For Quick Alerts
  ALLOW NOTIFICATIONS  
  For Daily Alerts

  ಮಾಜಿ ಪತಿಗೆ 1200 ಕೋಟಿ ವಿಚ್ಛೇಧನ ಪರಿಹಾರ ಕೊಡಲು ಒಪ್ಪಿಕೊಂಡ ಗಾಯಕಿ

  |

  ಹಾಲಿವುಡ್‌ ನ ಖ್ಯಾತ ಗಾಯಕಿ ಪತಿಯೊಂದಿಗೆ ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದು, ಪರಿಹಾರವಾಗಿ 1200 ಕೋಟಿ ರೂಪಾಯಿಗಳನ್ನು ಕೊಡಲು ಒಪ್ಪಿಗೆ ನೀಡಿದ್ದಾರೆ.

  ಆಸ್ಕರ್ ವಿಜೇತ ಗಾಯಕಿ ಅಡಿಲೆ ಹಾಗೂ ವಿಶ್ವವಿಖ್ಯಾತ ಆಪಲ್‌ ಸಂಸ್ಥೆಯ 'ಡ್ರಾಪ್ 4 ಡ್ರಾಪ್' ಚಾರಿಟಿಯ ಸಿಇಒ ಆಗಿರುವ ಸಿಮೊನ್ ತಮ್ಮ ವಿವಾಹವನ್ನು ಮುರಿದುಕೊಳ್ಳುತ್ತಿದ್ದು, ಸಿಮೋನ್‌ಗೆ 1200 ಕೋಟಿ ರೂಪಾಯಿ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಗಾಯಕಿ ಅಡಿಲೆ.

  ಅಡಿಲೆ ಹಾಗೂ ಸಿಮನ್ 2011 ರಲ್ಲಿ ಪ್ರೀತಿಗೆ ಬಿದ್ದರು. 2012 ರಲ್ಲಿ ಈ ದಂಪತಿಗೆ ಗಂಡು ಮಗುವಾಯಿತು. ಈ ಜೋಡಿಯು 2016 ರಲ್ಲಿ ಸರಳವಾದ ಸಮಾರಂಭದಲ್ಲಿ ವಿವಾಹವಾದರು. ನಂತರ ಮೂರೇ ವರ್ಷಕ್ಕೆ 2019 ರಲ್ಲಿ ಪರಸ್ಪರ ದೂರಾಗುತ್ತಿರುವುದಾಗಿ ಘೋಷಿಸಿದರು.

  2019 ರಲ್ಲಿಯೇ ಅಡಿಲೆ ವಿವಾಹ ವಿಚ್ಛೇಧನಕ್ಕೆ ಅರ್ಜಿ ಹಾಕಿದರು. ಅರ್ಜಿ ಇನ್ನೂ ನ್ಯಾಯಾಲಯದ ಮುಂದಿದೆ ಈ ನಡುವೆಯೇ ಸಿಮನ್‌ ಗೆ ವಿಚ್ಛೇಧನದ ಪರಿಹಾರವಾಗಿ 1200 ಕೋಟಿ (171 ಮಿಲಿಯನ್ ಡಾಲರ್) ಹಣ ನೀಡಲು ಒಪ್ಪಿಕೊಂಡಿದ್ದಾರೆ ಅಡಿಲೆ.

  ಇಬ್ಬರೂ ಪ್ರಸ್ತುತ ಲಾಸ್ ಏಂಜಲಿಸ್‌ನಲ್ಲಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದು, ಮಗನನ್ನು ಬೆಳೆಸುವ ಜವಾಬ್ದಾರಿಯನ್ನು ಸಮಾನವಾಗಿ ಸ್ವೀಕರಿಸುವುದಾಗಿ ಹೇಳಿದ್ದಾರೆ.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

  ಅಡಿಲೆ ಹಾಲಿವುಡ್‌ ನ ಖ್ಯಾತ ಗಾಯಕಿ. 'ಸ್ಟೈಫಾಲ್' ಬಾಂಡ್ ಸಿನಿಮಾದ ಹಾಡಿಗಾಗಿ ಆಸ್ಕರ್ ಸಹ ಪಡೆದಿದ್ದಾರೆ. ಗ್ರಾಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಅಡಿಲೆ ಗೆ ದೊರಕಿವೆ.

  English summary
  Hollywood singer Adele finalized 171 million dolor divorce settlement to her ex husband Simon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X