For Quick Alerts
  ALLOW NOTIFICATIONS  
  For Daily Alerts

  'ನಾನು ಹೆಣ್ಣಲ್ಲ, ಗಂಡು' ಎಂದ ಹಾಲಿವುಡ್ ಖ್ಯಾತ ನಟಿ!

  |

  ಹಾಲಿವುಡ್ ನಟಿ ಎಲೆನ್ ಪೇಜ್, ಗಂಡಾಗಿ ಬದಲಾಗಿದ್ದಾರೆ! ಹೌದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಈ ಬದಲಾವಣೆ ಬಗ್ಗೆ ಉದ್ದದ ಪೋಸ್ಟ್ ಸಹ ಹಾಕಿದ್ದಾರೆ.

  ತಾನು ತೃತೀಯಲಿಂಗಿ ಆಗಿದ್ದು, ನನ್ನನ್ನು ಹೆಣ್ಣೆಂದು ಅಲ್ಲ ಬದಲಿಗೆ ಗಂಡೆಂದು ಪರಿಗಣಿಸಿ ಹಾಗೂ ಸಂಭೋದಿಸಿ ಎಂದು ಎಲೆನ್ ಪೇಜ್ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಹೆಸರನ್ನು ಎಲೆನ್ ಪೇಜ್‌ ನಿಂದ ಎಲಿಯೊಟ್ ಪೇಜ್ ಆಗಿ ಬದಲಾಯಿಸಿಕೊಂಡಿದ್ದಾರೆ.

  ಆಸ್ಕರ್‌ಗೆ ಸ್ಪರ್ಧೆಗೆ ನಾಮಾಂಕಿತವಾಗಿದ್ದ 'ಜೂನೊ' ಸಿನಿಮಾದಲ್ಲಿ ನಟಿಸಿದ್ದ ಎಲೆನ್ ಪೇಜ್, ಸೂಪರ್ ಹಿಟ್ ಸಿನಿಮಾಗಳಾದ ಇನ್‌ಸೆಪ್ಷನ್, ಎಕ್ಸ್‌ ಮೆನ್; ದಿ ಲಾಸ್ಟ್ ಸ್ಯಾಂಡ್, ಎಕ್ಸ್-ಮೆನ್ ಡೇಸ್ ಆಫ್ ಫ್ಯೂಚರ್, ಟಚ್ ಆಂಡ್ ಗೋ, ದೇರ್ ಇಸ್ ಸಮ್‌ತಿಂಗ್ ಇನ್ ವಾಟರ್, ಅಮೆರಿಕನ್ ಕ್ರೈಂ, ಟು ರೋಮ್ ವಿತ್ ಲವ್ ಇನ್ನೂ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

  ಆದರೆ ತಾನು ಮಹಿಳೆ ಅಲ್ಲ ನಾನು ತೃತೀಯ ಲಿಂಗಿಯಾಗಿದ್ದು, ನನ್ನನ್ನು ಪುರುಷನೆಂದು ಪರಿಗಣಿಸಿ ಎಂದು ಅವರು ಮನವಿ ಮಾಡಿದ್ದಾರೆ. ನನ್ನ ಸ್ವಂತಿಕೆಯ ಬಗ್ಗೆ ಹೇಳಿಕೊಂಡಿದ್ದು ನನ್ನ ಪಾಲಿಗೆ ಬಹುದೊಡ್ಡ ಹೆಜ್ಜೆ ಎಂದಿರುವ ಅವರು, ತೃತೀಯಲಿಂಗಿ ಸಮುದಾಯಕ್ಕೆ ಧನ್ಯವಾದವನ್ನು ಸಹ ಹೇಳಿದ್ದಾರೆ.

  ನಾನು ತೃತೀಯ ಲಿಂಗಿ ಆಗಿರುವುದಕ್ಕೆ ಸಂತೋಷವಿದೆ. ಅಲ್ಲದೆ, ನಾನು 'ಕ್ವೀರ್‌' ಸಹ ಆಗಿದ್ದೀನಿ. ಅದೂ ಸಹ ನನಗೆ ಸಂತೋಷವೇ ಎಂದು ಹೇಳಿದ್ದಾರೆ ಎಲೆನ್ ಈಗ ಅವರ ಹೆಸರು ಎಲೆಟ್.

  ಆಸ್ಕರ್ ಗೆಲ್ಲೋಕೆ ಭಾರತ ಏನ್ ಮಾಡ್ಬೇಕು? | Oscar | Sandalwood | Filmibeat Kannada

  ತಾವು ಸಲಿಂಗಿ ಎಂಬುದನ್ನು 2014 ರಲ್ಲಿಯೇ ಎಲೆನ್ ಪೇಜ್ ಹೇಳಿದ್ದರು. ಅಲ್ಲದೆ ತಮ್ಮ ಬಹುಕಾಲದ ಗೆಳತಿ ಎಮ್ಮಾ ಪಾರ್ಟ್‌ನರ್ ಅನ್ನು ವಿವಾಹವಾಗಿದ್ದರು. 2014 ರಿಂದಲೂ ಎಲೆನ್ ಎಲ್‌ಜಿಬಿಟಿ ಸಮುದಾಯದ ಹಕ್ಕುಗಳಿಗಾಗಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು.

  English summary
  Hollywood actress Ellen Page said she in not woman, she is transgender and also she changed her name as Elliot Page.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X