಸ್ಟೀಸ್ ಯೋಚಿಸಲು ಆರಂಭಿಸಿರುವುದು ಒಳ್ಳೆ ವಿಷಯ ಎಂದು ಹೇಳಿದ್ದಾರೆ.

ಎಲ್ಲಾ ಸಂಗೀತಗಾರರ ಆಶಯದಂತೆ ಜಸ್ಟೀನ್ ಕೂಡಾ ತನ್ನ ಮೆಲುದನಿ ಎಲ್ಲರ ಮೆಚ್ಚುಗೆ ಪಡೆದು ಶಾಶ್ವತವಾಗಿ ಉಳಿಯಲಿ ಎಂದಿದ್ದಾನೆ. ಆದರೆ, ಎಲ್ಲಾ ಓಕೆ, ಈ ವಯಸ್ಸಿನಲ್ಲಿ ಈ ಚಿಂತೆ ಯಾಕೋ ಗೊತ್ತಿಲ್ಲ.

ಜಸ್ಟೀನ್ ಬೀಬರ್ ಯೂಟ್ಯೂಬ್ ಚಾನೆಲ್ ಗೆ ಸರಿ ಸುಮಾರು 23,393,470 ಚಂದಾದಾರರಿದ್ದಾರೆ.

English summary
Justin Bieber, the 22 years old singer and the Baby song hitmaker is so much moved by the death of Prince and David Bowie this year, that he already started planning for his own funeral.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada