For Quick Alerts
  ALLOW NOTIFICATIONS  
  For Daily Alerts

  ನಕ್ಕು ನಲಿಸುವ ಮಿ. ಬೀನ್ 'ಪಾತ್ರ' ಇನ್ನಿಲ್ಲ

  By Mahesh
  |

  ಹೌದು, ಮಿ. ಬೀನ್ ಪಾತ್ರ ಇಲ್ಲ.ವಿಶ್ವದಾದ್ಯಂತ ಯಾವ ಪಾತ್ರ ಪರದೆ ಮೇಲೆ ಬರುತ್ತಿದ್ದಂತೆ ಎಲ್ಲರ ಮುಖದಲ್ಲಿ ಮಂದಹಾಸ ಚಿಮ್ಮುತ್ತಿತ್ತೋ ಆ ಪಾತ್ರ ಇನ್ಮುಂದೆ ನೋಡಲು ಸಾಧ್ಯವಿಲ್ಲ.

  ಇನ್ನೇನ್ನಿದ್ದರೂ ಮಿ.ಬೀನ್ ಸರಣಿಯ ಹಳೆ ಚಿತ್ರಗಳ ಡಿವಿಡಿ ಖರೀದಿಸಿ, ಶೇಖರಿಸಿಟ್ಟುಕೊಂಡು ನೋಡಬೇಕು ಅಷ್ಟೆ. ಮಿ.ಬೀನ್ ಎಂದೇ ಖ್ಯಾತರಾಗಿರುವ ನಟ, ಹಾಸ್ಯಗಾರ ರೋವನ್ ಅಟ್ಕಿನ್ಸನ್ ಅವರು ಇನ್ಮುಂದೆ 'ಮಿ.ಬೀನ್' ಪಾತ್ರಧಾರಿ ಆಗಲಾರೆ ಎಂದು ಘೋಷಿಸಿದ್ದಾರೆ. ಈ ಮೂಲಕ ಅಪಾರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

  57 ವರ್ಷದ ಇಂಗ್ಲೀಷ್ ನಟ ಅಟ್ಕಿನ್ಸನ್ ಈಗ 'ಮಿ.ಬೀನ್' ಪಾತ್ರ ಮಾಡಿದರೆ ಅದು ಬಾಲಿಶವಾಗಿರುತ್ತದೆ ಅಲ್ಲವೇ ವಿಷಾದಕರವಾಗಿ ಕಾಣಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  2012ರ ಲಂಡನ್ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ಅಟ್ಕಿನ್ಸನ್ 'ಮಿ.ಬೀನ್' ರೂಪದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಹಾಸ್ಯ ಪಾತ್ರಗಳಲ್ಲಿ ನಟಿಸದಿರಲು ನಾನು ನಿರ್ಧರಿಸಿದ್ದೇನೆ. ಗಂಭೀರ ಪಾತ್ರಗಳತ್ತ ಹೆಚ್ಚು ಗಮನ ಹರಿಸುತ್ತಿರುವೆ ಎಂದು ಡೈಲಿ ಸ್ಟಾರ್ ಆನ್ ಲೈನ್ ಗೆ ಅಟ್ಕಿಸನ್ ಹೇಳಿದ್ದಾರೆ.

  ಮಿ.ಬೀನ್ ಪಾತ್ರ ಹೆಚ್ಚು ಜನಪ್ರಿಯತೆ ಜೊತೆಗೆ ನಿರ್ಮಾಪಕರ ಜೋಳಿಗೆ ತುಂಬಿಸಿದೆ ಎಂಬ ಅರಿವಿದೆ. ಅದರೆ, ಯಾಕೋ ಮಿ,ಬೀನ್ ಪಾತ್ರದ ಹಾವ ಭಾವಗಳನ್ನು ಈಗ ನೋಡಿದರೆ ತೀರಾ ಬಾಲಿಶ ಎನಿಸುತ್ತಿದೆ. ಬಹುತೇಕ ಮಿ.ಬೀನ್ ಪಾತ್ರದ ವೇಷ ಕಳಚಿ ದೂರ ಬಂದಿದ್ದೇನೆ ಎಂದು ಅಟ್ಕಿನ್ಸನ್ ಹೇಳಿದ್ದಾರೆ.

  ನನಗೂ ಈಗ ವಯಸ್ಸಾಗಿದೆ ವಯಸ್ಸಿಗೆ ತಕ್ಕ ಪಾತ್ರ ಮಾಡುವುದು ಒಳಿತು. ಹಾಸ್ಯ ಹೋಗಿ ಹಾಸ್ಯಾಸ್ಪದವಾಗಬಾರದು. ಪ್ರೇಕ್ಷಕರನ್ನು ನಗಿಸಬೇಕೇ ಹೊರತು ಅವರ ಮುಂದೆ ನಗೆಪಾಟಲಾಗಬಾರದು. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮರ್ಯಾದೆ, ಕಾಲಮಿತಿ ಇರುತ್ತದೆ ಎಂದು ಅಟ್ಕಿನ್ಸನ್ ಅಭಿಪ್ರಾಯಪಟ್ಟಿದ್ದಾರೆ.

  1990ರಲ್ಲಿ ಮಿ.ಬೀನ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಅಟ್ಕಿನ್ಸನ್ ಅವರು ಐದು ವರ್ಷ ಟಿವಿ ಸರಣಿಯಲ್ಲಿ ಹಾಗೂ 2 ಯಶಸ್ವಿ ಚಿತ್ರಗಳನ್ನು ಈ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದರು. (ಪಿಟಿಐ)

  English summary
  Actor-comedian Rowan Atkinson fears the end of his beloved comedy creation ‘Mr Bean’ is near as playing him has become ‘childish and sad’. “The stuff that has been most commercially successful for me — basically quite physical, quite childish — I increasingly feel I’m going to do a lot less of,” Atkinson said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X