»   » ವಯಸ್ಸಾದ ಬಗ್ಗೆ ಸಂಭ್ರಮ ವ್ಯಕ್ತಪಡಿಸುವ ಅಪರೂಪದ ನಟಿ

ವಯಸ್ಸಾದ ಬಗ್ಗೆ ಸಂಭ್ರಮ ವ್ಯಕ್ತಪಡಿಸುವ ಅಪರೂಪದ ನಟಿ

By: ಸೋನು ಗೌಡ
Subscribe to Filmibeat Kannada

ಎಲ್ಲಾ ಸ್ಟಾರ್ ನಟಿಯರು ತಮಗೆ ವಯಸ್ಸಾದರೆ, ತುಂಬಾನೇ ಬೇಸರಪಟ್ಟುಕೊಳ್ಳುತ್ತಾರೆ. ಆದರೆ ಇವರು ಮಾತ್ರ ಅದಕ್ಕೆ ತದ್ವಿರುದ್ಧ. ತಮಗೆ ವಯಸ್ಸಾಗಿದೆ ಅನ್ನೋದನ್ನ ತುಂಬಾನೇ ಸಂಭ್ರಮದಿಂದ ಹೇಳಿಕೊಳ್ಳುತ್ತಾರೆ.

ಹೌದು ಹಾಲಿವುಡ್ ನಟಿ ಹೆಲೆನ್ ಮಿರ್ರೆನ್ ಅವರು ತಮಗೆ ವಯಸ್ಸಾದ ಬಗ್ಗೆ ತುಂಬಾ ಸಂತೋಷ ಪಡುತ್ತಾರೆ. 70 ಹರೆಯದ ಆಸ್ಕರ್ ವಿಜೇತ ನಟಿ ಹೆಲೆನ್ ಅವರು ಇದೀಗ ವಯಸ್ಸಾಗಿದೆ ಅಂತ ಬಹಳ ಸಂಭ್ರಮದಿಂದ ತೇಲಾಡುತ್ತಿದ್ದಾರೆ.[ಮತ್ತೆ ಬಿಕಿನಿಯಲ್ಲಿ ಮಾಜಿ ಬಾಂಡ್ ಗರ್ಲ್]

Actress Dame Helen Mirren talks about feeling her age at 70

ಅಂದಹಾಗೆ ಹೆಲೆನ್ ಅವರು ತರುಣಿಯಾಗಿದ್ದ ಸಂದರ್ಭದಲ್ಲಿ ಅವರಿಗೆ 'ಸೆಕ್ಸ್ ಸಿಂಬಲ್' ಎಂಬ ಹಣೆಪಟ್ಟಿ ಇತ್ತಂತೆ. ವಯಸ್ಸಾಗುತ್ತಾ ಹೋದಂತೆ ಕ್ರಮೇಣ ಈ ಹಣೆಪಟ್ಟಿ ಕಡಿಮೆಯಾಗುತ್ತಾ ಹೋಗುತ್ತಿದೆ. ಇನ್ನು ಶಾಶ್ವತವಾಗಿ ಹೋಗುತ್ತದೆ ಎಂದು ಖುಷಿ ಪಡುತ್ತಾರೆ ನಟಿ ಹೆಲೆನ್ ಮಿರ್ರೆನ್ ಅವರು.

Actress Dame Helen Mirren talks about feeling her age at 70

ಇವರು ಎಲಿಜಬೆತ್ ಎಂಬ ಸಿನಿಮಾ ಮತ್ತು ಧಾರಾವಾಹಿ ಸೀರಿಸ್ ನಲ್ಲಿ, ಮತ್ತು 'ದ ಕ್ವೀನ್', 'ಡೀಪ್ ಥಾಟ್', 'ದ ಗಾರ್ಡಿಯನ್' ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದರು.

Actress Dame Helen Mirren talks about feeling her age at 70

ಇವರಿಗೆ ಆಸ್ಕರ್ ಪ್ರಶಸ್ತಿ ಸೇರಿದಂತೆ 'ಗೋಲ್ಡನ್ ಗ್ಲೋಬ್', ಹಾಗೂ 'ಅಕಾಡಮಿ ಪ್ರಶಸ್ತಿ' ಮುಂತಾದವುಗಳು ಲಭಿಸಿವೆ. ಇವರ 'ದ ಲಾಸ್ಟ್ ಸ್ಟೇಷನ್' ಸಿನಿಮಾ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು.

English summary
Veteran Hollywood Actress Dame Helen Mirren talks about feeling her age at 70. Actress Dame Helen Mirren feels good about her age.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada