For Quick Alerts
  ALLOW NOTIFICATIONS  
  For Daily Alerts

  'ಅವೆಂಜರ್'ಗೆ ಭಾರಿ ಡಿಮ್ಯಾಂಡ್: ಒಂದೇ ದಿನದಲ್ಲಿ 1 ಮಿಲಿಯನ್ ಟಿಕೆಟ್ ಸೋಲ್ಡ್ ಔಟ್

  |

  ಹಾಲಿವುಡ್ ನ 'ಅವೆಂಜರ್ ಎಂಡ್ಗೇಮ್' ಚಿತ್ರದ ಟಿಕೆಟ್ ಖರೀದಿಗೆ ಭಾರತದಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. 'ಅವೆಂಜರ್ ಎಂಡ್ಗೇಮ್' ಚಿತ್ರ ನೋಡಲು ಭಾರತೀಯರು ಮುಗಿಬಿದ್ದಿದ್ದು ಟಿಕೆಟ್ ಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಕೇವಲ ಒಂದು ದಿನದಲ್ಲಿ ಒಂದು ಮಿಲಿಯನ್ ಗೂ ಅಧಿಕ ಟಿಕೆಟ್ ಸೋಲ್ಡ್ ಔಟ್ ಆಗಿದೆ.

  ಭಾರತದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದಂತೆ ಸಿನಿಮಾ ಟಿಕೆಟ್ ಗಾಗಿ ಜನ ಮುಗಿಬಿದ್ದಿದ್ದಾರೆ. ಏಕಾಏಕಿ ಜನ ಮುತ್ತಿಕೊಂಡ ಹಿನ್ನಲೆ ಟಿಕೆಟ್ ವಿತರಣೆ ಮಾಡುವ ಅನೇಕ ವೆಬ್ ಸೈಟ್ ಗಳು ಕ್ರ್ಯಾಶ್ ಆಗಿವೆ. 'ಅವೆಂಜರ್ ಎಂಡ್ಗೇಮ್' ಹವಾ ಭಾರತದಲ್ಲಿ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಇದುವರೆಗಿನ ಹಿಂದಿ ಚಿತ್ರದ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದೆ.

  ಅಂದ್ಹಾಗೆ 'ಅವೆಂಜರ್ ಎಂಡ್ಗೇಮ್' ಇದೇ ತಿಂಗಳು 26ರಂದು ಭಾರತದಲ್ಲಿ ತೆರೆಗೆ ಬರಲಿದೆ. ಈಗಾಗಲೆ ಲಾಸ್ ಏಂಜಲೀಸ್ ನಲ್ಲಿ ಏಪ್ರಿಲ್ 22ಕ್ಕೆ ಚಿತ್ರ ರಿಲೀಸ್ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಏಪ್ರಿಲ್ 26ಕ್ಕೆ ಅಮೇರಿಕ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಭಾರಿ ನಿರೀಕ್ಷೆಯ 'ಅವೆಂಜರ್ ಎಂಡ್ಗೇಮ್' ನೋಡಲು ಟಿಕೆಟ್ ಗಾಗಿ ಭಾರತೀಯರು ಪರದಾಡುತ್ತಿದ್ದಾರೆ.

  'ಅವೆಂಜರ್ ಎಂಡ್ಗೇಮ್' ಇಂಗ್ಲಿಷ್, ಹಿಂದಿ ಸೇರಿದಂತೆ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಮಾರ್ವೆಸ್ ಸಿನಿಮೆಟಿಕ್ ಯೂನಿವರ್ಸ್ ಅವರ 22ನೇ ಸಿನಿಮಾ 'ಅವೆಂಜರ್ ಎಂಡ್ಗೇಮ್'. ಜೂನಿಯರ್ ರಾಬರ್ಟ್ ಡೌನಿ, ಕ್ರಿಸ್ ಇವಾನ್ಸ್, ಮಾರ್ಕ್ ರುಫಲೋ,ಸ್ಕಾರ್ಲೆಟ್ ಜೋಹಾನ್ಸನ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

  English summary
  Avengers: Endgame sells 1 million advance tickets in India, breaks records of all Hindi films. 18 tickets sells per second, even before the film releases in cinemas on April 26.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X