»   » ಒಬಾಮಾಗೆ ಥಂಬ್ಸ್ ಅಪ್ ಹೇಳಿದ ನೀಲಿ ಚಿತ್ರೋದ್ಯಮ

ಒಬಾಮಾಗೆ ಥಂಬ್ಸ್ ಅಪ್ ಹೇಳಿದ ನೀಲಿ ಚಿತ್ರೋದ್ಯಮ

Posted By:
Subscribe to Filmibeat Kannada
ಇದೇ ವರ್ಷ ನವೆಂಬರ್ 6ರಂದು ಅಮೆರಿಕಾದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಕಾವು ಏರುತ್ತಿದೆ. ಅಮೆರಿಕಾದ 44ನೇ ಅಧ್ಯಕ್ಷರಾಗಿರುವ ಡೆಮಾಕ್ರೆಟಿಕ್ ಪಕ್ಷದ ಬಾರಾಕ್ ಹುಸೇನ್ ಒಬಾಮಾ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಿಟ್ ರೋಮ್ನಿ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದೆ. ಇಡೀ ಜಗತ್ತೇ ಎದುರು ನೋಡುತ್ತಿರುವ ಈ ಚುನಾವಣೆಯ ಫಲಿತಾಂಶ ಡಿಸೆಂಬರ್ 17ರಂದು ಪ್ರಕಟವಾಗಲಿದೆ.

ಇವರಿಬ್ಬರ ನಡುವಿನ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ ಲಭಿಸಲಿದೆ? ಸದ್ಯಕ್ಕೆ ಇದು ಮಿಲಿಯನ್ ಡಾಲರ್ ಪ್ರಶ್ನೆ. ತೀವ್ರ ಸಂಕಷ್ಟಕ್ಕೀಡಾಗಿದ್ದ ಅಮೆರಿಕಾದ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಒಬಾಮಾ ಅನೇಕ ಸಾಹಸಗಳನ್ನು ಮಾಡುತ್ತಿರುವ ಬರಾಕ್ ಒಬಾಮಾ ಈ ಬಾರಿ ಗೆಲ್ಲುವುದು ಅಷ್ಟು ಸುಲಭವೇನೂ ಅಲ್ಲ. ಅಮೆರಿಕನ್ನರ ಮನಸು ಗೆಲ್ಲಲು ಯತ್ನಿಸುತ್ತಿರುವ ಮಿಟ್ ರೋಮ್ನಿ ಭರವಸೆಗಳ ಮಹಾಪೂರವನ್ನೇ ಹರಿಯಬಿಟ್ಟಿದ್ದಾರೆ.

ಆದರೆ, ಮಿಟ್ ರೋಮ್ನಿ ಅವರಿಗೆ ಅವರು ಹರಿಯಬಿಟ್ಟಿರುವ ಕೆಲ ಭರವಸೆಗಳಿಂದಾಗಿ ಅವರು ಒಂದಿಡೀ ಕ್ಷೇತ್ರದ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಅದೇ ನೀಲಿ ಚಿತ್ರ ನಿರ್ಮಾಣ ಉದ್ಯಮ. ನೀಲಿ ಚಿತ್ರಗಳಲ್ಲಿ ನಟಿಸುತ್ತಿರುವ ನಟನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ರೋಮ್ನಿ ಮೇಲೆ ಸಿಡಿದೆದ್ದಿದ್ದು, ತಾವು ಒಬಾಮಾಗೇ ಮತ ಹಾಕುವುದಾಗಿ ಹೇಳಿ ರೋಮ್ನಿ ಮೈಯಲ್ಲಿ ಚಳಿ ಹುಟ್ಟುವ ಹಾಗೆ ಮಾಡಿದ್ದಾರೆ.

ಲಿಬರಲ್ ಮನೋಭಾವ ಹೊಂದಿದ್ದ ಬರಾಕ್ ಒಬಾಮಾ ನೀಲಿ ಚಿತ್ರೋದ್ಯಮದ ಡಾರ್ಲಿಂಗ್ ಆಗಿದ್ದಾರೆ. ಅವರಿಗೆಲ್ಲ ಇವರು ಸಖತ್ ಪಾಪ್ಯೂಲರ್. ಆದರೆ, ರೋಮ್ನಿ ಮಾತ್ರ ನೀಲಿ ಚಿತ್ರೋದ್ಯಮದ ವಿರೋಧ ಕಟ್ಟಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರು ಅಮೆರಿಕಾದ ಮಡಿವಂತಿಕೆಯ ಜನರಿಗೆ ನೀಡಿರುವ ಭರವಸೆ. ಅದೇನೆಂದರೆ, ತಾನು ಚುನಾವಣೆಯಲ್ಲಿ ಗೆದ್ದುಬಂದರೆ, ಅಶ್ಲೀಲತೆಗೆ ಕಡಿವಾಣ ಹಾಕುವ ಕಾನೂನನ್ನು ಉಲ್ಲಂಘಿಸುತ್ತಿರುವ ನೀಲಿ ಚಿತ್ರಗಳ ನಿರ್ಮಾಪಕರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ಎಕ್ಸ್‌ಬಿಐಝಡ್ ವೆಬ್ ಸೈಟ್, ನೀಲಿ ಚಿತ್ರದಲ್ಲಿ ತೊಡಗಿಕೊಂಡಿರುವ ಜನರಿಗೆ ಒಂದು ಪ್ರಶ್ನೆಯನ್ನು ಮುಂದಿಟ್ಟಿತ್ತು. ಅದು "ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯನ್ನು ಬೆಂಬಲಿಸುತ್ತೀರಿ?" ಈ ಸಮೀಕ್ಷೆಯಲ್ಲಿ ಶೇ.68ರಷ್ಟು ಜನರು ಬರಾಕ್ ಒಬಾಮಾಗೆ ಮತ ಹಾಕುವುದಾಗಿ ಹೇಳಿದ್ದರೆ, ಶೇ.13ರಷ್ಟು ಜನರು ಮಾತ್ರ ರೋಮ್ನಿಯನ್ನು ಬೆಂಬಲಿಸಿದರು. ಶೇ.14ರಷ್ಟು ಬೇರೆ ಯಾರಿಗೋ ವೋಟು ಹಾಕುವುದಾಗಿ ಹೇಳಿದ್ದರೆ, ಶೇ.5ರಷ್ಟು ಜನರು ಇದರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಅಂದ ಹಾಗೆ, ಅಮೆರಿಕಾದಲ್ಲಿ ನೀಲಿ ಚಿತ್ರ ನೋಡುವವರ ಡಾರ್ಲಿಂಗ್ ಆಗಿರುವ, ಭಾರತದಲ್ಲಿ ಬಿಗ್ ಬಾಸ್ 5ರಲ್ಲಿ ಭಾಗವಹಿಸಿ ಅರ್ಧದಲ್ಲಿ ಜಾಗ ಖಾಲಿ ಮಾಡಿದ, ನಂತರ ಜಿಸ್ಮ್2ನಲ್ಲಿ ಮೈಬಿಚ್ಚಿ ನಟಿಸಿ ರಸಿಕರ ಮೈಬೆಚ್ಚಗಾಗಿಸಿದ, ಅಮೆರಿಕದ ನಾಗರಿಕಳಾಗಿರುವ ಮಾದಕ ನಟಿ ಸನ್ನಿ ಲಿಯೋನ್ ಯಾರಿಗೆ ಮತ ಹಾಕಲಿದ್ದಾರೆ? [ಕವನ : ಒಬಾಮಾ Vs ರೋಮ್ನಿ]

English summary
United States Presidential election 2012 is hotting up and there is neck-to-neck competition between present President Barack Obama and Republican candidate Mitt Romney. Adult industry prefers Obama to Romney. The election is on 6th November, 2012.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada