For Quick Alerts
  ALLOW NOTIFICATIONS  
  For Daily Alerts

  ವಿಶ್ವ ವಿಖ್ಯಾತ ಸಿನಿಮಾ ನಿರ್ದೇಶಕ ಕಿಮ್ ಕಿ ಡುಕ್ ಕೊರೊನಾಕ್ಕೆ ಬಲಿ

  |

  ಹಲವಾರು ವಿಶ್ವದರ್ಜೆಯ ಸಿನಿಮಾಗಳನ್ನು ನೀಡಿರುವ ಖ್ಯಾತ ಕೊರಿಯನ್ ನಿರ್ದೇಶಕ ಕಿಮ್ ಕಿ ಡುಕ್ ಇಂದು (ಡಿಸೆಂಬರ್ 11) ಕೊರೊನಾಕ್ಕೆ ಬಲಿಯಾಗಿದ್ದಾರೆ.

  ವಿಶ್ವ ಸಿನಿಮಾಗಳ ಬಗ್ಗೆ ಆಸಕ್ತಿಯುಳ್ಳವರು ಕಿಮ್ ಕಿ ಡುಕ್ ಹೆಸರು ಕೇಳಿಯೇ ಇರುತ್ತಾರೆ. ದಕ್ಷಿಣ ಕೊರಿಯಾದ ಕಿಮ್ ಕಿ ಡುಕ್. ಹಲವಾರು ಅತ್ಯುತ್ತಮ ಕೊರಿಯನ್ ಸಿನಿಮಾಗಳನ್ನು ಮಾಡಿದ್ದು, ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿಯೂ ಇವರ ಕೆಲವು ಸಿನಿಮಾಗಳು ಪ್ರದರ್ಶಿತಗೊಂಡಿವೆ.

  ಸಮರ್ಟಿಯಾನ್ ಗರ್ಲ್, ದಿ ನೆಟ್, ಒನ್ ಆನ್ ಒನ್, ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್ ಆಂಡ್ ಸ್ಪ್ರಿಂಗ್ ರೀತಿಯ ಹಲವಾರು ಸಾರ್ವಕಾಲಿಕ ಸಿನಿಮಾಗಳನ್ನು ನೀಡಿರುವ ಖ್ಯಾತಿ ಕಿಮ್ ಕಿ ಡುಕ್ ರದ್ದು.

  ಬರ್ಲಿನ್ ಫಿಲ್ಮಂ ಫೆಸ್ಟ್ ಪ್ರಶಸ್ತಿ, ವೆನ್ನಿಸ್ ಫಿಲ್ಮಂ ಫೆಸ್ಟ್ ಪ್ರಶಸ್ತಿ, ಕ್ಯಾನ್ನಸ್ ಫಿಲಂ ಫೆಸ್ಟ್ ಪ್ರಶಸ್ತಿ ಇನ್ನೂ ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ, ಕಿಮ್ ಕಿ ಡುಕ್ ರ ಸಿನಿಮಾಗಳು.

  ಕಿಮ್ ಡಿ ಕುಕ್ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ಸಹ ದಾಖಲಾಗಿತ್ತು. 2017 ರಲ್ಲಿ ಮೋಯ್ಬ್ಯುಸ್ ಸಿನಿಮಾದ ಚಿತ್ರೀಕರಣದ ವೇಳೆ, ಕಿಮ್ ಕಿ ಡುಕ್, ಲೈಂಗಿಕ ದೃಶ್ಯದಲ್ಲಿ ನಟಿಸುವಂತೆ ಬಲವಂತ ಮಾಡಿದ್ದಾರೆ, ನಿರಾಕರಿಸಿದಾಗ ಥಳಿಸಿದ್ದಾರೆ ಎಂದು ನಟಿಯೊಬ್ಬರು ದೂರು ನೀಡಿದ್ದರು.

  2018 ರಲ್ಲಿ ಮೂರು ಜನ ಮಹಿಳೆಯರು ಕಿಮ್ ಕಿ ಡುಕ್ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ದಾಖಲಿಸಿದ್ದರು. ನ್ಯಾಯಾಲಯ ಕಿಮ್ ಡಿ ಕುಕ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ತೆಗೆದುಹಾಕಿ, ಹಿಂಸೆ ಪ್ರಕರಣದಲ್ಲಿ ಮಾತ್ರವೇ ಶಿಕ್ಷೆ ನೀಡಿತ್ತು.

  English summary
  Famous Korean movie director Kim Ki Duk died because of Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X