»   » ಕಾನ್ ನಲ್ಲಿ ಥಳಕು, ಬಳಕು, ಒನಪು, ವೈಯಾರ

ಕಾನ್ ನಲ್ಲಿ ಥಳಕು, ಬಳಕು, ಒನಪು, ವೈಯಾರ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

68ನೇ ಕಾನ್(Cannes) ಚಿತ್ರೋತ್ಸವಕ್ಕೆ ರೆಡ್ ಕಾರ್ಪೆಟ್ ಸಿದ್ಧವಾಗಿದೆ. 12 ದಿನಗಳ ಕಾಲ ಭೂಲೋಕದ ಸುಂದರ, ಸುಂದರಿಯರು ಇಲ್ಲಿ ತಾರಾಲೋಕ ಸೃಷ್ಟಿಸುತ್ತಾರೆ. ಸೌಂದರ್ಯದ ರಾಶಿಯೇ ಕಡಲ ತೀರದಲ್ಲಿ ಧುಮ್ಮುಕ್ಕಿ ಹರಿಯುತ್ತದೆ. ರೆಡ್ ಕಾರ್ಪೆಟ್ ಮೇಲೆ ಅವರು ಹೆಜ್ಜೆ ಹಾಕುತ್ತಿದ್ದರೆ ಎಲ್ಲರ ಕಣ್ಣು, ಕ್ಯಾಮೆರಾಗಳು ಅವರ ಮೇಲೆ ಫೋಕಸ್. ಇಂಥ ಅವಕಾಶ ಸಿಕ್ಕರೆ ನಮ್ಮ ಬಾಲಿವುಡ್ ಬೆಡಗಿಯರು ಬಿಡುವರೇ?

ಇಲ್ಲಿ ಮಿಂಚಿದರೆ ಇಡೀ ಜಗತ್ತಿನ ಗಮನಸೆಳೆಯಬಹುದು ಎಂಬ ಅರಿವು ಎಲ್ಲಾ ಸಿನಿ ತಾರೆಗಳಿಗೂ ಇದೆ. ಹೀಗಾಗಿ ಇಲ್ಲಿನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಲು ಹಾತೊರೆಯುತ್ತಿರುತ್ತಾರೆ. ಹೊಚ್ಚ ಹೊಸ ಸಿನಿಮಾಗಳ ಪ್ರಿಮಿಯರ್ ಶೋಗೆ ಹೇಳಿ ಮಾಡಿಸಿದ ಈ ಚಲನಚಿತ್ರೋತ್ಸವದಲ್ಲಿ ಸಿನಿಮಾ ಜೊತೆಗೆ ಗ್ಲಾಮರ್ ಗೊಂಬೆಗಳನ್ನು ನೋಡಿ ಕಣ್ತುಂಬಿಸಿಕೊಳ್ಳುವ ಹಬ್ಬ ನಿರಂತರವಾಗಿ ಸಾಗಲಿದೆ.

ಕೆಂಬಣ್ಣದ ಚೆಲುವೆ ನಿಕೋಲ್ ಕಿಡ್ಮನ್ ರಿಂದ ಕುಡ್ಲ ಬೆಕ್ಕಿನ ಕಣ್ಣಿನ ಬೆಡಗಿ ಐಶ್ವರ್ಯಾ ರೈ ತನಕ ಎಲ್ಲರೂ ರೆಡ್ ಕಾರ್ಪೆಟ್ ನಲ್ಲಿ ಮಿಂಚಲಿದ್ದಾರೆ. ಬಾಲಿವುಡ್ ನಿಂದ ಕತ್ರೀನಾ ಕೈಫ್, ಸೋನಮ್ ಕಪೂರ್, ಫ್ರೀಡಾ ಪಿಂಟೋ ಮೇ.13 ರಿಂದ 24ರ ವರೆಗೆ ಪ್ರತಿದಿನ ಬಣ್ಣದ ಲೋಕದ ಬೆಡಗಿಯರ ದರ್ಶನ, ವಿಶಿಷ್ಟ ಸಿನಿಮಾಗಳ ರಸದೌತಣ ಸಿಗಲಿದೆ. ಕಾನ್ ಚಿತ್ರೋತ್ಸವದ ಬಗ್ಗೆ ಇನ್ನಷ್ಟು ವಿವರ ಮುಂದಿದೆ...

ಐಶ್ವರ್ಯಾ ರೈ

ಹಾಲಿವುಡ್ ನ ಪಿಂಕ್ ಪ್ಯಾಂಥರ್, ಬ್ರೈಡ್ ಅಂಡ್ ಪ್ರಿಜೂಡಿಸ್ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು 2002ರಿಂದ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. L Orealನ ಬೆಡರಿ 14ನೇ ಬಾರಿ ರೆಡ್ ಕಾರ್ಪೆಟ್ ತುಳಿಯುತಿದ್ದಾರೆ.

ಶರೋನ್ ಸ್ಟೋನ್

ಬೇಸಿಕ್ ಇನ್ಸ್ಟಿಂಗ್ ತಾರೆ ಶರೋನ್ ಸ್ಟೋನ್ ಹಲವು ವರ್ಷಗಳಿಂದ ಚಿತ್ರೋತ್ಸವದಲ್ಲಿ ತನ್ನ ಗ್ಲಾಮರ್ ಲುಕ್ ವೃದ್ಧಿಸಿಕೊಂಡು ಹೆಜ್ಜೆ ಇಡುತ್ತಾ ಬಂದಿದ್ದಾರೆ.

ಎಮ್ಮಾ ಸ್ಟೋನ್, ವುಡ್ಡಿ ಅಲೆನ್, ಜೋಕ್ವಿನ್

ಬ್ಲೂ ಜಾಸ್ಮಿನ್ ನಿರ್ದೇಶಕ ವುಡಿ ಅಲೆನ್ ಅವರ ಮ್ಯಾಜಿಕ್ ಇನ್ ದಿ ಮೂನ್ ಲೈಟ್ ಚಿತ್ರದಲ್ಲಿ ಎಮ್ಮಾ ವಾಟ್ಸನ್ ಹಾಗೂ ಜೋಕ್ವಿನ್ ಫೀನಿಕ್ಸ್ ಒಟ್ಟಿಗೆ ನಟಿಸಿದ್ದಾರೆ. ಈ ಬಾರಿ ಚಿತ್ರದ ಪ್ರಚಾರಕ್ಕೆ ಕಾನ್ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ.

ನಿಕೋಲ್ ಕಿಡ್ಮನ್

2013ರ ಕಾನ್ ನಲ್ಲಿ ಜ್ಯೂರಿಯಾಗಿದ್ದ ನಿಕೋಲ್ ಕಿಡ್ಮನ್ ಅವರು 'ಗ್ರೇಸ್ ಆಫ್ ಮೊನಾಕೋ' ಚಿತ್ರದ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.

ಟಾಮ್ ಹಾರ್ಡಿ ಹಾಗೂ ಚಾರ್ಲಿಜ್ ಥೆರಾನ್

ಮ್ಯಾಡ್ ಮ್ಯಾಕ್ಸ್: ಪ್ಯೂರಿ ರೋಡ್ ಈ ಬಾರಿ ಕಾನ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಟಾಮ್ ಹಾರ್ಡಿ ಹಾಗೂ ಚಾರ್ಲಿಜ್ ಥೆರಾನ್ ಅಲ್ಲದೆ ಜೋ ಕ್ರಾವಿಟ್ಜ್ ಮುಂತಾದವರು ಮ್ಯಾಡ್ ಮ್ಯಾಕ್ಸ್ ಸರಣಿ ಚಿತ್ರದ ಪ್ರಚಾರ ನಡೆಸಲಿದ್ದಾರೆ.

ಎಮ್ಮಾ ಸ್ಟೋನ್, ವುಡ್ಡಿ ಅಲೆನ್, ಜೋಕ್ವಿನ್

ಬ್ಲೂ ಜಾಸ್ಮಿನ್ ನಿರ್ದೇಶಕ ವುಡಿ ಅಲೆನ್ ಅವರ ಮ್ಯಾಜಿಕ್ ಇನ್ ದಿ ಮೂನ್ ಲೈಟ್ ಚಿತ್ರದಲ್ಲಿ ಎಮ್ಮಾ ವಾಟ್ಸನ್ ಹಾಗೂ ಜೋಕ್ವಿನ್ ಫೀನಿಕ್ಸ್ ಒಟ್ಟಿಗೆ ನಟಿಸಿದ್ದಾರೆ. ಈ ಬಾರಿ ಚಿತ್ರದ ಪ್ರಚಾರಕ್ಕೆ ಕಾನ್ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ.

ಮೈಕಲ್ ಫಾಸ್ ಬೆಂಡರ್ ಹಾಗೂ ಮಾರಿಯನ್

ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್ ರಿಮೇಕ್ ಮಾಡಿರುವ ಆಸ್ಟ್ರೇಲಿಯಾದ ಜಸ್ಟಿನ್ ಕರ್ಜೆಲ್ ಅವರ ಚಿತ್ರದ ತಾರಾಗಣ ಕಾನ್ ನಲ್ಲಿ ಕಾಣಿಸಿಕೊಳ್ಳಲಿದೆ.

ಇವಾ ಲೊಂಗೊರಿಯಾ

ಐಶ್ವರ್ಯಾರಂತೆ ಲೋರಿಯಾಲ್ ಪ್ಯಾರೀಸ್ ಸೌಂದರ್ಯವರ್ಧಕ ಉತ್ಪನ್ನಗಳ ತಾರೆ ರೆಡ್ ಕಾರ್ಪೆಟ್ ತುಳಿಯುವ ಅತಿಥಿ.

ಮೈಕಲ್ ಕೈನ್

ಅಕಾಡೆಮಿ ಪ್ರಶಸ್ತಿ ವಿಜೇತ ಮೈಕಲ್ ಅವರು ಯೂಥ್ ಚಿತ್ರದ ಶೋಗಾಗಿ ಆಗಮಿಸುವ ನಿರೀಕ್ಷೆಯಿದೆ.

ಸೋನಮ್ ಕಪೂರ್, ಫ್ರೀಡಾ ಪಿಂಟೋ

ಭಾರತದ ಬೆಡಗಿಯರಾದ ಸೋನಮ್ ಕಪೂರ್, ಫ್ರೀಡಾ ಪಿಂಟೋ ಈ ಬಾರಿಯ ಆಕರ್ಷಣೆಯಾಗಲಿದ್ದಾರೆ.

ಸಲ್ಮಾ ಹಯೇಕ್

ಎ ಟೇಲ್ ಆಫ್ ಟೇಲ್ಸ್ ಐತಿಹಾಸಿಕ ಚಿತ್ರದ ಪ್ರಚಾರಕ್ಕಾಗಿ ನಟಿ ಸಲ್ಮಾ ಹಯೇಕ್ ಬರುತ್ತಿದ್ದಾರೆ. 17ನೇ ಶತಮಾನದ ಕವಿ ಜಿಯಾಂಬಾಟಿಸ್ಟುಟಾ ಬಾಸಿಲೆ ಬರೆದ ಕಥೆಯನ್ನು ಇಟಲಿಯ ಮಾಟಿಯೀ ಗಾರೊನೆ ಅವರು ಇಂಗ್ಲೀಷ್ ನಲ್ಲಿ ತಂದಿದ್ದಾರೆ.

ನಟಿ ಶೂ ಕಿ

ತೈವಾನ್ ಮೂಲದ ಹಾಂಕಾಂಗ್ ನಟಿ ಶೂ ಕಿ ಅವರು 'ದಿ ಅಸಾಸಿನ್' ಚಿತ್ರದ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ.

ರಚೇಲ್ ವೇಜ್

ಲಾ ಗಿಯೋವಿನೆಜ್ ಹಾಗೂ ದಿ ಲಾಬ್ ಸ್ಟರ್ ಚಿತ್ರದ ಪ್ರಿಮಿಯರ್ ಶೋ ಹಾಗೂ ಪ್ರಚಾರಕ್ಕಾಗಿ ರಚೇಲ್ ವೇಜ್ ಬರುತ್ತಿದ್ದಾರೆ.

ಮ್ಯಾಥ್ಯೂ ಮೆಕ್ ಕೊನಾಘೆ, ನಯೋಮಿ ವಾಟ್ಸ್

ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದ ಮ್ಯಾಥ್ಯೂ ಹಾಗೂ ದಿ ಸೀ ಆಫ್ ಟ್ರೀಸ್ ನಟಿ ನಯೋಮಿ ವಾಟ್ಸ್

ಕತ್ರೀನಾ ಕೈಫ್

ಲೋರಿಯಲ್ ಕಂಪನಿಯ ರಾಯಭಾರಿ ಕತ್ರೀನಾ ಕೈಫ್ ಕೂಡಾ ಐಶ್ವರ್ಯಾರಂತೆ ಕಾನ್ ಗೆ ಹಳೆ ಅತಿಥಿ.

ನಟಾಲಿಯಾ ಪೋರ್ಟ್ ಮನ್

ಆಸ್ಕರ್ ವಿಜೇತೆ ನಟಾಲಿಯಾ ಪೋರ್ಟ್ ಮನ್ ಅವರು ಎ ಟೇಲ್ ಆಫ್ ಲವ್ ಅಂಡ್ ಡಾರ್ಕ್ ನೆಸ್ ಪ್ರಿಮಿಯರ್ ಗೆ ಬರಲಿದ್ದಾರೆ.

ಎಮಿಲಿ ಬ್ಲಂಟ್

ಸಿಕಾರಿಯೋ ಥ್ರಿಲ್ಲರ್ ಚಿತ್ರದ ತಾರೆ ಎಮಿಲಿ ಬ್ಲಂಟ್ ಅವರು ಎಫ್ ಬಿಐ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು ಜಾನ್ ಬ್ರೊಲಿನ್ ಬೆನೆಸಿಯೋ ಡೆಲ್ ಟೋರೊ ಜೊತೆ ಬರಲಿದ್ದಾರೆ.

English summary
The Cannes Film Festival 2015 is around the corner and Cannes's glamourous setting on the French coast is almost done. Every year, the red carpet is rolled out for 12 days and the festival notices stars from around the world gather for the premiere of the movies in different categories.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada