»   » ಬ್ರಾಡ್ ಪಿಟ್ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್

ಬ್ರಾಡ್ ಪಿಟ್ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್

Posted By:
Subscribe to Filmibeat Kannada

ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇತ್ತೀಚೆಗಷ್ಟೇ ಅವರು 'ದಿ ಗ್ರೇಟ್ ಗಾಟ್ಸ್ ಬಿ 'ಚಿತ್ರದಲ್ಲಿ ಅಭಿನಯಿಸಿದ್ದು ಗೊತ್ತೇ ಇದೆ. ಈ ಬಾರಿ ಗ್ರೆಗರಿ ಡೇವಿಡ್ ರಾಬರ್ಟ್ ಬರೆದಿರುವ ಕಾದಂಬರಿ ಆಧಾರಿತ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಆಸ್ಟ್ರೇಲಿಯಾದಿಂದ ಪರಾರಿಯಾಗಿ ಮುಂಬೈಗೆ ಬಂದು ಭೂಗತ ಸಾಮ್ರಾಜ್ಯವನ್ನು ಆಳಿದ ಕದೀರ್ ಭಾಯ್ ಪಾತ್ರದಲ್ಲಿ ಅಮಿತಾಬ್ ಕಾಣಿಸಲಿದ್ದಾರೆ. ಗಾರ್ತ್ ಡೇವೀಸ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರವನ್ನು ಹಾಲಿವುಡ್ ನಟರಾದ ಬ್ರಾಡ್ ಪಿಟ್, ಜಾನಿಡೇಪ್ ನಿರ್ಮಿಸುತ್ತಿದ್ದಾರೆ. [ಕನ್ನಡ ತಾರೆಗಳೊಂದಿಗೆ ಅಮಿತಾಬ್ ಬಚ್ಚನ್ ನಂಟು]

Big B Amitabh Bachchan in Brad Pitt movie

ಹಾಲಿವುಡ್ ನಿರ್ದೇಶಕ ಬಜ್ ಲಹರ್ ಮನ್ ನಿರ್ದೇಶನದ 3D ಚಿತ್ರ 'ದಿ ಗ್ರೇಟ್ ಗಾಟ್ಸ್ ಬಿ'ಯಲ್ಲಿ ಅಮಿತಾಬ್ ಭೂಗತದೊರೆಯಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ 'ಟೈಟಾನಿಕ್' ಖ್ಯಾತಿಯ ಲಿಯೋನಾರ್ಡೋ ಡಿಕಾಪ್ರಿಯೋ ಪ್ರಮುಖ ಪಾತ್ರವಹಿಸಿದ್ದಾರೆ.

ದಿ ಗ್ರೇಟ್ ಗಾಟ್ಸ್ ಬಿ ಚಿತ್ರಕ್ಕಾಗಿ ಅಮಿತಾಬ್ ನಯಾಪೈಸೆ ಸಂಭಾವನೆ ಇಲ್ಲದಂತೆ ನಟಿಸಿರುವುದು ವಿಶೇಷ. ಚಿತ್ರದಲ್ಲಿ ಅವರು ಮೇಯರ್ ವುಲ್ಫ್ ಷಿಮ್ ಪಾತ್ರ ಪೋಷಿಸಿದ್ದರು. ಈ ಚಿತ್ರದ ಬಗೆಗಿನ ಆಸಕ್ತಿಕರ ವಿಷಯಗಳನ್ನು ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವರ್ಷ ನಿರ್ದೇಶಕ ಬಜ್ ಲಹರ್ ಮನ್ ನನ್ನನ್ನು ಭೇಟಿ ಮಾಡಿ ಚಿತ್ರಕ್ಕೆ ಸಂಬಂಧಿಸಿದ ಪೇಯಿಂಟಿಂಗ್ಸ್ ತೋರಿಸಿದರು, ಅವು ನನ್ನನ್ನು ಬಹಳವಾಗಿ ಆಕರ್ಷಿಸಿದವು. ಆ ಕಾರಣಕ್ಕಾಗಿಯೇ ಪಾತ್ರ ಚಿಕ್ಕದಾದರೂ ಒಪ್ಪಿಕೊಂಡೆ. ಕಥೆ ಕೇಳಲು ಸಿಡ್ನಿಗೆ ಹೋಗಿದ್ದೆ. ಅಲ್ಲೇ ನನ್ನ ಪಾತ್ರಕ್ಕೆ ಸಂಬಂಧಿಸಿದ ಮೇಕಪ್ ಟೆಸ್ಟ್ ಮಾಡಲಾಯಿತು. ಮೊದಲ ಬಾರಿ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿದ್ದು ಮರೆಯಲಾಗದ ಅನುಭವ ಎಂದಿದ್ದಾರೆ ಅಮಿತಾಬ್. (ಏಜೆನ್ಸೀಸ್)

English summary
Amitabh Bachchan who won laurels for his debut and impactful appearance in Baz Lurhman’s The Great Gatsby last year may just have yet another delight in store in 2014, for his Indian as well as overseas fans. we hear that he has been reportedly approached by the makers of Shantaram to essay the pivotal and dynamic role of Kader Bhai from the bestselling book.
Please Wait while comments are loading...