»   » ಬಾಂಡ್ ಚಿತ್ರಗಳಿಗೆ ಗುಡ್ ಬೈ ಹೇಳಿದ ಡೇನಿಯಲ್

ಬಾಂಡ್ ಚಿತ್ರಗಳಿಗೆ ಗುಡ್ ಬೈ ಹೇಳಿದ ಡೇನಿಯಲ್

Posted By:
Subscribe to Filmibeat Kannada
Daniel Craig
ಇದುವರೆಗೂ 'ಜೇಮ್ಸ್ ಬಾಂಡ್' ಸರಣಿಯಲ್ಲಿ ಬಂದಂತಹ ಮೂರು ಚಿತ್ರಗಳಲ್ಲಿ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ತಮ್ಮ ಶಕ್ತಿಸಾಮರ್ಥ್ಯಗಳನ್ನು ತೋರಿದ್ದರು. ಈಗವರು ಬಾಂಡ್ ಚಿತ್ರಗಳಿಗೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಅವರು ಬಾಂಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ.

ಕ್ರೇಗ್ ಮೊಟ್ಟ ಮೊದಲ ಬಾರಿಗೆ ಬಾಂಡ್ ಸರಣಿಯ 'ಕ್ಯಾಸಿನೋ ರಾಯಲ್' (2006) ಚಿತ್ರದಲ್ಲಿ ಅಭಿನಯಿಸಿದ್ದರು. ಇದಾದ ಬಳಿಕ 2008ರಲ್ಲಿ ತೆರೆಕಂಡ 'ಕ್ವಾಂಟಮ್ ಆಫ್ ಸೋಲಾಸ್' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ 'ಸ್ಕೈಫಾಲ್' ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರತಿಬಾರಿ ಬಾಂಡ್ ಚಿತ್ರಗಳಲ್ಲಿ ಅಭಿನಯಿಸಿದಾಗಲೂ ಇದರಿಂದ ಹೊರಬೇಕು ಎಂದು ಮನಸ್ಸು ಹಾತೊರೆಯುತ್ತಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ತಾನು 'ಬಾಂಡ್' ಆಗಿ ಕಾಣಿಸಿಕೊಳ್ಳಲಾರೆ ಎಂಬ ದೃಢ ನಿರ್ಧಾರಕ್ಕೆ ಕ್ರೇಗ್ ಬಂದಿದ್ದಾರೆ.

ಈಗಾಗಲೆ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ 'ಸ್ಕೈಫಾಲ್' ಭಾರತದ ಬಾಕ್ಸಾಫೀಸಲ್ಲಿ ಇದುವರೆಗೂ ರು.34.5 ಕೋಟಿ ಗಳಿಸಿದೆ. ಸ್ಯಾಮ್ ಮೆಂಡೀಸ್ ನಿರ್ದೇಶನದ ಈ ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳು, ರೋಮಾಂಚಭರಿತ ಫೈಟ್ಸ್ ಪ್ರೇಕ್ಷಕರ ಮನ ಸೂರೆಗೊಂಡಿವೆ. (ಏಜೆನ್ಸೀಸ್)

English summary
Hollywood star Daniel Craig, who has played super spy in three "James Bond" movies, wants to quit the franchise, but film bosses won't let him
Please Wait while comments are loading...