»   » ಕಾಜೋಲ್, ಕರೀನಾ ಬಗ್ಗೆ ಅಲಿಯಾ ಭಟ್ ಹೇಳಿದ್ದೇನು?

ಕಾಜೋಲ್, ಕರೀನಾ ಬಗ್ಗೆ ಅಲಿಯಾ ಭಟ್ ಹೇಳಿದ್ದೇನು?

Posted By:
Subscribe to Filmibeat Kannada
Aliya Bhatt
ಬಾಲಿವುಡ್ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಮಹೇಶ್ ಭಟ್ ಮಗಳು ಅಲಿಯಾ ಭಟ್ ಬಾಲಿವುಡ್ ಚಿತ್ರರಂಗಕ್ಕೆ ನಟಿಯಾಗಿ ಬಲಗಾಲಿಟ್ಟು ಬಂದಿದ್ದಾರೆ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಸಿನಿಮಾ 'ಸ್ಟೂಡೆಂಟ್ ಆಫ್ ಇಯರ್' ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿರುವ ಅಲಿಯಾ, ಮಾಧ್ಯಮದವರಿಂದ ನಿರೀಕ್ಷಿತ ಪ್ರಶ್ನೆ ಎದುರಿಸಿದ್ದಾರೆ. ಅದಕ್ಕೆ ಅಲಿಯಾ ಮಾರ್ಮಿಕವಾಗಿಯೇ ಉತ್ತರಿಸಿದ್ದಾರೆ.

ಕಾಜೋಲ್, ಕರೀನಾ ಕಪೂರ್ ಹಾಗೂ ರಾಣಿ ಮುಖರ್ಜಿ ಅವರೆಲ್ಲರೂ ಕರಣ್ ಜೋಹರ್ ಚಿತ್ರದ ಮೂಲಕ ಬಾಲಿವುಡ್ ಜಗತ್ತಿಗೆ ಪರಿಚಯವಾದವರು. ಎಲ್ಲರೂ ಈಗ ಸಾಕಷ್ಟು ಜನಪ್ರಿಯ ತಾರೆಯರು. ಹೀಗಿರುವಾಗ ಅದೇ ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ಇಯರ್' ಚಿತ್ರದ ಮೂಲಕ ಬರುತ್ತಿರುವ ಅಲಿಯಾ ಕೂಡ ಆ ಮೇರು ತಾರೆಯರ ಹಾದಿಯಲ್ಲೇ ಸಾಗುವರೇ ಎಂಬುದು ಅಲಿಯಾಗೆ ಎದುರಾಗಿರುವ ಪ್ರಶ್ನೆ!

ಆ ಕುರಿತು ಮಾತನಾಡಿರುವ ಅಲಿಯಾ ಭಟ್ "ಕಾಜೋಲ್, ಕರೀನಾ ಹಾಗೂ ರಾಣಿ ಮುಖರ್ಜಿಯವರ ಸಾಧನೆಯನ್ನು ನಾನು ತಲುಪುವುದು ಕಷ್ಟ. ನಾನು ಅಥವಾ ಇನ್ಯಾರೇ ಹೊಸ ನಟಿಯರು ಕರಣ ಸಿನಿಮಾ ಮೂಲಕ ಬಾಲಿವುಡ್ ಚಿತ್ರೋದ್ಯಮಕ್ಕೆ ಬಂದರೂ ಈ ಮೇರು ನಟಿಯರ ಸಾಲಿಗೆ ಸೇರುವುದು ಕಷ್ಟದ ಮಾತೇ ಸರಿ. ಅದಕ್ಕೆ ಸಾಕಷ್ಟು ಪರಿಶ್ರಮ ಹಾಗೂ ಪ್ರತಿಭೆಯ ಅಗತ್ಯವಿದೆ. ಅದನ್ನು ಸಾಧಿಸುವ ದಾರಿಯೂ ಸಾಕಷ್ಟು ದೂರವಿದೆ.

ಕರಣ್ ಜೋಹರ್ ಕೂಡ ನನ್ನ ಉತ್ತಮ ಭವಿಷ್ಯದ ಬಗ್ಗೆ ಯೋಚಿಸಿಯೇ ನನಗೆ ಈ ಸಿನಿಮಾದ ಆಫರ್ ನೀಡಿದ್ದಾರೆ. ಈ ಅವಕಾಶವನ್ನು ನಾನು ನನ್ನಿಂದಾದಷ್ಟು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದೇನೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸರ್ವ ರೀತಿಯಲ್ಲೂ ಪ್ರಯತ್ನಿಸಿದ್ದೇನೆ. ಈ ಚಿತ್ರದ ಮೂಲಕ ನನ್ನ ಆತ್ಮವಿಶ್ವಾಸ ಇಮ್ಮಡಿಯಾಗಿದೆ. ಮುಂದೆ ಇನ್ನೂ ಹೆಚ್ಚಿನ ಉತ್ತಮ ನಟನೆಯ ಚಿತ್ರಗಳನ್ನು ಕೊಡಲಿದ್ದೇನೆ" ಎಂದಿದ್ದಾರೆ. (ಏಜೆನ್ಸೀಸ್)

English summary
Aliya Bhatt, daughter of Bollywood famous director and producer acted in the movie of Karan Johar upcoming movie 'Student of Year'. She opined for a question that even though she or any new comer comes through Karan Johar movies, they can't become like Kajol, Kareena and Rani Mukherjee.
 
Please Wait while comments are loading...