Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅವತಾರ್' ಸಿನಿಮಾಕ್ಕೆ ಹಿಂದೂ ಧರ್ಮದ ಜೊತೆ ಕನೆಕ್ಷನ್: ನಿರ್ದೇಶಕ ಜೇಮ್ಸ್ ಕ್ಯಾಮರನ್ ಹೇಳಿದ್ದೇನು?
'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದು, ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ಮದಿನ ಭಾರತ ಒಂದರಲ್ಲೇ 40 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.
'ಅವತಾರ್' ಸಿನಿಮಾದಲ್ಲಿ 'ಪ್ಯಾಂಡೊರಾ' ಹೆಸರಿನ ಅದ್ಭುತ ಮಾಯಾಲೋಕ ಸೃಷ್ಟಿಸಿರುವ ನಿರ್ದೇಶಕ ಜೇಮ್ಸ್ ಕ್ಯಾಮರನ್, ಆ ಅದ್ಭುತ ಮಾಯಾಲೋಕದೊಳಕ್ಕೆ ಪ್ರೇಕ್ಷಕನನ್ನು ಕರೆದುಕೊಂಡು ಹೋಗಿ ಕಳೆದುಹೋಗುವಂತೆ ಮಾಡಿಬಿಟ್ಟಿದ್ದಾರೆ.
'ಅವತಾರ್' ಸಿನಿಮಾದ ಸೃಷ್ಟಿಯ ಹಿಂದೆ ಹಿಂದು ಧರ್ಮದ ಪ್ರಭಾವ ಇರಬಹುದು ಎಂದು ಸ್ವತಃ ಆ ಸಿನಿಮಾದ ನಿರ್ದೇಶಕ, ಆಸ್ಕರ್ ವಿಜೇತ ಜೇಮ್ಸ್ ಕ್ಯಾಮರನ್ ಹೇಳಿಕೊಂಡಿದ್ದಾರೆ.

''ಅಪ್ರಜ್ಞಾಪುರ್ವಕವಾಗಿ ಹಿಂದು ಧರ್ಮದ ಪ್ರಭಾವ ಬಿದ್ದಿರಬಹುದು''
ತಾವು ಹಿಂದು ಧರ್ಮದ ಪುರಾಣ, ದೇವರು, ಮಂದಿರ ಒಟ್ಟಾರೆ ಎಲ್ಲವನ್ನೂ ಬಹಳ ಇಷ್ಟಪಡುತ್ತೇನೆ. ಇದು ಬಹಳ ವೈವಿಧ್ಯಮಯವಾದುದು ಹಾಗೂ ಬಹಳ ಶ್ರೀಮಂತವಾದುದು' ಎಂದು ಜೇಮ್ಸ್ ಕ್ಯಾಮರನ್ ಹಿಂದೊಮ್ಮೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದೀಗ 'ಅವತಾರ್ 2' ಬಿಡುಗಡೆ ಸಮಯದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಜೇಮ್ಸ್, ನನ್ನ ಸಿನಿಮಾ ಹಿಂದು ಧರ್ಮದಿಂದ ನೇರವಾಗಿ ಪ್ರಭಾವಿತವಾಗಿದೆ ಎಂದು ನಾನು ಹೇಳಲಾರೆ ಆದರೆ ಅಪ್ರಜ್ಞಾಪುರ್ವಕವಾಗಿ ಹಿಂದು ಧರ್ಮದ ಪ್ರಭಾವ ನನ್ನ ಸಿನಿಮಾ ಮೇಲೆ ಆಗಬಹುದಾಗಿರುವುದನ್ನು ನಾನು ಅಲ್ಲಗಳೆಯುವುದಿಲ್ಲ. ಹೀಗೆ ಮಾಡುವ ಮೂಲಕ ನಾನು ಯಾರ ಭಾವನೆಗೂ ಧಕ್ಕೆ ತರುತ್ತಿಲ್ಲವೆಂದು ಭಾವಿಸಿದ್ದೇನೆ'' ಎಂದು ವಿನಯವಾಗಿ ಜೇಮ್ಸ್ ಕ್ಯಾಮರನ್ ಹೇಳಿದ್ದಾರೆ.

ಹಿಂದು ಧರ್ಮದ ಪ್ರಭಾವ ಸಿನಿಮಾ ಮೇಲಿದೆ?
'ಅವತಾರ್' ಸಿನಿಮಾದಲ್ಲಿ ಪ್ಯಾಂಡೋರಾದ ನಾವಿ ಜನ ಪ್ರಕೃತಿಯನ್ನು ಆರಾಧಿಸುವುದು, ಆಯುರ್ವೇದ ಬಳಸುವುದು, ಸಾಮೂಹಿಕ ಪ್ರಾರ್ಥನೆ ಮಾಡುವುದು, ಪ್ರಾಣಿಗಳನ್ನು ದೇವರ ರೂಪವೆಂದು ನಂಬುವುದು, ಪುನರ್ಜನ್ಮದ ಬಗ್ಗೆ ನಂಬಿಕೆ. ಆತ್ಮ-ಪರಮಾತ್ಮನಲ್ಲಿ ನಂಬಿಕೆ ಹೊಂದಿರುವುದು ಇದೆಲ್ಲವೂ ಹಿಂದು ಧರ್ಮದ ಆಚರಣೆಗಳಂತೆಯೇ ಇವೆ. ಅಲ್ಲದೆ, ನಾವಿ ಜನಗಳ ಮೈಯ ಬಣ್ಣ ಹಿಂದು ದೇವತೆ ಕೃಷ್ಣನನ್ನು ಹೋಲುತ್ತದೆ. ಹಾಗಾಗಿ 'ಅವತಾರ್' ಸಿನಿಮಾದ ಮೇಲೆ ಹಿಂದು ಧರ್ಮದ ಪ್ರಭಾವ ಇದೆ ಎಂಬ ವಿಷಯ ಮೊದಲೇ ಚರ್ಚೆಗೆ ಬಂದಿತ್ತು. ಈಗ ಅದನ್ನು ಬಹುತೇಕ ಖಾತ್ರಿಗೊಳಸಿದ್ದಾರೆ ಜೇಮ್ಸ್ ಕ್ಯಾಮರನ್.

ಭಾರಿ ಕಲೆಕ್ಷನ್ ಮಾಡಿದ 'ಅವತಾರ್; ದಿ ವೇ ಆಫ್ ವಾಟರ್'
'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾ ನಿನ್ನೆಯಷ್ಟೆ ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಮೊದಲ ದಿನವೇ ವಿಶ್ವದಾದ್ಯಂತ ಭಾರಿ ಕಲೆಕ್ಷನ್ ಮಾಡಿದೆ. ಸಿನಿಮಾ ನೋಡಿದ ಬಹುಪಾಲು ಮಂದಿ ಹದಿಮೂರು ವರ್ಷದ ಹಿಂದೆ ಬಂದಿದ್ದ ಮೊದಲ 'ಅವತಾರ್' ಸಿನಿಮಾಕ್ಕಿಂತಲೂ ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಮೂರು ಗಂಟೆ ಹತ್ತು ನಿಮಿಷದ 'ಅವತಾರ್; ದಿ ವೇ ಆಫ್ ವಾಟರ್' ಅಷ್ಟೂ ಸಮಯ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಗರದಾಳದ ಪ್ರಪಂಚದ ಅನಾವರಣ
ಹದಿಮೂರು ವರ್ಷದ ಹಿಂದೆ ಬಂದಿದ್ದ 'ಅವತಾರ್' ಸಿನಿಮಾದ ಮುಂದಿನ ಭಾಗವೇ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾ ಆಗಿದ್ದು, ಕಳೆದ ಸಿನಿಮಾದಲ್ಲಿ ನೆಲದ ಮೇಲೆ ಯುದ್ಧ ನಡೆದರೆ ಈ ಬಾರಿ ನೀರಿನ ಮೇಲೆ. ಕಳೆದ ಸಿನಿಮಾದಲ್ಲಿ ಪ್ಯಾಂಡೋರಾದ ಒಮಾಟಿಕಾಯಾ ಅದ್ಭುತ ಪ್ರಪಂಚವನ್ನು ಜೇಮ್ಸ್ ತೋರಿಸಿದ್ದರು. ಈ ಬಾರಿ ಪ್ಯಾಂಡೋರಾದ ಪಶ್ಚಿಮ ಪ್ರದೇಶವಾದ ಮೆಟ್‌ಕಯೀನಾವನ್ನು 'ಅವತಾರ್' ಕತೆ ಹೇಳಲು ಆಯ್ದುಕೊಂಡಿದ್ದಾರೆ. ಈ ಬಾರಿ ಸಾಗರದಾಳದ ಅದ್ಭುತ ಲೋಕವನ್ನು ಜೇಮ್ಸ್ ಅನಾವರಣ ಮಾಡಿದ್ದಾರೆ.