For Quick Alerts
  ALLOW NOTIFICATIONS  
  For Daily Alerts

  ಮಿಶೆಲ್ ಒಬಾಮ ನಿರ್ಮಿಸಿದ 'ಅಮೆರಿಕನ್ ಫ್ಯಾಕ್ಟರಿ'ಗೆ ಆಸ್ಕರ್ ಗರಿ

  |

  2020ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಘೋಷಣೆಯಾಗಿದ್ದು, 'ಪ್ಯಾರಸೈಟ್' ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. 'ಜೋಕರ್' ಸಿನಿಮಾದ ಅದ್ಭುತ ನಟನೆಗೆ ಜಾಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

  ವಿಶೇಷ ಅಂದ್ರೆ ಅಮೆರಿಕ ಮಾಜಿ ಅಧ್ಯಕ್ಷ ಮಿಶೆಲ್ ಒಬಾಮ ಅವರ ನಿರ್ಮಾಣ ಸಂಸ್ಥೆ ನಿರ್ಮಿಸಿದ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಈ ಖುಷಿಯನ್ನು ಬರಾಕ್ ಒಬಾಮ ಮತ್ತು ಪತ್ನಿ ಮಿಚೆಲ್ ಒಬಾಮ ಸಂಭ್ರಮಿಸಿದ್ದಾರೆ.

  ಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

  ಮಿಶೆಲ್ ಒಬಾಮ ಸಂಸ್ಥೆ ನಿರ್ಮಿಸಿದ್ದ 'ಅಮೆರಿಕನ್ ಫ್ಯಾಕ್ಟರಿ' ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಫೀಚರ್ ಸಾಕ್ಷ್ಯಚಿತ್ರ ಪ್ರಶಸ್ತಿ ಲಭಿಸಿದೆ. ಈ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿತ್ತು. ಹಾಗಾಗಿ, ಆಸ್ಕರ್ ಗೆದ್ದ ಸಂಭ್ರಮವನ್ನು ನೆಟ್ ಫ್ಲಿಕ್ಸ್ ಜೊತೆ ಒಬಾಮ ದಂಪತಿ ಆಚರಿಸಿದ್ದಾರೆ.

  ಸ್ಟೀವನ್ ಬೋಗ್ನರ್ ಮತ್ತು ಜೂಲಿಯಾ ರೀಚೆರ್ಟ್ ಈ ಚಿತ್ರ ನಿರ್ದೇಶಿಸಿದ್ದು ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಂದ್ಹಾಗೆ, 2018ರಲ್ಲಿ ಒಬಾಮ ದಂಪತಿ 'ಹೈಯರ್ ಗ್ರೌಂಡ್ ಪ್ರೊಡಕ್ಷನ್' ಸ್ಥಾಪಿಸಿದ್ದರು. ಈ ಸಂಸ್ಥೆಯಲ್ಲಿ ನಿರ್ಮಾಣವಾದ ಮೊದಲ ಸಿನಿಮಾ ಇದಾಗಿದೆ. ಚೊಚ್ಚಲ ಚಿತ್ರಕ್ಕೆ ಆಸ್ಕರ್ ಪಡೆದಿರುವುದು ಒಬಾಮ ಸಂತಸ ಹೆಚ್ಚಾಗಿಸಿದೆ.

  ಇನ್ನು ಸಿನಿಮಾ ತಯಾರಿಸಿದ ಮೇಕರ್ಸ್ ಕುರಿತು ಒಬಾಮ ದಂಪತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಹೈಯರ್ ಗ್ರೌಂಡ್ ಪ್ರೊಡಕ್ಷನ್'' ಮೊದಲ ಪ್ರಯತ್ನದಲ್ಲೇ ಆಸ್ಕರ್ ಗಳಿಸಿದ್ದಕ್ಕೆ ಕೃತಜ್ಞತೆ ತಿಳಿಸುತ್ತೇನೆ ಎಂದು ಒಬಾಮ ಮತ್ತು ಪತ್ನಿ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.

  English summary
  America ex president Barack Obama celebrated oscar win for their documentary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X