twitter
    For Quick Alerts
    ALLOW NOTIFICATIONS  
    For Daily Alerts

    'RRR' ಸಿನಿಮಾ ನೋಡಿ ಥ್ರಿಲ್ ಆದ ಹಾಲಿವುಡ್ ನಿರ್ದೇಶಕ: ಹೇಳಿದ್ದೇನು?

    |

    'RRR' ಸಿನಿಮಾ 'ಕೆಜಿಎಫ್ 2' ಹೋಲಿಕೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸೋತಿದೆಯಾದರೂ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಶಂಸೆಗಳಿಸಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.

    ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಬಿಡುಗಡೆ ಆದ ಬಳಿಕ ಅದಕ್ಕೆ ಸಿಗುತ್ತಿರುವ ಜಾಗತಿಕ ಮಟ್ಟದ ಪ್ರಶಂಸೆ ಭಾರತೀಯ ಸಿನಿಮಾರಂಗ ಹೆಮ್ಮೆ ಪಡುವಂಥಹದ್ದು.

    ಆಸ್ಕರ್ ವಿಜೇತ ನಿರ್ದೇಶಕ, ಬರಹಗಾರರು ಸೇರಿದಂತೆ ನೆಟ್‌ಫ್ಲಿಕ್ಸ್‌ನ ಜಾಗತಿಕ ಸಿಇಓ ಸಹಿತ 'RRR' ಸಿನಿಮಾ ನೋಡಿ ಪ್ರಶಂಸೆಗಳ ಸುರಿಮಳೆ ಸುರಿಸಿದ್ದಾರೆ. ಇದೀಗ ಇದೇ ಸಾಲಿಗೆ ಬ್ರಿಟೀಷ್ ನಿರ್ದೇಶಕರೊಬ್ಬರ ಸೇರಿಕೊಂಡಿದ್ದಾರೆ.

    ವಿಶ್ವದ ಶ್ರೇಷ್ಟ ನಿರ್ದೇಶಕರಲ್ಲಿ ಒಬ್ಬರಾದ ಸ್ಟಿಫನ್ ಸ್ಪೀಲ್‌ಬರ್ಗ್ ನಿರ್ದೇಶನದ 'ದಿ ಅಡ್ವೇಂಚರ್ ಆಫ್ ಟಿನ್‌ಟಿನ್' ಸಿನಿಮಾಕ್ಕೆ ಚಿತ್ರಕತೆ ಬರೆದವರಲ್ಲಿ ಒಬ್ಬರಾದ ಬ್ರಿಟೀಷ್ ಮೂಲದ ಎಡ್ಗರ್ ರೈಟ್ ಇದೀಗ RRR ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದು, ಅವರ ಸಂತಸ ಹಂಚಿಕೊಂಡಿದ್ದಾರೆ.

    ''ಕೊನೆಗೂ 'RRR' ಸಿನಿಮಾವನ್ನು ನೋಡಿದೆ. ಅದೂ ಬಿಐಎಫ್‌ ನಲ್ಲಿ ದೊಡ್ಡ ಸಂಖ್ಯೆಯ ಪ್ರೇಕ್ಷಕರ ಜೊತೆಗೆ ಕೂತು ನೋಡಿದೆ. ಇಂಟರ್ವೆಲ್‌ ಸೀನ್‌ಗೆ ದೊಡ್ಡ ಚಪ್ಪಾಳೆ ಬಿದ್ದಿದ್ದನ್ನು ನನ್ನ ಜೀವಮಾನದಲ್ಲಿ ನಾನು ನೋಡಿರಲಿಲ್ಲ ಆದರೆ ಈಗ ನೋಡಿದೆ'' ಎಂದು ಟ್ವೀಟ್ ಮಾಡಿದ್ದಾರೆ ಎಡ್ಗರ್.

    ಎಡ್ಗರ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ 'RRR' ಅಧಿಕೃತ ಟ್ವಿಟ್ಟರ್ ಖಾತೆ, ''ಇದು ನಮಗೆ ನಂಬಲಾಸಾಧ್ಯವಾಗುತ್ತಿದೆ. ನಿಮ್ಮಿಂದ ಈ ಮಾತುಗಳು ಕೇಳುತ್ತಿರುವುದು ಇನ್ನಷ್ಟು ಖುಷಿ ತಂದಿದೆ. ನಿಮಗೆ ಧನ್ಯವಾದ'' ಎಂದಿದ್ದಾರೆ.

    British Director Edgar Wright Praised Telugu Movie RRR

    ಎಡ್ಗರ್ ಗೆ ಮುನ್ನ, 'ಡಾಕ್ಟರ್ ಸ್ಟ್ರೇಂಜ್' ಸಿನಿಮಾದ ಬರಹಗಾರ ಸ್ಕಾಟ್ ಡೆರಿಕ್‌ಸನ್, ನಿರ್ದೇಶಕ ಜಾನ್ ಡಾಂಟೆ, 'ಗಾರ್ಡಿಯನ್ಸ್ ಆಫ್‌ ದಿ ಗ್ಯಾಲೆಕ್ಸಿ' ಸಿನಿಮಾದ ಜೇಮ್ಸ್ ಗನ್, ಆಸ್ಕರ್ ವಿಜೇತ 'ಡ್ಯೂನ್' ಸಿನಿಮಾದ ಚಿತ್ರಕತೆ ಜಾನ್ ಸ್ಪೈಟ್ಸ್, 'ಅವೇಂಜರ್ಸ್' ಸಿನಿಮಾದ ನಿರ್ದೇಶಕರಾದ ರೂಸ್ಸೋ ಬ್ರದರ್ಸ್ ಅವರುಗಳು ಸಹ 'RRR' ಸಿನಿಮಾವನ್ನು ಮೆಚ್ಚಿದ್ದರು.

    English summary
    British director Edgar wright praised Telugu movie RRR. He said He never seen a movie which get applause in interval.
    Sunday, August 14, 2022, 23:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X