For Quick Alerts
  ALLOW NOTIFICATIONS  
  For Daily Alerts

  ಜೇಮ್ಸ್, ಆರ್‌ಆರ್‌ಆರ್‌, ಕೆಜಿಎಫ್ ರೀತಿಯೇ ಬೆಂಗಳೂರಿನಲ್ಲಿ ಅವತಾರ್ 2 ಅಬ್ಬರ!

  |

  ಜೇಮ್ಸ್ ಕೆಮರಾನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಅವತಾರ್: ದ ವೇ ಆಫ್ ವಾಟರ್ ಅಥವಾ ಅವತಾರ್ 2 ಎಂಬ ಬೃಹತ್ ಅಲೆ ತೆರೆಗೆ ಅಪ್ಪಳಿಸಲು ಕ್ಷಣಗಣನೆ ಆರಂಭಗೊಂಡಿದೆ. ಚಿತ್ರ ಇದೇ ಶುಕ್ರವಾರ ( ಡಿಸೆಂಬರ್ 16 ) ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು ತಿಂಗಳಿಗೂ ಮುನ್ನವೇ ವಿಶ್ವದ ವಿವಿಧೆಡೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿತ್ತು.

  ಇನ್ನು 2009ರಲ್ಲಿ ಬಿಡುಗಡೆಗೊಂಡಿದ್ದ ಅವತಾರ್ ಚಿತ್ರ ಉಂಟುಮಾಡಿದ್ದ ಇಂಪ್ಯಾಕ್ಟ್ ಅವತಾರ್ 2 ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಾಗುವಂತೆ ಮಾಡಿದ್ದು, ಚಿತ್ರದ ಟ್ರೈಲರ್ ಸಿನಿ ರಸಿಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ಚಿತ್ರದ ಟಿಕೆಟ್ ಖರೀದಿಸಲು ವಿಶ್ವದಾದ್ಯಂತ ಸಿನಿ ರಸಿಕರು ಮುಗಿಬಿದ್ದಿದ್ದಾರೆ. ಇನ್ನು ಸಿನಿ ಪ್ರೇಮಿಗಳು ಹೆಚ್ಚಾಗಿ ತುಂಬಿರುವ ಹಾಲಿವುಡ್ ಚಿತ್ರಗಳಿಗೆ ದೊಡ್ಡ ಮಾರ್ಕೆಟ್ ಆಗಿರುವ ಭಾರತದಲ್ಲೂ ಸಹ ಸಿನಿ ರಸಿಕರು ಅವತಾರ್ ದ ವೇ ಆಫ್ ವಾಟರ್ ಚಿತ್ರದ ಟಿಕೆಟ್‌ಗಳನ್ನು ಈಗಾಗಲೇ ಮುಂಗಡ ಬುಕಿಂಗ್ ಮಾಡಿಕೊಳ್ಳಲು ಆರಂಭಿಸಿದ್ದಾರೆ.

  ಬಿಡುಗಡೆಗೆ ಎರಡು ದಿನ ಮಾತ್ರ ಬಾಕಿ ಉಳಿದಿದ್ದು ಟಿಕೆಟ್ ಅಡ್ವಾನ್ಸ್ ಬುಕಿಂಗ್ ಹೆಚ್ಚಾಗುತ್ತಿದೆ. ಇನ್ನು ನಮ್ಮ ಬೆಂಗಳೂರು ನಗರದಲ್ಲಿಯೂ ಅವತಾರ್ ಅಬ್ಬರ ಜೋರಾಗಿದ್ದು ಹಲವು ಪ್ರಾದೇಶಿಕ ಚಿತ್ರಗಳಿಗೂ ಆಗದಷ್ಟು ಅಡ್ವಾನ್ಸ್ ಬುಕಿಂಗ್ ಜರುಗುತ್ತಿದೆ. ಹೀಗೆ ಬುಕಿಂಗ್ ದೊಡ್ಡ ಮಟ್ಟದಲ್ಲಿ ಆಗುತ್ತಿರುವ ಕಾರಣ ನಗರ ವಿವಿಧ ಚಿತ್ರಮಂದಿರಗಳಲ್ಲಿ ಮುಂಜಾನೆ ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ನಗರದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಮಾತ್ರವಲ್ಲದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲೂ ಸಹ ಬೆಳಗ್ಗೆ ಎಂಟು ಗಂಟೆಯ ಒಳಗೆ ಪ್ರದರ್ಶನಗಳನ್ನು ಆರಂಭಿಸಲಾಗುತ್ತಿದ್ದು, ಈ ವಿಚಾರದಲ್ಲಿ ಅವತಾರ್ ಈಗ ಜೇಮ್ಸ್, ಆರ್ ಆರ್ ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳ ಪಟ್ಟಿಯನ್ನು ಸೇರಿದೆ.

  ಅತಿಹೆಚ್ಚು ಮುಂಜಾನೆಯ ಪ್ರದರ್ಶನಗಳು

  ಅತಿಹೆಚ್ಚು ಮುಂಜಾನೆಯ ಪ್ರದರ್ಶನಗಳು

  ಬೆಂಗಳೂರು ನಗರದಲ್ಲಿ ಬಿಡುಗಡೆಯ ದಿನ ಎಂಟು ಗಂಟೆಗೂ ಮುನ್ನ 80ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಪಟ್ಟಿಗೆ ಈಗ ಅವತಾರ್ ದ ವೇ ಆಫ್ ವಾಟರ್ ಕೂಡ ಸೇರ್ಪಡೆಗೊಂಡಿದೆ. ಇಲ್ಲಿಯವರೆಗೂ ಈ ಮೈಲಿಗಲ್ಲನ್ನು ಬೆಂಗಳೂರಿನಲ್ಲಿ ಮುಟ್ಟಿದ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

  * ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್

  * ರಾಜ್‌ಮೌಳಿ ನಿರ್ದೇಶನದ ಆರ್ ಆರ್ ಆರ್

  * ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2

  * ಜೇಮ್ಸ್ ಕೆಮರಾನ್ ನಿರ್ದೇಶನದ ಅವತಾರ್ 2

  ಮೊದಲ ದಿನ 900ಕ್ಕೂ ಹೆಚ್ಚು ಪ್ರದರ್ಶನ ಸಾಧ್ಯತೆ

  ಮೊದಲ ದಿನ 900ಕ್ಕೂ ಹೆಚ್ಚು ಪ್ರದರ್ಶನ ಸಾಧ್ಯತೆ

  ಇನ್ನು ಸದ್ಯಕ್ಕೆ ( ಡಿಸೆಂಬರ್ 14 ) ಬೆಂಗಳೂರಿನಲ್ಲಿ ಅವತಾರ್ ದ ವೇ ಆಫ್ ವಾಟರ್ ಚಿತ್ರಕ್ಕೆ ಮೊದಲ ದಿನ 750ಕ್ಕೂ ಹೆಚ್ಚಿನ ಪ್ರದರ್ಶನಗಳು ಆಯೋಜನೆಗೊಂಡಿದ್ದು ಬಿಡುಗಡೆಗೆ ಇನ್ನೂ ಎರಡು ದಿನಗಳು ಬಾಕಿ ಇರುವುದರಿಂದ ಈ ಸಂಖ್ಯೆ 900 ಅನ್ನು ದಾಟಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು. ಇನ್ನು ಈ ಪ್ರದರ್ಶನಗಳ ಪೈಕಿ 50% ಪ್ರದರ್ಶನಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ.

  ಟಿಕೆಟ್ ರೇಟ್ ದುಬಾರಿ

  ಟಿಕೆಟ್ ರೇಟ್ ದುಬಾರಿ

  ಇನ್ನು ಬೆಂಗಳೂರಿನಲ್ಲಿ ಅವತಾರ್ ದ ವೇ ಆಫ್ ವಾಟರ್ ಚಿತ್ರದ ಟಿಕೆಟ್ ದರವೇನು ಕಡಿಮೆ ಇಲ್ಲ. ಐಮ್ಯಾಕ್ಸ್ 4ಡಿ ಚಿತ್ರಮಂದಿರಗಳಲ್ಲಿ 1250ರಿಂದ 1500 ರೂಪಾಯಿಗಳವರೆಗೂ ಇರುವ ಟಿಕೆಟ್ ದರ ಇತರೆ 3D, IMAX 3D ಹಾಗೂ ಇನ್ನತರೆ ಮಲ್ಟಿಪ್ಲೆಕ್ಸ್‌ಗಳಲ್ಲಿ 280ರಿಂದ 1000 ರೂಪಾಯಿಗಳವರೆಗೂ ಸಹ ಇದೆ. ಇನ್ನು ಸಿಂಗಲ್ ಸ್ಕ್ರೀನ್‌ಗಳಲ್ಲೂ ಸಹ 200 ರೂಪಾಯಿಗಳಿಗೆ ಅವತಾರ್ ದ ವೇ ಆಫ್ ವಾಟರ್ ಟಿಕೆಟ್ ಮಾರಾಟವಾಗ್ತಿವೆ.

  FB Artcles
  English summary
  Avatar 2 will have more than 80 early morning shows in Bengaluru like James and KGF 2. Read on
  Wednesday, December 14, 2022, 18:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X