For Quick Alerts
  ALLOW NOTIFICATIONS  
  For Daily Alerts

  ನಟರು ಕ್ಷುಲ್ಲಕ, ಸುಮ್ಮನೆ ಅವರಿಗೆ ಹೆಚ್ಚು ಗೌರವ ಕೊಡಲಾಗುತ್ತಿದೆ: ಪ್ರಿಯಾಂಕಾ ಚೋಪ್ರಾ

  |

  ನಟ, ನಟಿಯರಿಗೆ ಭಾರತದಲ್ಲಿ ದೊಡ್ಡ ಗೌರವ ಧಕ್ಕುತ್ತದೆ. ವಿದೇಶಗಳಲ್ಲಿಯೂ ಸಹ ನಟ-ನಟಿಯರು ರಾಜಕಾರಣಿಗಳಿಂದಲೂ ದೊಡ್ಡ ಸೆಲೆಬ್ರಿಟಿಗಳು. ಆ ಸ್ಟೇಟಸ್ ಅವರು ಚಿತ್ರರಂಗದ ಸೆಲೆಬ್ರಿಟಿಗಳು ಎಂಜಾಯ್ ಮಾಡುತ್ತಾರೆ.

  ಆದರೆ ನಟಿ ಪ್ರಿಯಾಂಕಾ ಚೋಪ್ರಾ ಹೇಳುತ್ತಿರುವುದೇ ಬೇರೆ. ನಟ-ನಟಿಯರು ಕ್ಷುಲ್ಲಕ, ಅವರು ಹೆಚ್ಚಿಗೇನು ಮಾಡುವುದಿಲ್ಲ. ಸುಮ್ಮನೆ ಅವರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸಲಾಗುತ್ತಿದೆ ಎಂದಿದ್ದಾರೆ.

  ಹಾಲಿವುಡ್‌ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ''ನಟರಿಗೆ ನಾವು ಹೆಚ್ಚು ಗೌರವ, ಪ್ರಾಶಸ್ತ್ಯ ನೀಡುತ್ತೇವೆ. ಅಸಲಿಗೆ ಅವರು ಏನೂ ಮಾಡುವುದಿಲ್ಲ'' ಎಂದಿದ್ದಾರೆ. ತಮ್ಮ ಹೇಳಿಕೆಯನ್ನು ಇನ್ನಷ್ಟು ವಿಸ್ತರಿಸಿರುವ ಪ್ರಿಯಾಂಕಾ, ''ನಟರು ಬೇರೆ ಯಾರೊ ಬರೆದ ಚಿತ್ರಕತೆಗೆ ತಕ್ಕಂತೆ ನಟಿಸುತ್ತಾರೆ. ಬೇರೆಯವರು ಬರೆದ ಸಂಭಾಷಣೆ ಒಪ್ಪಿಸುತ್ತಾರೆ. ಕೋರಿಯೋಗ್ರಾಫರ್‌ಗಳು ಹೇಳಿದ ಹಾಗೆ ನೃತ್ಯ ಮಾಡುತ್ತಾರೆ. ಯಾರೋ ಹಾಡಿದ ಹಾಡಿಗೆ ತುಟಿ ಕದಲಿಸುತ್ತೇವೆ. ನಮ್ಮ ಉಡುಪು ಡಿಸೈನ್ ಮಾಡುವುದು ಬೇರೆಯವರು, ನಾವು ಸುಂದರವಾಗಿ ಕಾಣುವಂತೆ ಮೇಕಪ್, ಹೇರ್‌ಸ್ಟೈಲ್ ಮಾಡುವುದು ಯಾರೋ'' ಆದರೆ ಜನ ಹೊಗಳುವುದು ನಟರನ್ನು ಮಾತ್ರ. ನಟಿಯಾಗಿ ನಾನು ಮಾಡುತ್ತಿರವುದು ಏನು?'' ಎಂದು ಪ್ರಿಯಾಂಕಾ ಪ್ರಶ್ನೆ ಮಾಡಿದ್ದಾರೆ.

  ''ನಟ ಅಥವಾ ನಟಿ ಆಕೆಯ ಸ್ವಂತದ್ದು ನೀಡುವುದು ನಟಿಸುವಾಗ ಮಾತ್ರ. ನಿರ್ದೇಶಕ ಆಕ್ಷನ್ ಹೇಳಿದಾಗ ಚಿತ್ರಕತೆಯ ಪಾತ್ರಕ್ಕೆ ಜೀವ ತುಂಬುವ ಕಾರ್ಯವನ್ನು ಮಾಡುತ್ತಾರೆ ಅಷ್ಟೆ. ನಟಿಯಾಗಿ ನಾನು ಆಕ್ಷನ್ ಹಾಗೂ ಕಟ್ ನಡುವೆ ಮಾತ್ರ ನನ್ನ ಪ್ರತಿಭೆಯನ್ನು ನೀಡುತ್ತಿರುತ್ತೇನೆ. ನಟಿಯಾಗಿ ನನ್ನ ಪಾತ್ರ ಬಹಳ ಕಿರಿದಾಗಿರುತ್ತದೆ'' ಎಂದಿದ್ದಾರೆ.

  ಆದರೆ ನಟ ಅಥವಾ ನಟಿಯ ಮೇಲೆ ಒತ್ತಡವೂ ಹೆಚ್ಚಿಗೆ ಇರುತ್ತದೆ, ಹಾಗಾಗಿಯೇ ಎಲ್ಲರೂ ನಟರಾಗಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಇಲ್ಲಿ ಕೆಲವು ಅದ್ಭುತ ತಂತ್ರಜ್ಞರ ಜೊತೆ ಕೆಲಸ ಮಾಡುವ ಅವಕಾಶ ನನಗೆ ದೊರೆಯಿತು. ಬಾಲಿವುಡ್‌ನಲ್ಲಿ ಸಹ ಹಲವು ನಿರ್ದೇಶಕರು ನನ್ನನ್ನು ಉತ್ತಮ ನಟಿಯನ್ನಾಗಿ ತಿದ್ದಿದರು ಎಂದು ಹೇಳಿಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ.

  English summary
  Actress Priyanka Chopra said actors do nothing still we giving so much credit to them. She said actors life is between action and cut.
  Thursday, November 17, 2022, 23:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X