'ಫಾಸ್ಟ್ ಅಂಡ್ ಫ್ಯೂರಿಯಸ್' ಭಾರತದಲ್ಲಿ ಹೊಸ ದಾಖಲೆ
ಇಷ್ಟು ದಿನ ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ, ಇನ್ನೂರು ಕೋಟಿ ಕಲೆಕ್ಷನ್ ಮಾಡುತ್ತಾ ದಾಖಲೆ ನಿರ್ಮಿಸುತ್ತಿದ್ದ ಬಾಲಿವುಡ್ ಚಿತ್ರಗಳಿಗೆ ಹಾಲಿವುಡ್ ನ 'ಫಾಸ್ಟ್ ಅಂಡ್ ಫ್ಯೂರಿಯಸ್ 7' ಚಿತ್ರ ಭಾರತದಲ್ಲಿ ಹೊಸ ಸವಾಲು ಎಸೆದಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ರು.100 ಕೋಟಿ ಕಲೆಕ್ಷನ್ ಮಾಡಿದ ಹಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿದೆ. ಏಪ್ರಿಲ್ 2ರಂದು ಬಿಡುಗಡೆಯಾದ ಈ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ಇದರ ಪರಿಣಾಮ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನವಾಗಿದೆ. [ಹೆಬ್ಬಾವಿನೊಂದಿಗೆ ಜಾರಿಜಾರಿ ಹೊರಬಂದ ಜೆನ್ನಿಫರ್!]

2ಡಿ, 3ಡಿ ಮತ್ತು ಐಮ್ಯಾಕ್ಸ್ ಆವೃತ್ತಿಗಳಲ್ಲಿ ಪ್ರೇಕ್ಷಕರ ಮುಂದೆ ಬಂದ ಆಕ್ಷನ್ ಪ್ರಧಾನ ಚಿತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದ ದೇಶದಾದ್ಯಂತ ಮೆಟ್ರೋ ನಗರ, ಪಟ್ಟಣಗಳಲ್ಲಿ 2,800 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದು ಯೂನಿವರ್ಸಲ್ ಪಿಕ್ಚರ್ಸ್ ಇಂಡಿಯಾ ಜನರಲ್ ಮ್ಯಾನೇಜರ್ ಸರಬ್ ಜಿತ್ ಸಿಂಗ್ ಹೇಳಿದ್ದಾರೆ.
ವಿಶ್ವದಾದ್ಯಂತ ಸಾವಿರಾರು ಥಿಯೇಟರ್ ಗಳಲ್ಲಿ ಈ ಚಿತ್ರ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸರಿಸುಮಾರು ರು. 1 ಶತಕೋಟಿ ಡಾಲರ್ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಚಿತ್ರಕ್ಕೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಇನ್ನಷ್ಟು ಕಲೆಕ್ಷನ್ ಗೆ ದಾರಿ ಮಾಡಿಕೊಡಬಹುದು. ಆಕ್ಷನ್ ಪ್ರಿಯರಿಗೆ ಹೇಳಿಮಾಡಿಸಿದ ಸಿನಿಮಾ ಇದು. (ಏಜೆನ್ಸೀಸ್)


Click it and Unblock the Notifications











