For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ ಸಿನಿಮೋತ್ಸವ: ದಕ್ಷಿಣ ಭಾರತ ಚಿತ್ರರಂಗಕ್ಕೆ ಹೆಚ್ಚಿನ ಆದರ

  |

  ದಕ್ಷಿಣ ಭಾರತ ಚಿತ್ರೋದ್ಯಮ ವಿಶ್ವದಾದ್ಯಂತ ಗುರುತು ಪಡೆದುಕೊಂಡಿದೆ. ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಮಾತ್ರ ಎಂಬ ಮಿಥ್ಯೆಯನ್ನು ಒಡೆದು, ಅದ್ಭುತ ಸಿನಿಮಾಗಳ ಮೂಲಕ ತನ್ನ ಇರುವಿಕೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದೆ.

  ಕೆಲವೇ ದಿನಗಳಲ್ಲಿ ವಿಶ್ವ ಜನಪ್ರಿಯ ಕ್ಯಾನ್ ಚಿತ್ರೋತ್ಸವ ನಡೆಯಲಿದ್ದು, ಪ್ರತಿ ಬಾರಿ ಬಾಲಿವುಡ್ಡಿಗರಿಗೆ ಚಿತ್ರೋತ್ಸವಕ್ಕೆ ಮಣೆ ಹಾಕಲಾಗುತ್ತಿತ್ತು. ಆದರೆ ಈ ಬಾರಿ ದಕ್ಷಿಣ ಭಾರತ ಸಿನಿಮಾಗಳು ಹಾಗೂ ನಟ-ನಟಿಯರಿಗೆ ವಿಶೇಷ ಆಹ್ವಾನಗಳನ್ನು ನೀಡಲಾಗಿದೆ.

  ಪ್ರತಿ ಬಾರಿ ಬಾಲಿವುಡ್‌ನ ಹೀರೋಯಿನ್‌ಗಳೇ ಕ್ಯಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಚಿತ್ರ ವಿಚಿತ್ರ ಉಡುಗೆಗಳನ್ನು ತೊಟ್ಟು ಮಿಂಚುತ್ತಿದ್ದರು. ಆದರೆ ಈ ಬಾರಿ ಆ ಅವಕಾಶ ದಕ್ಷಿಣ ಭಾರತ ಸಿನಿಮಾ ನಟಿಯರಿಗೆ ಒದಗಿ ಬಂದಿದೆ.

  ಈ ಬಾರಿ ಭಾರತದಿಂದ ಕ್ಯಾನ್ ಚಿತ್ರೋತ್ಸವಕ್ಕೆ ಆಹ್ವಾನ ಪಡೆದಿರುವ ನಟಿಯರಲ್ಲಿ ದಕ್ಷಿಣ ಭಾರತದ ನಟಿಯರೇ ಹೆಚ್ಚು. ನಟಿ ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ ಹಾಗೂ ಲೇಡಿ ಸೂಪರ್ ಸ್ಟಾರ್ ನಯನತಾರಾ ಈ ಬಾರಿ ಭಾರತದಿಂದ ವಿಶೇಷ ಆಹ್ವಾನ ಪಡೆದಿರುವ ನಟಿಯರಾಗಿದ್ದಾರೆ.

  ನಟಿಯರು ಮಾತ್ರವಲ್ಲ ಸಂಗೀತ ವಿಭಾಗದಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಗ್ರಾಮಿ ವಿಜೇತ, ಕರ್ನಾಟಕದ ರಿಕ್ಕಿ ಕೇಜ್ ಮತ್ತು ರಾಜಸ್ಥಾನದ ಜನಪದ ಗಾಯಕ ಮಾಮೆ ಖಾನ್ ಸಹ ವಿಶೇಷ ಆಹ್ವಾನಿತರಾಗಿದ್ದಾರೆ. ನಟಿ ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಆಗಿ ಆಯ್ಕೆ ಆಗಿದ್ದಾರೆ. ಯಾವ ಸಿನಿಮಾಕ್ಕೆ ಪ್ರಶಸ್ತಿ ನೀಡಬೇಕೆನ್ನುವ ಆಯ್ಕೆ ಮಂಡಳಿಯ ಸದಸ್ಯೆಯಾಗಿ ದೀಪಿಕಾ ಪಡುಕೋಣೆ ಕಾರ್ಯ ನಿರ್ವಹಿಸಲಿದ್ದಾರೆ.

  ಇನ್ನು ಭಾರತದ ಹಲವು ಸಿನಿಮಾಗಳು ಕ್ಯಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ತಮಿಳಿನಲ್ಲಿ ಆರ್.ಮಾಧವನ್ ನಟಿಸಿ, ನಿರ್ದಶನ ಮಾಡಿರುವ 'ರಾಕೆಟ್ರಿ', ಮರಾಠಿ ಸಿನಿಮಾ 'ಗೋಧಾವರಿ', ಅಂಚಲ್ ಮಿಶ್ರಾ ನಿರ್ದೇಶನ ಮಾಡಿರುವ 'ಧುಹಿನ್', 'ಆಲ್ಫಾ ಬೀಟಾ ಗಾಮಾ', 'ಬೂಂಬಾ ರೈಡ್', 'ಟ್ರೀ ಫುಲ್ ಆಫ್ ಪ್ಯಾರೆಟ್ಸ್' ಇನ್ನೂ ಕೆಲವು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

  75ನೇ ಕ್ಯಾನ್ ಚಿತ್ರೋತ್ಸವವು ಮೇ 17 ರಿಂದ 28 ರವರೆಗೆ ಫ್ರಾನ್ಸ್‌ನ ಕಾನ್‌ನಲ್ಲಿ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ವಿಶ್ವದ ಹಲವು ಅತ್ಯುತ್ತಮ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

  English summary
  Cannes film fest south Indian movie industry actress Nayanthara, Pooja Hegde, Tamanna Bhatia invited as special members. they walk on red carpet.
  Saturday, May 14, 2022, 17:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X