»   » ಅವತಾರ್ 2 ನೋಡೋ ಭಾಗ್ಯ ಸದ್ಯಕ್ಕಿಲ್ಲ

ಅವತಾರ್ 2 ನೋಡೋ ಭಾಗ್ಯ ಸದ್ಯಕ್ಕಿಲ್ಲ

Posted By:
Subscribe to Filmibeat Kannada
Avatar 2's release postponed
ಭಾರತದ ಪುರಾಣ ಕತೆಗಳ ರೀಮಿಕ್ಸ್ ನಂತಿದ್ದ ಜಗತ್ತಿನಾದ್ಯಂತ ಸಿನಿಮಾ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ ಅವತಾರ್ ಚಿತ್ರದ ಮುಂದಿನ ಭಾಗ ಸದ್ಯಕ್ಕಂತೂ ತೆರೆಗೆ ಬರುವ ಸಾಧ್ಯತೆ ಇಲ್ಲ.

2009ರಲ್ಲಿ ಅವತಾರ್ 3ಡಿ ಚಿತ್ರವನ್ನು ಆಬಾಲವೃದ್ಧರಾದಿಯಾಗಿ ಎಲ್ಲರೂ ನೋಡಿ ಹೊಗಳಿದ್ದರು. ಅದೇ ಜೋಶ್ ನಲ್ಲಿ ಒಂದೆರಡು ವರ್ಷಗಳಲ್ಲಿ ಅವತಾರ್ 2 ಬೆಳ್ಳಿತೆರೆಗೆ ಅಪ್ಪಳಿಸಲಿದೆ ಎಂಬ ಸುದ್ದಿ ಹೊರಬಿದ್ದಿತ್ತು.

ಆದರೆ, ಸದ್ಯ ನಿರ್ದೇಶಕ ಜೇಮ್ಸ್ ಕೆಮರೂನ್ ನ್ಯೂಜಿಲೆಂಡ್ ಸೇರಿಕೊಂಡಿದ್ದಾರೆ, ಅವತಾರ್ 2 ಚಿತ್ರ ತೆರೆಗೆ ಬರಲು 2015 ತನಕ ಕಾಯಲೇಬೇಕು ಎಂದು ನ್ಯೂಯಾರ್ಕ್ ಟೈಮ್ಸ್ ಜೊತೆ ಟೀ ಟೈಮ್ ನಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಲಾರ್ಡ್ ಆಫ್ ದಿ ರಿಂಗ್ಸ್ ಚಿತ್ರದ ಪೀಟರ್ ಜಾಕ್ಸನ್ ಮಾದರಿಯಲ್ಲೇ ನಡೆಯಲು ಜೇಮ್ಸ್ ಕೆಮರೂನ್ ನಿರ್ಧರಿಸಿದ್ದಾರೆ. ನ್ಯೂಜಿಲೆಂಡ್ ನ ಪೊನೈನಲ್ಲಿ 2500 ಎಕರೆ ವಿಸ್ತೀರ್ಣದ ತೋಟವನ್ನು ಖರೀದಿಸಿದ್ದಾರೆ.

ಈ ಖಾಲಿ ತೋಟದ ಭೂಮಿಯಲ್ಲಿ ಅವತಾರ್ 2 ಹಾಗೂ 3 ಹುಟ್ಟಿ ಬೆಳೆಯಲಿದೆ. ವೆಲ್ಲಿಂಗ್ಟನ್ ನಲ್ಲಿರುವ ಜಾಕ್ಸನ್ ಅವರ ಪ್ರೊಡೆಕ್ಷನ್ ಸ್ಟುಡಿಯೋ ಈ ತೋಟದಿಂದ ಕೇವಲ 15 ನಿಮಿಷ ಪ್ರಯಾಣ ಅಷ್ಟೇ. ಚಿತ್ರಕ್ಕೆ ಬೇಕಾದ ಸ್ಪೆಷಲ್ ಎಫೆಕ್ಟ್ ಎಲ್ಲವನ್ನು ಎಂದಿನಂತೆ ಕ್ಯಾಲಿಫೋರ್ನಿಯಾ ಲ್ಯಾಬ್ ನಲ್ಲಿ ನಡೆಯಲಿದೆ.

ಸ್ಯಾಮ್ ವರ್ಥಿಂಗ್ಟನ್ ಹಾಗೂ ಸಿಗೌರ್ನಿ ವೀವರ್ ಜೋಡಿ ಅವತಾರ್ 2 ಹಾಗೂ 3 ರಲ್ಲೂ ಮುಂದುವರೆಯುವ ಸಾಧ್ಯತೆಯಿದೆ. ಟೈಟಾನಿಕ್', 'ದಿ ಟರ್ಮಿನೇಟರ್', 'ಏಲಿಯನ್ಸ್', 'ಅವತಾರ್'ನಂತಹ ಅದ್ಭುತ ಚಿತ್ರಗಳನ್ನು ಕೊಟ್ಟ ಕೆನಡಿಯನ್ ನಿರ್ದೇಶಕ ಜೇಮ್ಸ್ ಕೆಮೆರಾನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಆದರೆ, ಸ್ಕ್ರಿಪ್ಟ್ ಪಕ್ಕಾ ಆಗುವ ಮೊದಲು ಶೂಟಿಂಗ್ ಶುರು ಮಾಡೋದು ಬೇಡ ಎಂದು ಕೆಮರಾನ್ ನಿರ್ಧರಿಸಿದ್ದಾರೆ.

English summary
Avatar 2's release date has been pushed back to 2015, with director James Cameron reportedly looking to film the sequel near Peter Jackson's production studio in New Zealand.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada