For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ರಶ್ದಿಯ ಬೆಂಬಲಿಸಿದ 'ಹ್ಯಾರಿ ಪಾಟರ್' ಸೃಷ್ಟಿಕರ್ತೆಗೆ ಕೊಲೆ ಬೆದರಿಕೆ

  |

  ಖ್ಯಾತ ಬರಹಗಾರ ಸಲ್ಮಾನ್ ರಶ್ದಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಹ್ಯಾರಿ ಪಾಟರ್ ಸೃಷ್ಟಿಕರ್ತೆ ಜೆಕೆ ರೋಲಿಂಗ್‌ಗೆ ಕೊಲೆ ಬೆದರಿಕೆ ಹಾಕಲಾಗಿದೆ.

  ಸಲ್ಮಾನ್ ರಶ್ದಿ ವಿರುದ್ಧ ನಡೆದ ಹತ್ಯಾ ಯತ್ನವನ್ನು ಖಂಡಿಸಿ ಟ್ವೀಟ್ ಮಾಡಿದ್ದ ಜೆಕೆ ರೋಲಿಂಗ್ ''ಭಯನಾಕ ಸುದ್ದಿ ಇದು. ಸುದ್ದಿ ಕೇಳಿದ ಬಳಿಕ ಈ ಕ್ಷಣದಲ್ಲಿ ಬಹಳ ಬೇಸರ ಎನಿಸುತ್ತಿದೆ. ಅವರು ಆರೋಗ್ಯವಾದರೆ ಸಾಕು'' ಎಂದಿದ್ದರು.

  ಸಲ್ಮಾನ್ ರಶ್ದಿ ಮೇಲೆ ದಾಳಿ: ಜಿಹಾದಿ ಕೃತ್ಯವೆಂದ ಕಂಗನಾಸಲ್ಮಾನ್ ರಶ್ದಿ ಮೇಲೆ ದಾಳಿ: ಜಿಹಾದಿ ಕೃತ್ಯವೆಂದ ಕಂಗನಾ

  ಜೆಕೆ ರೋಲಿಂಗ್‌ರ ಟ್ವೀಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದ ವ್ಯಕ್ತಿಯೊಬ್ಬ, ''ಹೆಚ್ಚು ಚಿಂತೆ ಮಾಡಬೇಡ, ಮುಂದಿನ ಟಾರ್ಗೆಟ್ ನೀನೇ'' ಎಂದಿದ್ದಾನೆ. ಈ ಟ್ವೀಟ್ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಟ್ವಿಟ್ಟರ್‌ನಲ್ಲಿ ಜೆಕೆ ರೋಲಿಂಗ್‌ಗೆ ಬೆದರಿಕೆ ಬರುತ್ತಿದ್ದಂತೆ ಅವರ ಹಲವು ಅಭಿಮಾನಿಗಳು ಅವರ ಬೆಂಬಲಕ್ಕೆ ಬಂದಿದ್ದು, ಲೇಖಕಿಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ರೋಲಿಂಗ್, ''ಬೆಂಬಲ ಸೂಚಿಸಿ ಸಂದೇಶ ಕಳಿಸುತ್ತಿರುವ ಎಲ್ಲರಿಗೂ ಧನ್ಯವಾದ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ'' ಎಂದಿದ್ದಾರೆ.

  ರೋಲಿಂಗ್‌ಗೆ ಬೆದರಿಕೆ ಹಾಕಿದ್ದ ಟ್ವಿಟ್ಟರ್ ಹ್ಯಾಂಡಲ್ ಅನ್ನು ಪರಿಶೀಲಿಸಿರುವ ಪೊಲೀಸರು, ಸಲ್ಮಾನ್ ರಶ್ದಿ ಮೇಲೆ ಆಯುಧದಿಂದ ದಾಳಿ ನಡೆಸಿರುವ ಹದಿ ಮತರ್ ಅನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾನೆ.

  ವಿಶ್ವದ ಅತ್ಯಂತ ಜನಪ್ರಿಯ ಲೇಖಕಿಯರಲ್ಲಿ ಒಬ್ಬರಾಗಿರುವ ಜೆಕೆ ರೋಲಿಂಗ್ ತಮ್ಮ 'ಹ್ಯಾರಿ ಪಾಟರ್' ಪುಸ್ತಕದಿಂದ ಜಗತ್ ವಿಖ್ಯಾತರು. ಅತಿ ಹೆಚ್ಚು ಸೇಲ್ ಆಗಿರುವ ಪುಸ್ತಕಗಳಲ್ಲಿ ಅವರ ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳಿವೆ.

  ಸಲ್ಮಾನ್ ರಶ್ದಿ ನ್ಯೂಯಾರ್ಕ್‌ನ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುವಾಗ ವೇದಿಕೆ ಏರಿದ್ದ ಹದಿ ಮತರ್ ರಶ್ದಿಗೆ ಚಾಕುವಿನಿಂದ ಸುಮಾರು 20 ಬಾರಿ ಚಾಕುವಿನಿಂದ ಇರಿದಿದ್ದ. ಕೂಡಲೇ ಸಲ್ಮಾನ್ ರಶ್ದಿಯನ್ನು ಏರ್‌ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರು ತಮ್ಮ ಒಂದು ಕಣ್ಣನ್ನು ಶಾಶ್ವತವಾಗಿ ಕಳೆದುಕೊಳ್ಳುವ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

  ಸಲ್ಮಾನ್ ರಶ್ದಿ ಜನಪ್ರಿಯ ಬರಹಗಾರರಾಗಿದ್ದು 'ಮಿಡ್ ನೈಟ್ ಚಿಲ್ಡ್ರನ್ಸ್', 'ದಿ ಸ್ಯಾಟನಿಕ್ ವರ್ಸ್' ಅವರ ಅತಿ ಜನಪ್ರಿಯ ಪುಸ್ತಕಗಳು. ಅದರಲ್ಲೂ 'ದಿ ಸ್ಯಾಟನಿಕ್ ವರ್ಸ್' ವಿವಾದವನ್ನೂ ಹುಟ್ಟುಹಾಕಿತ್ತು.

  English summary
  Death threat given through twitter to JK Rowling over supporting Salman Rashdi. Police investigating the matter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X