twitter
    For Quick Alerts
    ALLOW NOTIFICATIONS  
    For Daily Alerts

    ಕ್ರಿಸ್ಟೊಫರ್ ನೋಲನ್ ಮುಂದಿನ ಸಿನಿಮಾದ ಕತೆ ಫೈನಲ್

    |

    ಜಗತ್ತಿನ ನಂಬರ್ ಒನ್ ನಿರ್ದೇಶಕ ಎನ್ನಲಾಗುವ ಕ್ರಿಸ್ಟೊಫರ್ ನೋಲನ್ ತಮ್ಮ ಮುಂದಿನ ಸಿನಿಮಾಕ್ಕೆ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಈ ಕಾಲದ ಅತ್ಯಂತ ಕ್ರಿಯಾಶೀಲ, ಕ್ರಿಯಾತ್ಮಕ ಜೊತೆಗೆ ಸಂಕೀರ್ಣ ನಿರ್ದೇಶಕ ಎಂದೇ ಹೆಸರಾಗಿರುವ ಕ್ರಿಸ್ಟೋಫರ್ ನೋಲನ್ ಮುಂದಿನ ಸಿನಿಮಾ ಯಾವ ವಿಷಯದ ಮೇಲೆ ಮಾಡುತ್ತಾರೆ ಎಂದು ವಿಶ್ವದ ಸಿನಿಮಾ ಪ್ರೇಮಿಗಳೇ ಕುತೂಹಲದಿಂದ ಕಾಯುತ್ತಿರುತ್ತಾರೆ.

    ಕ್ರಿಸ್ಟೊಫರ್ ನೋಲನ್ ಬಹಳ ಸಂಕಿರ್ಣವಾದ, ವಿಜ್ಞಾನ ಸಂಬಂಧಿ, ಕ್ಲಿಷ್ಟ ವಿಷಯಗಳನ್ನು ಸಿನಿಮಾಕ್ಕೆ ಆಯ್ದುಕೊಳ್ಳುತ್ತಾರೆ. ಹಾಗಾಗಿ ಕ್ರಿಸ್ಟೊಫರ್ ಕತೆ ಆಯ್ಕೆ ಬಗ್ಗೆ ಕುತೂಹಲ ಇದ್ದದ್ದೆ. ಆದರೆ ಕ್ರಿಸ್ಟೊಫರ್ ತಮ್ಮ ಮುಂದಿನ ಸಿನಿಮಾಕ್ಕೆ ಕತೆಯನ್ನು ಫೈನಲ್ ಮಾಡಿದ್ದಾರೆ.

    ಕ್ರಿಸ್ಟೊಫರ್ ನೋಲನ್ ಎರಡನೇ ಬಾರಿಗೆ ವಿಶ್ವ ಯುದ್ಧ 2ರ ಕುರಿತಾದ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೊದಲು 2017ರಲ್ಲಿ ವಿಶ್ವಯುದ್ಧ ಎರಡರ ಘಟನೆಯೊಂದನ್ನು ಕುರಿತು 'ಡಂಕಿರ್ಕ್' ಸಿನಿಮಾ ಮಾಡಿದ್ದ ಕ್ರಿಸ್ಟೊಫರ್ ನೋಲನ್ ಇದೀಗ ವಿಶ್ವಯುದ್ಧದ ಮತ್ತೊಂದು ಮುಖ್ಯ ವಿಷಯವನ್ನು ತಮ್ಮ ಮುಂದಿನ ಸಿನಿಮಾದ ಕತೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

    ಅಣುಬಾಂಬ್‌ನ ಪಿತಾಮಹನ ಕುರಿತು ಸಿನಿಮಾ

    ಅಣುಬಾಂಬ್‌ನ ಪಿತಾಮಹನ ಕುರಿತು ಸಿನಿಮಾ

    ವಿಶ್ವಯುದ್ಧ 2 ರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಅಣುಬಾಂಬ್. ಅಮೆರಿಕ ಜಪಾನ್‌ನ ಮೇಲೆ ಹಾಕಿದ ಅಣುಬಾಂಬ್ ಮಾನವ ಇತಿಹಾಸದ ಅತ್ಯಂತ ವಿಧ್ವಂಸಕಾರಿ ಘಟನೆ ಎಂದೇ ಇಂದಿಗೂ ಕರೆಯಲಾಗುತ್ತದೆ. ಈ ಅಣುಬಾಂಬ್ ಅಭಿವೃದ್ಧಿ ಪಡಿಸಿದ ವಿಜ್ಞಾನಿ ರಾಬರ್ಟ್ ಒಫನ್ಹೇಮರ್ ಅನ್ನು ಮುಖ್ಯ ಪಾತ್ರಧಾರಿಯನ್ನಾಗಿಸಿ ಅಣುಬಾಂಬ್ ಅಭಿವೃದ್ಧಿಯ ಸುತ್ತ-ಮುತ್ತಲ ಘಟನೆಗಳನ್ನು ಪ್ರಧಾನವಾಗಿಟ್ಟುಕೊಂಡ ಕ್ರಿಸ್ಟೊಫರ್ ನೋಲನ್ ತಮ್ಮ ಮುಂದಿನ ಸಿನಿಮಾ ಮಾಡಲಿದ್ದಾರೆ.

    ವಾರ್ನರ್‌ ಬ್ರದರ್ಸ್ ಬದಲಿಗೆ ಬೇರೆ ಸಂಸ್ಥೆಯೊಂದಿಗೆ ನಿರ್ಮಾಣ

    ವಾರ್ನರ್‌ ಬ್ರದರ್ಸ್ ಬದಲಿಗೆ ಬೇರೆ ಸಂಸ್ಥೆಯೊಂದಿಗೆ ನಿರ್ಮಾಣ

    ಅಣುಬಾಂಬ್ ಹಾಗೂ ವಿಜ್ಞಾನಿ ರಾಬರ್ಟ್ ಒಫನ್ಹೇಮರ್ ಕುರಿತ ಸಿನಿಮಾವನ್ನು ವಾರ್ನರ್‌ ಬ್ರದರ್ಸ್‌ ಬದಲಿಗೆ ಬೇರೆ ನಿರ್ಮಾಣ ಸಂಸ್ಥೆಯೊಂದಿಗೆ ಮಾಡುವ ಸಾಧ್ಯತೆ ಇದೆ. ಕ್ರಿಸ್ಟೊಫರ್ ತಮ್ಮ ಈವರೆಗಿನ ಹಲವು ಸಿನಿಮಾಗಳನ್ನು ವಾರ್ನರ್ಸ್ ಬ್ರದರ್ಸ್ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಆದರೆ ಈ ಬಾರಿ ಬೇರೆ ನಿರ್ಮಾಣ ಸಂಸ್ಥೆಯನ್ನು ಸಂಪರ್ಕ ಮಾಡುತ್ತಿದ್ದಾರೆ. ಇನ್ನು ವಿಜ್ಞಾನಿ ರಾಬರ್ಟ್ ಒಫನ್ಹೇಮರ್ ಪಾತ್ರದಲ್ಲಿ ಕ್ರಿಸ್ಟೊಫರ್‌ನ ಮಚ್ಚಿನ ನಟ ಸಿಲಿಯನ್ ಮರ್ಫಿ ನಟಿಸಲಿದ್ದಾರೆ. ಕ್ರಿಸ್ಟೊಫರ್ ನೋಲನ್ ನಿರ್ದೇಶನದ ಆರು ಸಿನಿಮಾಗಳಲ್ಲಿ ಸಿಲಿಯನ್ ಮರ್ಫಿ ನಟಿಸಿದ್ದಾರೆ.

    ಅಣು ಬಾಂಬ್‌ನ ಪಿತಾಮಹ

    ಅಣು ಬಾಂಬ್‌ನ ಪಿತಾಮಹ

    ವಿಜ್ಞಾನಿ ರಾಬರ್ಟ್ ಒಫನ್ಹೇಮರ್ ಅನ್ನು ಅಣು ಬಾಂಬ್‌ನ ಪಿತಾಮಹ ಎಂದೇ ಕರೆಯಲಾಗುತ್ತದೆ. ವಿಶ್ವಯುದ್ಧ ಎರಡರ ಸಂದರ್ಭದಲ್ಲಿ ಅಮೆರಿಕದಲ್ಲಿ ನಡೆದ ಮ್ಯಾನ್‌ಹಾಟನ್ ಆಪರೇಷನ್‌ನ ನೇತೃತ್ವ ವಹಿಸಿದ್ದು ಇದೇ ರಾಬರ್ಟ್ ಒಫನ್ಹೇಮರ್. ಕ್ರಿಸ್ಟೊಫರ್ ಸಿನಿಮಾವು ರಾಬರ್ಟ್ ಒಫನ್ಹೇಮರ್ ಪ್ರತಿಭೆ ಜೊತೆಗೆ ಮ್ಯಾನ್‌ಹಾಟನ್ ಆಪರೇಷನ್‌ನ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರಲಿವೆ. ಜೊತೆಗೆ ವಿಶ್ವಯುದ್ಧ ಎರಡರ ಮಾಹಿತಿಗಳೂ ಸಹ ಇರಲಿವೆ.

    ಸಂಕೀರ್ಣವಾದ ವಿಷಯಗಳ ಕುರಿತು ಸಿನಿಮಾ ಮಾಡುತ್ತಾರೆ

    ಸಂಕೀರ್ಣವಾದ ವಿಷಯಗಳ ಕುರಿತು ಸಿನಿಮಾ ಮಾಡುತ್ತಾರೆ

    ಕ್ರಿಸ್ಟೊಫರ್‌ ಈ ಹಿಂದೆ ಬಹಳ ಸಂಕೀರ್ಣವಾದ ವಿಷಯಗಳನ್ನು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಕನಸು, ಸಮಯ, ಶಕ್ತಿ, ಅಂತರಿಕ್ಷ, ನೆನಪು ಹೀಗೆ ಭಿನ್ನ ವಿಷಯಗಳನ್ನು ಇಟ್ಟುಕೊಂಡು ಬಹಳ ಭಿನ್ನವಾಗಿ ಸಿನಿಮಾ ನಿರ್ದೇಶನ ಮಾಡುತ್ತಾರೆ ಕ್ರಿಸ್ಟೊಫರ್. ಕಳೆದ ವರ್ಷ ಬಿಡುಗಡೆ ಆದ 'ಟೆನೆಟ್' ಕ್ರಿಸ್ಟೊಫರ್‌ರ ಕೊನೆಯ ಸಿನಿಮಾ. ಈ ಸಿನಿಮಾವು ಹಿಮ್ಮುಖ ಚಲನೆಯ ವಿಷಯವನ್ನು ಆಧರಿಸಿತ್ತು.

    11 ಸಿನಿಮಾ ಅಷ್ಟೆ ನಿರ್ದೇಶಿಸಿರುವ ನೋಲನ್

    11 ಸಿನಿಮಾ ಅಷ್ಟೆ ನಿರ್ದೇಶಿಸಿರುವ ನೋಲನ್

    ಕ್ರಿಸ್ಟೊಫರ್ ನೋಲನ್ ಈವರೆಗೆ ನಿರ್ದೇಶಿಸಿರುವುದು ಕೇವಲ 11 ಸಿನಿಮಾಗಳು ಆದರೆ ವಿಶ್ವದ ಅತ್ಯುತ್ತಮ ನಿರ್ದೇಶಕರ ಸಾಲಿನಲ್ಲಿ ಕ್ರಿಸ್ಟೊಫರ್ ನೋಲನ್ ಹೆಸರಿದೆ. 'ಫಾಲೊವಿಂಗ್', 'ಮೆಮೆಂಟೊ', 'ಇನ್‌ಸೋಮಿಯಾ', 'ಬ್ಯಾಟ್‌ಮ್ಯಾನ್ ಬಿಗಿನ್ಸ್', 'ದಿ ಪ್ರೆಸ್ಟೀಜ್', 'ದಿ ಡಾರ್ಕ್ ನೈಟ್', 'ಇನ್‌ಸೆಪ್ಷನ್', 'ದಿ ಡಾರ್ಕ್ ನೈಟ್ ರೈಸಸ್', 'ಇಂಟರ್‌ಸ್ಟೆಲ್ಲರ್', 'ಡಂಕಿರ್ಕ್', 'ಟೆನೆಟ್' ಸಿನಿಮಾಗಳನ್ನು ನೋಲನ್ ನಿರ್ದೇಶನ ಮಾಡಿದ್ದಾರೆ. ಇವರ ಸಿನಿಮಾಗಳಿಗೆ ಹಲವು ಆಸ್ಕರ್‌ ಪ್ರಶಸ್ತಿಗಳು ದೊರಕಿವೆ.

    English summary
    Famous director Christopher Nolan's next movie is based on father of Atomic bomb J.Robert Oppenheimer and his Manhattan project.
    Monday, September 13, 2021, 18:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X