For Quick Alerts
  ALLOW NOTIFICATIONS  
  For Daily Alerts

  ಅಮೀರ್ ಮುಂದೆ ಮಂಡಿಯೂರಿದ 'ಟೈಗರ್' ಸಲ್ಮಾನ್

  |

  ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ಚಿತ್ರ 'ಏಕ್ ಥಾಟ ಟೈಗರ್, ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ದಾಖಲಿಸಿದ್ದರೂ ಬಾಲಿವುಡ್ ಚಿತ್ರಗಳ ಈವರೆಗಿನ ದಾಖಲೆಯನ್ನು ಮುರಿಯಲು ವಿಫಲವಾಗಿದೆ. ಹಿಂದಿ ಚಿತ್ರಗಳಲ್ಲಿ ಅತಿಹೆಚ್ಚು ಗಳಿಸಿದ ದಾಖಲೆಯು ಅಮೀರ್ ಖಾನ್ ನಾಯಕತ್ವದ '3 ಈಡಿಯಟ್ಸ್' ಚಿತ್ರದ ಪಾಲಿಗಿದೆ. ಈ 'ಏಕ್ ಥಾ ಟೈಗರ್' ಚಿತ್ರವು ಸಾರ್ವಕಾಲಿಕ '3 ಈಡಿಯಟ್ಸ್' ಚಿತ್ರದ ದಾಖಲೆಯನ್ನು ಮುರಿಯಲಿದೆ ಎನ್ನಲಾಗಿತ್ತು.

  ಆದರೆ, ಇತ್ತೀಚಿನ ಪರಿಸ್ಥಿತಿಯನ್ನು ನೋಡಿದರೆ 'ಎಕ್ ಥಾ ಟೈಗರ್' ಚಿತ್ರದ ಗಳಿಕೆ '3 ಈಡಿಯಟ್ಸ್' ಗಳಿಕೆಯನ್ನು ಹೊಂದಿಕ್ಕುವುದು ಅನುಮಾನವಾಗಿದೆ. ಅಮೀರ್ ಖಾನ್ ಅವರ '3 ಈಡಿಯಟ್ಸ್' ಚಿತ್ರವು ರು. 202 ಕೋಟಿ ನಿವ್ವಳ ಲಾಭ ಗಳಿಸಿ ಬಾಲಿವುಡ್ ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಆದರೆ ಸಲ್ಲೂರ 'ಏಕ್ ಥಾ ಟೈಗರ್' ಚಿತ್ರವು ಏಳು ವಾರಗಳಲ್ಲಿ ರು. 199.11 ಕೋಟಿಯನ್ನು ಮಾತ್ರ ಗಳಿಸಲು ಸಮರ್ಥವಾಗಿದೆ.

  ಈಗಾಗಲೇ ಈ 'ಏಕ್ ಥಾ ಟೈಗರ್' ಚಿತ್ರಕ್ಕೆ ಆನಂತರ ಬಿಡುಗಡೆಯಾದ ಚಿತ್ರಗಳಿಂದ ಸಾಕಷ್ಟು ಹೊಡೆತಗಳಾಗಿವೆ. ಅದರಲ್ಲೂ ಪ್ರಮುಖವಾಗಿ ಇತ್ತೀಚಿಗೆ ಬಿಡುಗಡೆಯಾಗಿರುವ 'ರಾಜ್ 3' ಚಿತ್ರವು ಸಲ್ಲೂ-ಕತ್ರಿನಾ ಟೈಗರ್ ಚಿತ್ರದ ಗಳಿಕೆಗೆ ಭಾರಿ ಹೊಡೆತ ನೀಡಿದೆ. ಅಷ್ಟೇ ಅಲ್ಲ, ತೀರಾ ಇತ್ತೀಚಿಗೆ ಬಿಡುಗಡೆಯಾದ 'ಬರ್ಫಿ' ಚಿತ್ರವು 'ಏಕ್ ಥಾ ಟೈಗರ್' ಚಿತ್ರಕ್ಕೆ ಭಾರಿ ಹಿನ್ನಡೆ ನೀಡುವುದು ಖಚಿತವಾಗಿದೆ. ಜೊತೆಗೆ ಕರೀನಾ ಕಪೂರ್ ನಟನೆಯ 'ಹೀರೋಯಿನ್' ಕೂಡ ಈ ಚಿತ್ರಕ್ಕೆ ಹಿನ್ನಡೆ ನೀಡಿದೆ.

  ಒಟ್ಟಿನಲ್ಲಿ, ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ 'ಏಕ್ ಥಾ ಟೈಗರ್' ಚಿತ್ರವು ಬಿಡುಗಡೆಯಾದ ದಿನದಲ್ಲಿ ಮಾಡಿದ ಭಾರಿ ಸದ್ದನ್ನು ನೋಡಿದ ಭಾರತ, ಬಾಲಿವುಡ್ ಚಿತ್ರರಂಗದಲ್ಲಿ ಇದು ಹಳೆಯ ದಾಖಲೆಯನ್ನೆಲ್ಲಾ ಮುರಿದು ಹೊಸ ದಾಖಲೆ ಸ್ಥಾಪಿಸಲಿರುವುದು ಖಾತ್ರಿ ಎಂದೇ ಭವಿಷ್ಯ ನುಡಿದಿದ್ದರು. ಆದರೆ ಅಮೀರ್ ಸಾರ್ವಕಾಲಿಕ ದಾಖಲೆಯ ಅಮೀರ್ ನಟನೆಯ '3 ಈಡಿಯಟ್ಸ್' ದಾಖಲೆಯನ್ನು ಈ ಚಿತ್ರ ಮುರಿಯುವುದು ಈಗ ಸಂದೇಹಾಸ್ಪದವಾಗಿದೆ. (ಏಜೆನ್ಸೀಸ್)

  English summary
  Salman Khan Katrina Kaif movie Ek Tha Tiger collection slowed at Indian Box Office in seven weeks and failed to beat Aamir 3 Idiots lifetime record.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X