»   » ಮಗಳ ಪರಸಂಗಕ್ಕೆ ಬೇಸತ್ತು ತಂದೆ ತಾಯಿ ವಿಚ್ಛೇದನ

ಮಗಳ ಪರಸಂಗಕ್ಕೆ ಬೇಸತ್ತು ತಂದೆ ತಾಯಿ ವಿಚ್ಛೇದನ

Posted By: ರವಿಕಿಶೋರ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ಮಗಳು ಮಾಡಿದ ತಪ್ಪಿಗೆ ತಂದೆ ತಾಯಿ ದೂರವಾಗುತ್ತಿರುವ ವಿಚಿತ್ರ, ವಿಸ್ಮಯ ಘಟನೆ ಇದು. ಅವರಿಬ್ಬರದ್ದೂ 27 ವರ್ಷಗಳ ಸುದೀರ್ಘ ದಾಂಪತ್ಯ ಜೀವನ. ಇಷ್ಟಕ್ಕೂ ಮಗಳು ಮಾಡಿದ ತಪ್ಪೇನೆಂದರೆ ಒಬ್ಬ ಪ್ರೇಮಿಗೆ ಕೈಕೊಟ್ಟು ಮತ್ತೊಬ್ಬನ ಸುತ್ತಾಡಿದ್ದು. ಎಂಥಹಾ ವಿಚಿತ್ರ ಅಲ್ಲವೆ? ಪಾಪ ಇದರಲ್ಲಿ ಗಂಡನದೇನು ತಪ್ಪು?

  ಅದು ಏನು ಕತೆನೋ ಏನೋ ಒಟ್ಟಿನಲ್ಲಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ. ಈಕೆಯ ಹೆಸರು ಕ್ರಿಸ್ಟೀನ್ ಸ್ಟೀವರ್ಟ್. ಹಾಲಿವುಡ್ ನ ಜನಪ್ರಿಯ ತಾರೆ. ಟ್ವಿಲೈಟ್ ಸಾಗಾ, ಪ್ಯಾನಿಕ್ ರೂಮ್, ಇನ್ ದ ಲ್ಯಾಂಡ್ ಆಫ್ ವುಮೆನ್, ದಿ ಮೆಸೆಂಜರ್ಸ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಈಕೆ ಮಾಡಿದ ತಪ್ಪೇನೆಂದರೆ ಚಲನಚಿತ್ರ ನಿರ್ದೇಶಕ ರೋಬರ್ಟ್ ಪ್ಯಾಟಿಸನ್ ಎಂಬ ಸಹನಟನ ಜೊತೆ ಡೇಟಿಂಗ್ ಮಾಡುತ್ತಿದ್ದಳು. ಬಳಿಕ ಆತನಿಗೆ ಕೈಕೊಟ್ಟು 'Snow White and the Huntsman' ಚಿತ್ರದ ನಿರ್ದೇಶಕ ರುಪರ್ಟ್ ಸ್ಯಾಂಡರ್ಸ್ ಜೊತೆ ಕಾಣಿಸಿಕೊಂಡಿದ್ದಾಳೆ.

  ಆತನೊಂದಿಗಿನ ಫೋಟೋಗಳು ಲೀಕ್ ಆಗಿವೆ. ಇದನ್ನು ಕಂಡ ಈಕೆಯ ತಾಯಿ ಗರಂ ಆಗಿದ್ದಾರೆ. ತಮ್ಮ ಸಂಸಾರದಲ್ಲಿ ಹೊಂದಾಣಿಕೆ ಇಲ್ಲ ಎಂದು ಈಕೆ ವಿವಾಹ ವಿಚ್ಛೇದನಕ್ಕೆ ಮೊರೆ ಹೋಗಿದ್ದಾರೆ. ಸ್ವತಃ ಕ್ರಿಸ್ಟೀನ್ ತಾಯಿ ಜೂಲೀಸ್ ಸ್ಟೀವರ್ಟ್ ಕೋರ್ಟ್ ಮೆಟ್ಟಿಲೇರಿದ್ದಾರೆ.

  ತನ್ನ ಗಂಡ ಜಾನ್ ಸ್ಟೀವರ್ಟ್ ಜೊತೆ ಬಾಳಲು ಸಾಧ್ಯವಾಗುತ್ತಿಲ್ಲ ಎಂದು ಜೂಲೀಸ್ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರು ಬೇರ್ಪಡಲು ಮುಂದಾಗಿದ್ದಾರೆ. ಸದ್ಯಕ್ಕೆ ಕ್ರಿಸ್ಟೀನ್ ಲಾಸ್ ಏಂಜಲೀಸ್ ನಲ್ಲಿ ವಾಸವಾಗಿದ್ದಾರೆ. ಈಕೆ ಇನ್ನೂ 22ರ ಹರೆಯದ ಚೆಲುವೆ. ಪ್ರಸ್ತುತ ಇವರಿಬ್ಬರ ವಿವಾಹ ವಿಚ್ಛೇದನ ಫೈಲು ಕಂಟ್ರಿ ಸುಪೀರಿಯರ್ ಕೋರ್ಟ್ ನಲ್ಲಿದೆ.

  English summary
  Actress Kristen Stewart’s parents are getting divorced. Kristen’s mother, Jules Stewart, filed a divorce petition against John Stewart, who she married 27 years ago. She filed the papers at County Superior Court, here citing irreconcilable differences.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more