twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ದಿನದ ಬಂಪರ್ ಆಫರ್: ಅವತಾರ್ 3D ಮಲ್ಟಿಪ್ಲೆಕ್ಸ್ ಟಿಕೆಟ್ ಬೆಲೆ ಕೇವಲ 75!

    |
    Cinema lovers can watch Avatar 3D version with just 75 rupees on multiplexes

    ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ ಅವತಾರ್ 2009ರಲ್ಲಿ ತೆರೆಕಂಡು ಗಲ್ಲಾ ಪೆಟ್ಟಿಗೆಯನ್ನು ಅಕ್ಷರಶಃ ಲೂಟಿ ಮಾಡಿತ್ತು. ಅವತಾರ್ ಬಿಡುಗಡೆಯಾದ ನಂತರ ಅಲ್ಲಿಯವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿತು.

    ಹೀಗೆ ಅಂದು ಅವತಾರ್ ನಿರ್ಮಿಸಿದ್ದ ದಾಖಲೆಯನ್ನು ಬರೋಬ್ಬರಿ ಹತ್ತು ವರ್ಷಗಳ ಬಳಿಕ ಅವೆಂಜರ್ಸ್ ದಿ ಎಂಡ್ ಗೇಮ್ 2019ರಲ್ಲಿ ಮುರಿದು ಹಾಕಿತು. ಹೀಗೆ ಹತ್ತು ವರ್ಷಗಳ ಕಾಲ ಯಾರಿಂದಲೂ ಮುರಿಯಲು ಆಗದಿದ್ದಂತಹ ಬಾಕ್ಸಾಫೀಸ್ ದಾಖಲೆಯನ್ನು ನಿರ್ಮಿಸಿದ್ದ ಅವತಾರ್ ಇದೀಗ ತ್ರಿಡಿ ಹಾಗೂ ಫೋರ್ ಡಿ ಐಮ್ಯಾಕ್ಸ್‌ನಲ್ಲಿ ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ.

    ಈ ಹಿಂದೆ ಸಾಮಾನ್ಯ ವರ್ಷನ್ ನೋಡಿದ್ದ ಪ್ರೇಕ್ಷಕರು ಈ ಚಿತ್ರದ ಅಪ್ ಡೇಟೆಡ್ ವರ್ಷನ್ ವೀಕ್ಷಿಸುವ ಅವಕಾಶ ಲಭಿಸಲಿದೆ. ಶುಕ್ರವಾರ ( ಸೆಪ್ಟೆಂಬರ್ 23 ) ಚಿತ್ರ ಬಿಡುಗಡೆಯಾಗಲಿದ್ದು, ಅದೇ ದಿನ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ 'ನ್ಯಾಷನಲ್ ಸಿನಿಮಾ ದಿನ'ವನ್ನು ಆಚರಿಸಲು ನಿರ್ಧರಿಸಿದೆ.

    ಈ ವಿಶೇಷ ದಿನದಂದು ಭಾರತದ ಮಲ್ಟಿಫ್ಲೆಕ್ಸ್ ಸಂಸ್ಥೆಗಳು ಕೊರೋನಾವೈರಸ್ ಸಮಯದಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿ ತಮ್ಮ ವ್ಯವಹಾರ ಮತ್ತೆ ಎದ್ದು ನಿಲ್ಲುವಂತೆ ಮಾಡಲು ಸಹಕರಿಸಿದ ಸಿನಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿರುವ ಹಿನ್ನೆಲೆಯಲ್ಲಿ ಟಿಕೆಟ್‌ಗಳನ್ನು ಕೇವಲ 75 ರೂಪಾಯಿಗಳಿಗೆ ನೀಡಲು ನಿರ್ಧರಿಸಿದೆ. ಹೀಗಾಗಿ ಅವತಾರ್ ಚಿತ್ರದ ಮೊದಲ ದಿನದ ಟಿಕೆಟ್ ದರ ಬಹುತೇಕ ಎಲ್ಲಾ ಮಲ್ಟಿಪ್ಲೆಕ್ಸ್ ಶೋಗಳಲ್ಲಿಯೂ 75 ರೂಪಾಯಿಗಳಿರಲಿವೆ.

    ಇನ್ನು ಕ್ಲಾಸಿಕ್ ವಿಭಾಗಗಳ ಟಿಕೆಟ್ ದರ ಮಾತ್ರ 75 ರೂಪಾಯಿಗಳಿದ್ದು, ಸೋಫಾ ಹಾಗೂ ರಿಕ್ಲೈನರ್ ವಿಭಾಗಗಳ ಟಿಕೆಟ್ ದರ ಇದಕ್ಕಿಂತ ಹೆಚ್ಚಿದೆ. ಇನ್ನು 3ಡಿ ಶೋಗಳ ಟಿಕೆಟ್ ದರ ಕೂಡ 75 ರೂಪಾಯಿಗಳಷ್ಟೇ ಇದ್ದು, ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್ ಓಪನ್ ಆಗಿದ್ದು, ಚಿತ್ರದ ಮೇಲೆ ಆಸಕ್ತಿ ಇರುವ ಸಿನಿಪ್ರೇಕ್ಷಕರು ಕಡಿಮೆ ದರದಲ್ಲಿ ಅವತಾರ್ ತ್ರಿಡಿ ಎಕ್ಸ್ ಪೀರಿಯನ್ಸ್ ಪಡೆಯಬಹುದಾಗಿದೆ.

    English summary
    Cinema lovers can watch Avatar 3D version with just 75 rupees on multiplexes
    Wednesday, September 21, 2022, 22:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X