Just In
Don't Miss!
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Finance
3 ದಿನಗಳ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ: ಬೆಂಗಳೂರಿನಲ್ಲಿ 94 ರೂ. ಗಡಿ ದಾಟಿದೆ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Automobiles
ಮಾರ್ಚ್ 3ರಿಂದ ಕಿಗರ್ ಕಂಪ್ಯಾಕ್ಟ್ ಎಸ್ಯುವಿ ಕಾರಿನ ವಿತರಣೆಗೆ ಸಜ್ಜಾದ ರೆನಾಲ್ಟ್
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭ ವಿಭಿನ್ನ: ಹಲವು ದೇಶಗಳಿಂದ ಲೈವ್
ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭ ಸಂಪೂರ್ಣ ಭಿನ್ನವಾಗಿರಲಿದೆ. ಸಾಮಾನ್ಯವಾಗಿ ಆಸ್ಕರ್ ಪ್ರಶಸ್ತಿ ಸಮಾರಂಭವು ಕ್ಯಾಲಿಫೋರ್ನಿಯಾದ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿತ್ತು. ಈ ಬಾರಿಯೂ ಅಲ್ಲೇ ನಡೆಯುತ್ತದೆಯಾದರೂ ಸಮಾರಂಭ ಸಂಪೂರ್ಣ ಭಿನ್ನವಾಗಿರಲಿದೆ.
ಕೊರೊನಾ ಕಾರಣ ಈ ಬಾರಿಯ ಸಮಾರಂಭದಲ್ಲಿ ಅತಿಥಿಗಳಿಗೆ ಆಹ್ವಾನವಿರುವುದಿಲ್ಲ. ಬದಲಿಗೆ ಕಾರ್ಯಕ್ರಮದ ಲೈವ್ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತದೆ.
ಅಷ್ಟೇ ಅಲ್ಲದೆ, ಆಸ್ಕರ್ ನಾಮಿನೇಷನ್ ಆದ ಸಿನಿಮಾಗಳ ನಟ, ನಿರ್ದೇಶಕರು ಇರುವ ದೇಶಗಳಿಗೆ ತೆರಳಿ ಅಲ್ಲಿಂದಲೇ ಲೈವ್ ಮಾಡಿ, ಅಲ್ಲಿಯೇ ಗೆದ್ದವರ ಭಾಷಣಗಳನ್ನು ರೆಕಾರ್ಡ್ ಮಾಡಿ ಲೈವ್ ಮಾಡಲಾಗುತ್ತದೆ.
ಹಲವು ಮುಂದೂಡಿಕೆಗಳ ಬಳಿಕ ಆಸ್ಕರ್ ಪ್ರಶಸ್ತಿ ಸಮಾರಂಭವು ಏಪ್ರಿಲ್ 25 ರಂದು ನಡೆಯಲಿದೆ. ಆಸ್ಕರ್ ನಾಮಿನೇಷನ್ ಪಟ್ಟಿಯನ್ನು ಮಾರ್ಚ್ 15 ಕ್ಕೆ ಘೋಷಿಸಲಾಗುತ್ತದೆ.
ಈ ಬಾರಿ ಆಸ್ಕರ್ ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ಮಲಯಾಳಂ ಸಿನಿಮಾ 'ಜಲ್ಲಿಕಟ್ಟು' ಈಗಾಗಲೇ ಆಸ್ಕರ್ ರೇಸ್‌ನಿಂದ ಹೊರಗೆ ಬಂದಿದೆ. ಅಂತರರಾಷ್ಟ್ರೀಯ ವಿಭಾಗದಲ್ಲಿ ಸ್ಪರ್ಧಿಸಿದ್ದ 'ಜಲ್ಲಿಕಟ್ಟು' ಕೊನೆಯ ಐದಿನೈದು ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.