For Quick Alerts
  ALLOW NOTIFICATIONS  
  For Daily Alerts

  'ಅವತಾರ್' ಸಿನಿಮಾ ಮರು ಬಿಡುಗಡೆ: ಇದೆ ಹಲವು ವಿಶೇಷತೆ!

  |

  2009 ರಲ್ಲಿ ತೆರೆಗೆ ಬಂದಿದ್ದ ಹಾಲಿವುಡ್ ಸಿನಿಮಾ 'ಅವತಾರ್' ಸಿನಿಮಾ ಪ್ರೇಮಿಗಳ ಸ್ಮೃತಿಯಿಂದ ಮರೆಯಾಗಿಲ್ಲ. ಸುಲಭಕ್ಕೆ ಮರೆಯುವಂತಹಾ ಸಿನಿಮಾ ಸಹ ಅದಾಗಿರಲಿಲ್ಲ.

  2009 ರಲ್ಲಿ ತೆರೆಗೆ ಬಂದಿದ್ದ 'ಅವತಾರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. 2019 ರಲ್ಲಿ 'ಅವೇಂಜರ್ಸ್; ಎಂಡ್ ಗೇಮ್' ಬರುವ ವರೆಗೆ ಆ ಸಿನಿಮಾದ ದಾಖಲೆಗಳನ್ನು ಯಾರೂ ಅಳಿಸಲಿಕ್ಕಾಗಿರಲಿಲ್ಲ. ಈಗ ಈ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ!

  2009 ರಲ್ಲಿ ಬಿಡುಗಡೆ ಆಗಿದ್ದ 'ಅವತಾರ್' ಸಿನಿಮಾ 12 ವರ್ಷಗಳ ಬಳಿಕ ಮತ್ತೆ ತೆರೆಗೆ ಬರುತ್ತಿದೆ. ಸೆಪ್ಟೆಂಬರ್ 23 ರಂದು ಈ ಸಿನಿಮಾ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮತ್ತೆ ಬಿಡುಗಡೆ ಆಗುತ್ತಿದೆ ಅದೂ ನವೀನ ತಂತ್ರಜ್ಞಾನದ ಮೂಲಕ.

  'ಅವತಾರ್' ಸಿನಿಮಾದ ನಾಲ್ಕು ಸರಣಿಗಳನ್ನು ನಿರ್ದೇಶಕ ಜೇಮ್ಸ್ ಕ್ಯಾಮರನ್ ನಿರ್ಮಿಸುತ್ತಿದ್ದು, ಅದರಲ್ಲಿ 'ಅವತಾರ್: ದಿ ವೇ ಆಫ್ ವಾಟರ್' ಇದೇ ಡಿಸೆಂಬರ್‌ ತಿಂಗಳಲ್ಲಿ ತೆರೆಗೆ ಬರಲಿದೆ. ಅದಕ್ಕೆ ಮುನ್ನ ಮೂಲ 'ಅವತಾರ್' ಸಿನಿಮಾವನ್ನು ಬಿಡುಗಡೆಗೊಳಿಸಿ ಪ್ರೇಕ್ಷಕರನ್ನು ಅಣಿಗೊಳಿಸಲು ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಯೋಜಿಸಿ ಸೆಪ್ಟೆಂಬರ್ 23 ಕ್ಕೆ ಸಿನಿಮಾ ತೆರೆಗೆ ತರುತ್ತಿದ್ದಾರೆ.

  ಹೊಸ ತಂತ್ರಜ್ಞಾನದೊಂದಿಗೆ ಸಿನಿಮಾ ಬಿಡುಗಡೆ

  ಹೊಸ ತಂತ್ರಜ್ಞಾನದೊಂದಿಗೆ ಸಿನಿಮಾ ಬಿಡುಗಡೆ

  ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಜೇಮ್ಸ್ ಕ್ಯಾಮರಾನ್, ''ಅವತಾರ್' ಸಿನಿಮಾ ಬಿಡುಗಡೆ ಆಗಿ 12 ವರ್ಷವಾಯಿತು. ಈಗಿನ 22, 23 ವರ್ಷದ ಯುವಕರು ಆಗ ಆ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿರಲಿಕ್ಕಿಲ್ಲ. ನಾವು ಆ ಸಿನಿಮಾವನ್ನು ಮಾಡಿದ್ದು ದೊಡ್ಡ ಪರದೆಗಾಗಿ, ಅದೂ 3ಡಿ ತಂತ್ರಜ್ಞಾನದೊಂದಿಗೆ. ಈಗ ಆ ಸಿನಿಮಾಕ್ಕೆ 4k ತಂತ್ರಜ್ಞಾನ ಅಳವಡಿಸಿದ್ದೇವೆ, ಜೊತೆಗೆ ಹೈ ಡೈನಮಿಕ್‌ ತಂತ್ರಜ್ಞಾನವನ್ನೂ ಸೇರಿಸಿ, ಸೆಕೆಂಡ್‌ಗೆ 48 ಫ್ರೇಮ್‌ಗಳು ಪರದೆಯ ಮೇಲೆ ಹಾಯುವಂತೆ ಮಾಡಿದ್ದೇವೆ'' ಎಂದಿದ್ದಾರೆ.

  ಸಿನಿಮಾದ ಪೂರ್ತಿ ಆಸ್ವಾದ ಈಗ ಪಡೆಯಬಹುದು: ಜೇಮ್ಸ್

  ಸಿನಿಮಾದ ಪೂರ್ತಿ ಆಸ್ವಾದ ಈಗ ಪಡೆಯಬಹುದು: ಜೇಮ್ಸ್

  ''ಅವತಾರ್' ಸಿನಿಮಾ ಈ ಹಿಂದೆ ಬಿಡುಗಡೆ ಆಗಿದ್ದಕ್ಕಿಂತಲೂ ಉತ್ತಮವಾಗಿ ಈಗ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆಗಿದ್ದಾಗಿನಿಕ್ಕಿಂತಲೂ ಚೆನ್ನಾಗಿ ಈಗ ಕಾಣುತ್ತಿದೆ. ನೀವು ಆ ಸಿನಿಮಾವನ್ನು ಚಿತ್ರಮಂದಿರ, ಒಟಿಟಿ, ಬ್ಲೂ ರೇ ಡಿಸ್ಕ್‌ ಯಾವುದರಲ್ಲೇ ನೋಡಿದ್ದರೂ ಆ ಸಿನಿಮಾದ ಪೂರ್ತಿ ಆಸ್ವಾದ ಪಡೆದಿರಲಿಕ್ಕೆ ಸಾಧ್ಯವಿಲ್ಲ, ಆದರೆ ಆ ಆಸ್ವಾದ ಈಗ ಪಡೆಯಬಹುದು ಆ ರೀತಿ ಸಿನಿಮಾವನ್ನು ಬದಲಿಸಿದ್ದೇವೆ'' ಎಂದಿದ್ದಾರೆ ಕ್ಯಾಮರನ್.

  1.90 ಲಕ್ಷ ಕೋಟಿ ಕಲೆಕ್ಷನ್!

  1.90 ಲಕ್ಷ ಕೋಟಿ ಕಲೆಕ್ಷನ್!

  'ಅವತಾರ್' ಸಿನಿಮಾ 2009 ರಲ್ಲಿ ತೆರೆ ಕಂಡು 1.90 ಲಕ್ಷ ಕೋಟಿ ಹಣ ಗಳಿಸಿತ್ತು. ಕಳೆದ ವರ್ಷ ಚೀನಾದಲ್ಲಿ ಮರು ಬಿಡುಗಡೆ ಆಗಿದ್ದ ಈ ಸಿನಿಮಾ ಅಲ್ಲಿಯೂ 470 ಕೋಟಿ ಗಳಿಸಿತ್ತು. ಈ ಸಿನಿಮಾ ಸೃಷ್ಟಿಸಿದ ಹಲವು ಬಾಕ್ಸ್ ಆಫೀಸ್‌ ದಾಖಲೆಗಳು ಸುಮಾರು ಹತ್ತು ವರ್ಷಗಳ ಕಾಲ ಯಾವ ಸಿನಿಮಾಕ್ಕೂ ಮುರಿಯಲಾಗಿರಲಿಲ್ಲ. ಈಗಲೂ ಕೆಲವು ದಾಖಲೆಗಳು ಹಾಗೆಯೇ ಇವೆ.

   ಡಿಸೆಂಬರ್‌ನಲ್ಲಿ 'ಅವತಾರ್; ದಿ ವೇ ಆಫ್ ವಾಟರ್'

  ಡಿಸೆಂಬರ್‌ನಲ್ಲಿ 'ಅವತಾರ್; ದಿ ವೇ ಆಫ್ ವಾಟರ್'

  ಇದೀಗ 'ಅವತಾರ್' ಸರಣಿಯ ಎರಡನೇ ಸಿನಿಮಾ 'ಅವತಾರ್; ದಿ ವೇ ಆಫ್ ವಾಟರ್' ತೆರೆಗೆ ಬರುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಈ ಸಿನಿಮಾ ತೆರೆ ಕಾಣಲಿದ್ದು, ಮೊದಲ ಸಿನಿಮಾದಲ್ಲಿದ್ದ ಕೆಲವು ಪಾತ್ರಗಳ ಜೊತೆಗೆ ಇನ್ನೂ ಕೆಲವು ಪಾತ್ರಗಳು ಸೇರಿಕೊಂಡಿವೆ, 'ಫಾಸ್ಟ್ ಆಂಡ್ ಫ್ಯೂರಿಯಸ್' ಖ್ಯಾತಿಯ ವೇನ್ ಡೀಸೆಲ್, 'ಟೈಟ್ಯಾನಿಕ್' ಸಿನಿಮಾ ನಾಯಕಿ ಕೇಟ್ ವಿನ್‌ಸ್ಲೆಟ್ ಅವರುಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಹ ಈ ಹಿಂದಿನ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳಿಪಟ ಮಾಡಲಿದೆ ಎಂಬ ನಿರೀಕ್ಷೆ ಸಿನಿ ಪ್ರೇಮಿಗಳಿಗಿದೆ.

  English summary
  Avatar movie re releasing on September 23 with 4k technology and other high technologies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X