Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
12 ದಿನಕ್ಕೆ 8200 ಕೋಟಿ ಗಳಿಸಿದ 'ಅವತಾರ್ 2'! ಆದರೂ ಮೂರನೇ ಸ್ಥಾನದಲ್ಲಿ!
ಬಿಡುಗಡೆ ಆಗಿ ಹನ್ನೆರಡು ದಿನಗಳಲ್ಲೇ ದಾಖಲೆಯ ಮೊತ್ತವನ್ನು 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾ ಗಳಿಕೆ ಮಾಡಿದೆ.
ಭಾರತ ಸೇರಿದಂತೆ ವಿಶ್ವದ ಹಲವೆಡೆ ಡಿಸೆಂಬರ್ 16 ರಂದು ಬಿಡುಗಡೆ ಆದ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾ ಕೇವಲ ಹನ್ನೆರಡು ದಿನದಲ್ಲಿ ಒಂದು ಬಿಲಿಯಲ್ ಡಾಲರ್ ಅಂದರೆ ಸುಮಾರು 8200 ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ವಿಶ್ವದಾದ್ಯಂತ ಕಲೆ ಹಾಕಿದೆ.
'ಅವತಾರ್ 2' ಸಿನಿಮಾ ಬಿಡುಗಡೆ ಆಗುವ ಮುನ್ನವೇ ಬಾಕ್ಸ್ ಆಫೀಸ್ ವಿಶ್ಲೇಷಕರು ಈ ಸಿನಿಮಾ ದೊಡ್ಡ ಮೊತ್ತ ಗಳಿಕೆ ಮಾಡುತ್ತದೆ ಎಂಬುದನ್ನು ಊಹಿಸಿದ್ದರು. ಆದರೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಒಂದು ಬಿಲಿಯನ್ ಡಾಲರ್ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿದೆ 'ಅವತಾರ್ 2'. ಹಾಗಿದ್ದರೂ ಸಹ ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಒಂದು ಬಿಲಿಯನ್‌ಗೂ ಹೆಚ್ಚು ಕಲೆಕ್ಷನ್!
'ಅವತಾರ್ 2' ಸಿನಿಮಾದ ಒಟ್ಟಾರೆ ಕಲೆಕ್ಷನ್ ಒಂದು ಬಿಲಿಯನ್‌ಗೂ ಹೆಚ್ಚಿದೆ ಎಂದೆ ಹೇಳಲಾಗುತ್ತಿದೆ. ಏಕೆಂದರೆ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಯಾದ ಚೀನಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಸೋಮವಾರದಿಂದೀಚೆಗೆ ಲೆಕ್ಕ ಹಾಕಲಾಗಿಲ್ಲ. ಅಲ್ಲದೆ ಕೊರಿಯಾದ ಕಲೆಕ್ಷನ್ ಸಹ ಈಗ ಹೊರಬಿದ್ದಿರುವ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಸೇರಿಕೊಂಡಿಲ್ಲ ಈ ಎರಡೂ ರಾಷ್ಟ್ರಗಳ ಕಲೆಕ್ಷನ್ ಸೇರಿದರೆ ಸಿನಿಮಾದ ಕಲೆಕ್ಷನ್ 10,000 ಕೋಟಿ ದಾಟುತ್ತದೆ ಎನ್ನಲಾಗುತ್ತಿದೆ.

ಚೀನಾ, ಕೊರಿಯಾದ ಕಲೆಕ್ಷನ್ ಲೆಕ್ಕವಿಲ್ಲ!
ಆದರೆ ಈಗ 'ಅವತಾರ್ 2' ಸಿನಿಮಾ ಅಧಿಕೃತ ಲೆಕ್ಕಾಚಾರದ ಪ್ರಕಾರ 8200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹಾಗಿದ್ದರೂ ಸಹ ಈ ಸಿನಿಮಾ ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಮೂರನೇ ಸಿನಿಮಾ ಎನಿಸಿಕೊಂಡಿದೆ. ಇದಕ್ಕಿಂತಲೂ ಹೆಚ್ಚು ಹಣ ಗಳಿಸಿವೆ ಇನ್ನೆರಡು ಹಾಲಿವುಡ್ ಸಿನಿಮಾಗಳು. ಆದರೆ ಆ ಎರಡು ಸಿನಿಮಾಗಳ ದಾಖಲೆಯನ್ನು 'ಅವತಾರ್ 2' ಕೆಲವೇ ದಿನಗಳಲ್ಲಿ ಮುರಿಯುವ ಸಾಧ್ಯತೆ ಇದೆ. ಆದರೆ 'ಅವತಾರ್ 2' ಗಿಂತಲೂ ಹೆಚ್ಚು ಹಣ ಗಳಿಸಿರುವ ಆ ಎರಡು ಸಿನಿಮಾಗಳು ಯಾವುವು?

ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಯಾವುದು?
'ಅವತಾರ್ 2' ಸಿನಿಮಾಕ್ಕೆ ಮೊದಲು ಇದೇ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿದ್ದ 'ಜುರಾಸಿಕ್ ವರ್ಲ್ಡ್ ಡೋಮಿನಿಯನ್' ಸಿನಿಮಾ ಸುಮಾರು 9000 ಕೋಟಿ ರು ಕಲೆಕ್ಷನ್ ಮಾಡಿತ್ತು. ಇನ್ನು ವಿಶ್ವದ ಸೂಪರ್ ಸ್ಟಾರ್ ನಟ ಟಾಮ್ ಕ್ರೂಸ್ ನಟನೆಯ 'ಟಾಪ್ ಗನ್ ಮೇವರಿಕ್' ಸಿನಿಮಾ 12 ಸಾವಿರ ಕೋಟಿ ಹಣ ಗಳಿಸಿ ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 'ಟಾಪ್‌ಗನ್' ಸಿನಿಮಾದ ದಾಖಲೆಯನ್ನು 'ಅವತಾರ್ 2' ಮುರಿಯುವ ಸಾಧ್ಯತೆ ಇದೆ ಆದರೆ ಸುಲಭವಲ್ಲ.

ಇನ್ನೂ ಮೂರು ಸಿನಿಮಾಗಳು ಬರಲಿವೆ
'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾವು 2009 ರಲ್ಲಿ ಬಿಡುಗಡೆ ಆಗಿದ್ದ 'ಅವತಾರ್' ಸಿನಿಮಾದ ಮುಂದಿನ ಭಾಗವಾಗಿದೆ. ಜೇಮ್ಸ್ ಕ್ಯಾಮರನ್ ನಿರ್ದೇಶನದ ಈ ಸಿನಿಮಾ ಸಾಗರದಾಳದ ಅದ್ಭುತ ಲೋಕದ ಪರಿಚಯ ಮಾಡಿಸುವ ಜೊತೆಗೆ ಅದ್ಭುತ ಆಕ್ಷನ್ ದೃಶ್ಯಗಳನ್ನು ಸಹ ಒಳಗೊಂಡಿದೆ. ಇದೇ ಸಿನಿಮಾದ ಇನ್ನೂ ಮೂರು ಭಾಗಗಳು ಬಿಡುಗಡೆ ಆಗಲಿದೆ. 'ಅವತಾರ್ 3' ಸಿನಿಮಾ 2024 ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. 'ಅವತಾರ್ 4' 2026 ರ ಡಿಸೆಂಬರ್ ಹಾಗೂ 'ಅವತಾರ್ 5' ಸಿನಿಮಾ 2028 ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.