For Quick Alerts
  ALLOW NOTIFICATIONS  
  For Daily Alerts

  ಬ್ಯಾಟ್‌ಮ್ಯಾನ್ ಪಾತ್ರಕ್ಕೆ ಬೇರೆ ನಟ: ರೊಚ್ಚಿಗೆದ್ದ ಅಭಿಮಾನಿಗಳು

  |

  ಕ್ರಿಸ್ಟಿಯನ್ ಬಾಲೆ ಎಂದರೆ ಹೆಚ್ಚು ಜನಕ್ಕೆ ಥಟ್ಟನೆ ಗೊತ್ತಾಗುವುದಿಲ್ಲ. ಬ್ರೂಸ್ ವೇನ್ ಎಂದರೆ ಕೆಲವರಿಗೆ ಹೊಳೆಯಬಹುದೇನೊ, ಆದರೆ ಬ್ಯಾಟ್‌ಮ್ಯಾನ್ ಎಂದ ಕೂಡಲೇ ಕಣ್ಣು ಅರಳುತ್ತದೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  'ಬ್ಯಾಟ್‌ಮ್ಯಾನ್‌' ಸರಣಿಯ ಮೂರು ಸಿನಿಮಾಗಳಲ್ಲಿ ಬ್ಯಾಟ್‌ಮ್ಯಾನ್ ಹಾಗೂ ಬ್ರೂಸ್ ವೇನ್ ಆಗಿ ನಟಿಸಿರುವುದು ಇದೇ ಕ್ರಿಸ್ಟಿಯನ್ ಬಾಲೆ. ಆದರೆ ಈಗ ಕ್ರಿಸ್ಟಿಯನ್ ಬಾಲೆ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಅದಕ್ಕೆ ಕಾರಣ ಕ್ರಿಸ್ಟಿಯನ್ ಬಾಲೆ ಅಲ್ಲ.

  ಇದೀಗ 'ದಿ ಫ್ಲಾಶ್' ಸಿನಿಮಾದಲ್ಲಿ ಬ್ಯಾಟ್‌ಮ್ಯಾನ್ ಪಾತ್ರಕ್ಕೆ ಕ್ರಿಸ್ಟಿಯನ್ ಬಾಲೆ ಬದಲಿಗೆ ಬೇರೆ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಬ್ಬರು ನಟರು ಬ್ಯಾಟ್‌ಮ್ಯಾನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಕ್ರಿಸ್ಟಿಯನ್ ಬಾಲೆ ಅಭಿಮಾನಿಗಳಿಗೆ ತೀವ್ರ ಸಿಟ್ಟು ಕೆರಳಿಸಿದೆ.

  ಇಬ್ಬರು ಬ್ಯಾಟ್‌ಮ್ಯಾನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ!

  ಇಬ್ಬರು ಬ್ಯಾಟ್‌ಮ್ಯಾನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ!

  ಆಂಡಿ ಮುಶೈಟಿ ನಿರ್ದೇಶನದ 'ದಿ ಫ್ಲಾಶ್' ಸಿನಿಮಾದಲ್ಲಿ ಮೈಕಲ್ ಕೀಟನ್ ಮತ್ತು ಬೆನ್ ಅಫ್ಲೆಕ್ ಇಬ್ಬರೂ ಸಹ ಬ್ಯಾಟ್‌ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಬೆನ್ ಅಫ್ಲಿಕ್ಸ್ ಈ ಮೊದಲು 'ಜಸ್ಟಿಸ್ ಲೀಗ್' ಸಿನಿಮಾದಲ್ಲಿ ಬ್ಯಾಟ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು.

  ಕ್ರಿಸ್ಟಿಯನ್ ಬಾಲೆ ಅತ್ಯುತ್ತಮ ಬ್ಯಾಟ್‌ಮ್ಯಾನ್

  ಕ್ರಿಸ್ಟಿಯನ್ ಬಾಲೆ ಅತ್ಯುತ್ತಮ ಬ್ಯಾಟ್‌ಮ್ಯಾನ್

  ಟ್ವಿಟ್ಟರ್‌ನಲ್ಲಿ ಕ್ರಿಸ್ಟಿಯನ್ ಬಾಲೆ ಹೆಸರು ಟ್ರೆಂಡ್ ಆಗುತ್ತಿದ್ದು, ಕ್ರಿಸ್ಟಿಯನ್ ಬಾಲೆ ಈವರೆಗೆ ಅತ್ಯುತ್ತಮ ಬ್ಯಾಟ್‌ಮ್ಯಾನ್ ಆತನನ್ನು ಮತ್ತೆ ಬ್ಯಾಟ್‌ಮ್ಯಾನ್ ಪಾತ್ರದಲ್ಲಿ ಕಾಣಬೇಕು ಎಂದು ಒತ್ತಾಯಿಸಿದ್ದಾರೆ. ಆತನನ್ನು ಬ್ಯಾಟ್‌ಮ್ಯಾನ್ ಆಗಿ ಮತ್ತೆ ತೆರೆಗೆ ತನ್ನಿ ಎಂದು ಒತ್ತಾಯಿಸಿದ್ದಾರೆ.

  ಕ್ರಿಸ್ಟಿಯನ್ ಬಾಲೆ ಬ್ಯಾಟ್‌ಮ್ಯಾನ್ ಪಾತ್ರ ಮಾಡುವುದಿಲ್ಲವೇ?

  ಕ್ರಿಸ್ಟಿಯನ್ ಬಾಲೆ ಬ್ಯಾಟ್‌ಮ್ಯಾನ್ ಪಾತ್ರ ಮಾಡುವುದಿಲ್ಲವೇ?

  ಕ್ರಿಸ್ಟಿಯನ್ ಬಾಲೆ ಅಭಿನಯದ 'ಡಾರ್ಕ್ ನೈಟ್ ರೈಸಸ್' ಸಿನಿಮಾದ ಕೊನೆಯಲ್ಲಿ ಬ್ರೂಸ್ ವೇನ್ ಕಣ್ಮರೆಯಾಗುತ್ತಾನೆ. ಎಲ್ಲರೂ ಆತ ಸತ್ತುಹೋಗಿದ್ದಾನೆ ಎಂದುಕೊಳ್ಳುತ್ತಾರೆ. ಆಗ ಪಾತ್ರಧಾರಿಯೊಬ್ಬನಿಗೆ ಒಂದು ಪಾರ್ಸಲ್ ಬರುತ್ತದೆ ಅದು ಆತನನ್ನು ಬ್ರೂಸ್ ವೇನ್‌ (ಕ್ರಿಸ್ಟಿಯನ್ ಬಾಲೆ)ನ ಬ್ಯಾಟ್‌ಮನ್ ಉಡುಪು ಇದ್ದಲ್ಲಿಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿಗೆ ಬ್ರೂಸ್ ವೇನ್ ಅಥವಾ ಕ್ರಿಸ್ಟಿಯನ್ ಬಾಲೆ ಇನ್ನು ಮುಂದೆ ಬ್ಯಾಟ್‌ಮ್ಯಾನ್‌ ಆಗಿರುವುದಿಲ್ಲ ಎಂಬುದನ್ನು ತೋರಿಸಲಾಗಿತ್ತು. ಮುಂದಿನ ಬ್ಯಾಟ್‌ಮ್ಯಾನ್‌ ಯಾರಾಗುತ್ತಾರೆ ಎಂಬ ಕುತೂಹಲ ಅಲ್ಲಿಗೆ ನಿಂತಿತ್ತು.

  ಹಲವು ಖ್ಯಾತ ಸಿನಿಮಾಗಳಲ್ಲಿ ನಟನೆ

  ಹಲವು ಖ್ಯಾತ ಸಿನಿಮಾಗಳಲ್ಲಿ ನಟನೆ

  ಬ್ಯಾಟ್‌ಮ್ಯಾನ್ ಸಿನಿಮಾ ಹೊರತಾಗಿ ಕ್ರಿಸ್ಟಿಯನ್ ಬಾಲೆ, 'ದಿ ಪ್ರೆಸ್ಟಿಜ್', ಟರ್ಮಿನೇಟರ್ ಸಾಲ್ವೇಶನ್, ಪಬ್ಲಿಕ್ ಎನಿಮೀಸ್, ಅಮೆರಿಕನ್ ಸೈಕೋ, ಫೋರ್ಡ್ ವರ್ಸಸ್ ಫೆರಾರಿ, ರೆಸ್ಕ್ಯೂ ಡೌನ್, ದಿ ಬಿಗ್ ಶಾರ್ಟ್, ದಿ ಮೆಕ್ಯಾನಿಸ್ಟ್ ಇನ್ನೂ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Fans demand Christian Bale to return as Batman. Ben Affleck returning as Batman in The Flash movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X