For Quick Alerts
  ALLOW NOTIFICATIONS  
  For Daily Alerts

  ಜೇಮ್ಸ್ ಬಾಂಡ್ ಕಾರು ಖರೀದಿಸಿದ ಕೇರಳದ ಉದ್ಯಮಿ

  |

  ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಆಕ್ಷನ್‌ನಷ್ಟೆ ಆತನ ಕಾರುಗಳ ಸಹ ಜನಪ್ರಿಯ. ಜೇಮ್ಸ್ ಬಾಂಡ್ 007 ಬಳಸುವ ಕಾರುಗಳ ವಿನ್ಯಾಸ, ಅದು ಒಳಗೊಂಡಿರುವ ವಿಶಿಷ್ಟತೆಗಳು ಸಿನಿಮಾದಿಂದ ಸಿನಿಮಾಕ್ಕೆ ಬದಲಾಗುತ್ತಲೇ ಇರುತ್ತವೆ.

  ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಳಸುವ ಕಾರು ಆಸ್ಟನ್ ಮಾರ್ಟಿನ್ ಸಂಸ್ಥೆಯದ್ದು. ಹಲವು ವರ್ಷಗಳಿಂದ ಜೇಮ್ಸ್ ಬಾಂಡ್ ಸಿನಿಮಾಕ್ಕೆ ಆಸ್ಟನ್ ಮಾರ್ಟಿನ್ ಸಂಸ್ಥೆ ಕಾರು ಒದಗಿಸುತ್ತಿದೆ. ಆಸ್ಟನ್ ಮಾರ್ಟನ್ ಕಾರಿಗೂ ಜೇಮ್ಸ್‌ ಬಾಂಡ್ ಬಹಳ ಸುದೀರ್ಘ ನಂಟಿದೆ.

  ಆಸ್ಟನ್ ಮಾರ್ಟಿನ್ ಕಾರು ಜಗತ್ತಿನ ಐಶಾರಾಮಿ ಹಾಗೂ ವೇಗದ ಕಾರುಗಳಲ್ಲಿ ಒಂದು. ಇದೀಗ ಇದೇ ಸಂಸ್ಥೆಯ ಕಾರೊಂದನ್ನು ಕೇರಳದ ಉದ್ಯಮಿಯೊಬ್ಬರು ಖರೀದಿಸಿದ್ದಾರೆ. ಕೇರಳದ ಉದ್ಯಮಿ ಇದೀಗ ಖರೀದಿಸಿರುವ ಕಾರು ಸೇರಿ ಇಡೀಯ ಭಾರತದಲ್ಲಿ ಆಸ್ಟನ್ ಮಾರ್ಟಿನ್ ಸಂಸ್ಥೆಯ ಕೇವಲ ನಾಲ್ಕು ಕಾರಷ್ಟೆ ಇದೆಯೆಂದರೆ ಊಹಿಸಬಹುದು ಈ ಕಾರು ಎಷ್ಟು ದುಬಾರಿ ಎಂದು.

  ಭೀಮಾ ಜ್ಯುಯೆಲರ್ಸ್ ಮಾಲೀಕ ಗೋವಿಂದನ್

  ಭೀಮಾ ಜ್ಯುಯೆಲರ್ಸ್ ಮಾಲೀಕ ಗೋವಿಂದನ್

  ಹೆಸರಾಂತ ಚಿನ್ನದ ಮಳಿಗೆ ಭೀಮಾ ಜ್ಯುಯೆಲರ್ಸ್‌ನ ಮಾಲೀಕ ಡಾ.ಬಿ.ಗೋವಿಂದನ್ ಅವರು ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಎಸ್‌ಯುವಿ ಕಾರನ್ನು ಖರೀದಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಈ ಕಾರು ಭಾರತದಲ್ಲಿ ಲಾಂಚ್ ಆಗಿತ್ತು. ಈ ಕಾರಿಗೆ ಬರೋಬ್ಬರಿ 5 ಕೋಟಿಗೂ ಹೆಚ್ಚು ಹಣ ತೆತ್ತಿದ್ದಾರೆ ಡಾ.ಬಿ.ಗೋವಿಂದನ್.

  ಮೊದಲ ಕಾರು ಖರೀದಿಸಿದ್ದು ಮುಖೇಶ್ ಅಂಬಾನಿ

  ಮೊದಲ ಕಾರು ಖರೀದಿಸಿದ್ದು ಮುಖೇಶ್ ಅಂಬಾನಿ

  ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಎಸ್‌ಯುವಿ ಕಾರನ್ನು ಮೊದಲು ಖರೀದಿಸಿದ್ದು ರಿಲಯನ್ಸ್ ಮಾಲೀಕ ವಿಶ್ವಶ್ರೀಮಂತರ ಪಟ್ಟಿಯಲ್ಲಿ ಹೆಸರುಳ್ಳ ಮುಖೇಶ್ ಅಂಬಾನಿ. ಅವರಾದ ಬಳಿಕ ಗೋವಿಂದನ್ ಬಳಿಯಷ್ಟೆ ಆಸ್ಟನ್ ಮಾರ್ಟಿನ್‌ನ ಈ ದುಬಾರಿ ಎಸ್‌ಯುವಿ ಕಾರು ಇದೆ. ಇವೆರಡನ್ನು ಹೊರತುಪಡಿಸಿದರೆ ಇನ್ನೆರಡಷ್ಟೆ ಆಸ್ಟನ್‌ ಮಾರ್ಟಿನ್‌ನ ಕಾರು ಭಾರತದಲ್ಲಿವೆ. ಆದರೆ ಅವು ಡಿಬಿಎಕ್ಸ್ ಎಸ್‌ಯುವಿ ಕಾರುಗಳಲ್ಲ.

  ಇದೇ ಮೊದಲ ಎಸ್‌ಯುವಿ ಆಸ್ಟನ್ ಮಾರ್ಟಿನ್

  ಇದೇ ಮೊದಲ ಎಸ್‌ಯುವಿ ಆಸ್ಟನ್ ಮಾರ್ಟಿನ್

  108 ವರ್ಷ ಇತಿಹಾಸವಿರುವ ಆಸ್ಟನ್ ಮಾರ್ಟಿನ್ ಇದೇ ಮೊದಲ ಬಾರಿಗೆ ಎಸ್‌ಯುವಿ ಕಾರು ತಯಾರಿಸಿದೆ. ವಿಶ್ವದ ಅತ್ಯಂತ ದುಬಾರಿ ಎಸ್‌ಯುವಿ ಇದು ಎನ್ನಲಾಗಿದೆ. ಲ್ಯಾಂಬರ್ಗಿನಿ ಉರುಸ್, ಬೆಂಟ್ಲಿಯ ಎಸ್‌ಯುವಿ ಕಾರುಗಳಿಂತಲೂ ಈ ಕಾರು ದುಬಾರಿ ಮತ್ತು ಹೆಚ್ಚು ಶಕ್ತಿಶಾಲಿ. ಇದೀಗ ಬಿಡುಗಡೆ ಆಗಲಿರುವ ಜೇಮ್ಸ್ ಬಾಂಡ್ ಸಿನಿಮಾ 'ನೋ ಟೈಮ್‌ ಟು ಡೈ' ಸಿನಿಮಾದಲ್ಲಿ ಈ ಕಾರನ್ನು ಬಳಸಲಾಗಿದೆ.

  1964ರಿಂದಲೂ ಬಾಂಡ್ ಸಿನಿಮಾಗಳಲ್ಲಿ ಆಸ್ಟನ್ ಮಾರ್ಟಿನ್ ಕಾರು

  1964ರಿಂದಲೂ ಬಾಂಡ್ ಸಿನಿಮಾಗಳಲ್ಲಿ ಆಸ್ಟನ್ ಮಾರ್ಟಿನ್ ಕಾರು

  ಆಸ್ಟನ್ ಮಾರ್ಟಿನ್ ಕಾರಿಗೂ ಜೇಮ್ಸ್ ಬಾಂಡ್‌ ಸಿನಿಮಾಗಳಿಗೂ ಸುದೀರ್ಘ ನಂಟಿದೆ. 1964ರಲ್ಲಿ ಬಿಡುಗಡೆ ಆದ ಜೇಮ್ಸ್ ಬಾಂಡ್ ಸಿನಿಮಾ 'ಗೋಲ್ಡ್‌ ಫಿಂಗರ್' ಸಿನಿಮಾದಲ್ಲಿ ಆಸ್ಟನ್ ಮಾರ್ಟಿನ್ ಕಾರು ಬಳಸಲಾಯಿತು. ಅಂದಿನಿಂದ ಈವರೆಗೆ ಬಿಡುಗಡೆ ಆದ ಬಹುತೇಕ ಎಲ್ಲ ಬಾಂಡ್ ಸಿನಿಮಾಗಳಲ್ಲಿಯೂ ಆಸ್ಟನ್ ಮಾರ್ಟಿನ್ ಕಾರು ಬಳಸಲಾಗಿದೆ. ಜೇಮ್ಸ್ ಬಾಂಡ್ ಕಾರುಗಳಿಗೆ ಹಲವು ವಿಶಿಷ್ಟತೆಗಳನ್ನು ಸಿನಿಮಾದ ಕತೆಯ ಅನುಕೂಲಕ್ಕೆ ತಕ್ಕಂತೆ ನೀಡಲಾಗಿರುತ್ತದೆ. ಜೇಮ್ಸ್‌ ಬಾಂಡ್‌ನಲ್ಲಿ ಬಳಸಿದ ಕಾರನ್ನು ಆಸ್ಟನ್ ಮಾರ್ಟಿನ್ ಸಂಸ್ಥೆಯು ಸಂಗ್ರಹಾಲಯದಲ್ಲಿಟ್ಟು ಕೊನೆಗೆ ಅದನ್ನು ಹರಾಜು ಹಾಕುವ ಸಂಪ್ರದಾಯವೂ ಇದೆ.

  ಸಿನಿಮಾ ಬಿಡುಗಡೆ ಯಾವಾಗ?

  ಸಿನಿಮಾ ಬಿಡುಗಡೆ ಯಾವಾಗ?

  ಡ್ಯಾನಿಯಲ್ ಕ್ರೇಗ್ ನಟಿಸಿರುವ ಹೊಸ ಜೇಮ್ಸ್ ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ' ಈಗಾಗಲೇ ಚಿತ್ರೀಕರಣ ಪೂರ್ಣವಾಗಿ ಬಿಡುಗಡೆಗೂ ತಯಾರಾಗಿದೆ. ಆದರೆ ಕೊರೊನಾ ಕಾರಣದಿಂದಾಗಿ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇದೆ. ಸೆಪ್ಟೆಂಬರ್ 31ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ಮಾಣ ಸಂಸ್ಥೆ ಇತ್ತೀಚೆಗೆ ಘೋಷಿಸಿದೆ. ಭಾರತದಲ್ಲಿಯೂ ಇದೇ ಸಮಯಕ್ಕೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

  English summary
  Bhima Jewelers owner Dr.B.Govindan purchased luxury Aston Martin DBX SUV car by paying more than 5 crore rs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X