»   » ವಿಡಿಯೋ ಗೇಮ್ 'ಆಂಗ್ರಿ ಬರ್ಡ್ಸ್' ಮೇಲೆ ಸಿನಿಮಾ

ವಿಡಿಯೋ ಗೇಮ್ 'ಆಂಗ್ರಿ ಬರ್ಡ್ಸ್' ಮೇಲೆ ಸಿನಿಮಾ

Posted By:
Subscribe to Filmibeat Kannada
Angry Birds
ಜಗತ್ತಿನ ಅತ್ಯಂತ ಜನಪ್ರಿಯ ವಿಡಿಯೋ ಗೇಮ್ 'ಆಂಗ್ರಿ ಬರ್ಡ್ಸ್'. ಸ್ಮಾರ್ಟ್ ಫೋನ್ ಗಳಲ್ಲಿ, ಪರ್ಸನಲ್ ಕಂಪ್ಯೂಟರ್ ಗಳಲ್ಲಿ 'ಆಂಗ್ರಿ ಬರ್ಡ್ಸ್' ಆಟ ಲೋಕ ಪ್ರಸಿದ್ಧ. ಈ ಜನಪ್ರಿಯ ಆಂಗ್ರಿ ಬರ್ಡ್ಸ್ ಮೇಲೆ ಈಗ ಸಿನಿಮಾ ಮಾಡಲಾಗುತ್ತಿದೆ.

ಇತ್ತೀಚೆಗಷ್ಟೇ 'ಆಂಗ್ರಿ ಬರ್ಡ್ಸ್' ಮೂರನೇ ವರ್ಷದ ಬರ್ತ್ ಡೇ ಆಚರಿಸಿಕೊಂಡು ಸಂಭ್ರಮಿಸಿದ್ದವು. ಈಗ ಈ ಹಕ್ಕಿಗಳ ಸೃಷ್ಟಿಕರ್ತರು ಆಂಗ್ರಿ ಬರ್ಡ್ಸ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ರೋವಿಯೋ ಎಂಟರ್ ಟೈನ್ ಮೆಂಟ್ ಸಂಸ್ಥೆ ಈ ವಿಡಿಯೋ ಗೇಮ್ ರೂಪಿಸಿತ್ತು. ಈಗ ಇದೇ ಸಂಸ್ಥೆ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದೆ.

3D ಅನಿಮೇಷನ್ ನಲ್ಲಿ ಚಿತ್ರವನ್ನು ರೂಪಿಸಲಾಗುತ್ತಿದ್ದು 2016ರ ಬೇಸಿಗೆಗೆ ಚಿತ್ರ ತೆರೆಗೆ ಬರಲಿದೆ. ಬಹುಶಃ ಅಷ್ಟೋತ್ತಿಗೆ 'ಆಂಗ್ರಿ ಬರ್ಡ್ಸ್' ಆಟ ಆಡದವರೇ ಇರಲ್ಲ ಅನ್ನಿಸುತ್ತದೆ.

ಇನ್ನು ಆಂಗ್ರಿ ಬರ್ಡ್ಸ್ ಬಗ್ಗೆ ಜನಪ್ರಿಯತೆ ಬಗ್ಗೆ ಒಂದೇ ಒಂದು ಸಾಲಿನಲ್ಲಿ ಹೇಳಬೇಕೆಂದರೆ...ಇದುವರೆಗೂ ಅತಿ ಹೆಚ್ಚು ಡೌನ್ ಲೋಡ್ ಆಗಿರುವ ಗೇಮ್ ಇದು. ಈ ವಿಡಿಯೋ ಗೇಮ್ ನ ವಿವಿಧ ಆವೃತ್ತಿಗಳನ್ನು ಇದುವರೆಗೂ ಒಂದು ಶತಕೋಟಿ (1,000,000,000) ಡೌನ್ ಲೋಡ್ ಮಾಡಿಕೊಳ್ಳಲಾಗಿದೆ.

ಇದರ ಲೇಟೆಸ್ಟ್ ವರ್ಷನ್ 'ಆಂಗ್ರಿ ಬರ್ಡ್ಸ್ ಸ್ಟಾರ್ ವಾರ್ಸ್' ಬಿಡುಗಡೆಯಾಗಿದ್ದು, ಯುಎಸ್ ಐಫೋನ್ ಗಳಲ್ಲಿ ಬಿಡುಗಡೆಯಾದ ಎರಡೂವರೆ ಗಂಟೆಗಳಲ್ಲೇ ದಾಖಲೆ ಸಂಖ್ಯೆಯಲ್ಲಿ ಡೌನ್ ಲೋಡ್ ಆಗಿತ್ತು. (ಏಜೆನ್ಸೀಸ್)

English summary
Fan-favourite arcade game 'Angry Birds' announced that it would have its own feature film.The plan is to make the Angry Birds film a 3D CG-animated feature that will be released in the summer of 2016, reported Aceshowbiz.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada