For Quick Alerts
  ALLOW NOTIFICATIONS  
  For Daily Alerts

  ಸೂಪರ್ ಮಾಡೆಲ್ ಜೆಸ್ಸಿ ಜೂನ್ ಶೃಂಗಾರ ರಸಕಾವ್ಯ

  By Prasad
  |
  ಜೆಸ್ಸಿ ಜೂನ್... ಹೆಸರು ಕೇಳಿದ ತಕ್ಷಣ ಗೂಗಲ್ ಪ್ಲಸ್ ಬಳಸುವವರಲ್ಲೆಲ್ಲ ಮಳೆಗಾಲ, ಚಳಿಗಾಲದಲ್ಲಿಯೂ ಬೇಸಿಗೆ ಕಾಲದ ಅನುಭವವಾಗಲು ಪ್ರಾರಂಭಿಸುತ್ತದೆ. ವಯಸ್ಸು ಬರೀ 20 (ಜುಲೈ 29ರಂದು 21ರ ಹರೆಯಕ್ಕೆ ಕಾಲಿಡುತ್ತಿದ್ದಾಳೆ). ಜಗತ್ತಿನ ಎಲ್ಲ ಟಾಪ್ ಮಾಡೆಲ್‌ಗಳ ಹೊಟ್ಟೆಗೆ ಮಾತ್ರವಲ್ಲ ಕಣ್ಣಿಗೆ ಕೂಡ ಕಿಚ್ಚು ಹೊತ್ತಿಕೊಳ್ಳುವಂತೆ ಮಾಡೆಲಿಂಗ್ ಜಗತ್ತನ್ನು ಆಕ್ರಮಿಸಿಕೊಂಡಿದ್ದಾಳೆ.

  34-24-34 ಸ್ಟಾಟಿಸ್ಟಿಕ್ಸ್ ಇರುವ ಸಪೂರ ದೇಹದ ಅಮೆರಿಕದ ರೂಪದರ್ಶಿ ಶೃಂಗಾರ ರಸಧಾರೆ ಉಕ್ಕಿಸುವಂಥ ಕವನ ಬರೆಯು ಕವಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಬಲ್ಲಳು. ಮಾಡೆಲಿಂಗ್ ಮಾಡುತ್ತಲೇ ದುಂಡಗಿರುವ ಜಗತ್ತು ಸುತ್ತವ ಈ ಚೆಲುವಿನರಸಿ, "ನನಗೂ ಸುಂದರ ಕುಚಗಳಿವೆ, ಅವನ್ನು ಯಾವುದೇ ರೀತಿ ಬಳಸಿಕೊಳ್ಳಲು ಯಾವುದೇ ಮುಜುಗರವಿಲ್ಲ" ಎಂದು ಘಂಟಾಘೋಷವಾಗಿ ಸಾರಿ, ಭಾರತದ ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾನಂಥವರಿಗೆ ಭಾರೀ ಪೈಪೋಟಿ ನೀಡುತ್ತಿದ್ದಾಳೆ.

  ಇವಳು ಎಷ್ಟೇ ಫೇಮಸ್ ಆಗಿರಲಿ, ಎಷ್ಟೇ ಅಭಿಮಾನಿಗಳನ್ನು ಇಟ್ಟುಕೊಂಡಿರಲಿ, ಎಷ್ಟೇ ಸೌಂದರ್ಯವನ್ನು ಪ್ರದರ್ಶಿಸುತ್ತಿರಲಿ, ತನ್ನ ಬಗ್ಗೆಯೇ ಟಾಂಟಾಂ ಹೊಡೆದುಕೊಳ್ಳುವಷ್ಟು ಯಾವ ರೂಪದರ್ಶಿಯೂ ಹೊಡೆದುಕೊಳ್ಳುವುದಿಲ್ಲ. ಫೇಸ್‌ಬುಕ್, ಗೂಗಲ್ ಪ್ಲಸ್, ಲಿಂಕ್ಡ್ ಇನ್, ಟ್ವಿಟ್ಟರ್‌ಗಳಲ್ಲಿ ಜೆಜೆ ಎಂದೇ ಖ್ಯಾತಳಾಗಿರುವ ಜೆಸ್ಸಿ ಜೂನ್‌ಳಷ್ಟು ಚಟುವಟಿಕೆಯಿಂದಿರುವ ರೂಪದರ್ಶಿಯನ್ನು ಕಾಣುವುದು ದುರ್ಲಭ.

  "ನಾನು ಅಂತಾರಾಷ್ಟ್ರೀಯ ಖ್ಯಾತಿ ಅಮೆರಿಕದ ಗ್ಲಾಮರ್ ರೂಪದರ್ಶಿ, ಅಂತಾರಾಷ್ಟ್ರೀಯ ಖ್ಯಾತಿ ಬರಹಗಾರ್ತಿ (ಮ್ಯಾಕ್ಸಿಮ್ ಎಸ್ಪನಾಲ್ ಮ್ಯಾಗಜಿನ್‌ಗಾಗಿ ಬರೆಯುತ್ತಾರೆ), ಫೋಟೋಗ್ರಫಿ ನನ್ನ ನೆಚ್ಚಿನ ಹವ್ಯಾಸ, ವಿಶ್ವದ ಎಲ್ಲಾ ಖ್ಯಾತ ಫೋಟೋಗ್ರಾಫರುಗಳ ಆಲ್ಬಂನಲ್ಲಿ ನನ್ನ ಚಿತ್ರಗಳಿವೆ, ಅಮೆರಿಕ ಸುತ್ತುತ್ತಿರುವ ನಾನು ಯಾವಾಗ ಬೇಕಾದರೂ ನಿಮ್ಮ ನಗರಕ್ಕೆ ಬರಬಹುದು, ಬೇಕಿದ್ದರೆ ಈಗಲೇ ಬುಕ್ ಮಾಡಿಕೊಳ್ಳಿ" ಎಂದೆಲ್ಲ ತನ್ನ ಬಗ್ಗೆ ಬರೆದುಕೊಂಡಿದ್ದಾಳೆ ಜೆಸ್ಸಿ.

  ಇಂತಿಪ್ಪ ಜೆಸ್ಸಿ ಜೂನ್ ಈಗ ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾಳೆ. ಅದೇನೆಂದರೆ, ಅಮೆರಿಕದ ರೂಪದರ್ಶಿಯರಿಗಾಗಿ 2012ರ ಡಿಸೆಂಬರ್ 1 ಮತ್ತು 2ರಂದು ಲಾಸ್ ವೆಗಾಸ್‌ನಲ್ಲಿ ವರ್ಕ್‌ಶಾಪ್ ಆಯೋಜಿಸಿದ್ದಾಳೆ. ಅದರಲ್ಲಿ, ಪ್ಲೇಬಾಯ್ ಮುಂತಾದ ರಸಿಕರ ಮ್ಯಾಗಜಿನ್‌ಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿರುವ ಅಮೆರಿಕದ ಉನ್ನತ 9 ಮಾಡೆಲ್‌ಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಕ್ಯಾಮೆರಾ ಕಣ್ಣು ತುಂಬಿಸಿಕೊಳ್ಳಲು ಛಾಯಾಚಿತ್ರಕಾರರ ದಂಡೇ ಅಲ್ಲಿ ನೆರೆಯಲಿದೆ. ಇದು ಅಮೆರಿಕಾದಲ್ಲಿಯೇ ಅತಿ ದೊಡ್ಡ ವರ್ಕ್‌ಶಾಪ್ ಆಗಲಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

  ಗೂಗಲ್ ಪ್ಲಸ್‌ನಲ್ಲಿ 19 ಲಕ್ಷಕ್ಕೂ ಅಧಿಕರ ಸ್ನೇಹಿತರನ್ನು ಸಂಪಾದಿಸಿರುವ ಜೆಸ್ಸಿ ಜೂನ್, ತಾನು ಕೆಲವರನ್ನಾದರೂ ಭೇಟಿಯಾಗಲು ಕಾತುರದಿಂದ ಕಾದಿದ್ದೇನೆ ಎಂದು ಗೂಗಲ್ ಪ್ಲಸ್‌ನಲ್ಲಿ ಬರೆದುಕೊಂಡಿದ್ದಾಳೆ. ಆಗಾಗ ತನ್ನದೇ ಆದ ರೋಚಕ, ಅತಿರೋಚಕ, ವಿಪರೀತ ರೋಚಕ ಚಿತ್ರಗಳನ್ನು ಹರಿಯಬಿಡುವ ಜೆಸ್ಸಿ, ಈ ವರ್ಕ್‌ಶಾಪ್ ಮಾಡಿದ ಮೇಲೆ ಇನ್ನೂ ಏನೇನು ಹರಿಯಬಿಡುತ್ತಾಳೋ ಬಲ್ಲವರಾರು?

  English summary
  American glamor model, international fame writer Jessi June will be conducting a workshop for top models of USA in December 2012. The bold and beautiful model has more than 19 lakh friends on Google+.
  Wednesday, August 8, 2012, 18:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X