twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ಪಡೆದ ಮೊದಲ ಕಪ್ಪುವರ್ಣೀಯ ನಟ ಸಿಡ್ನಿ ಪೋಯ್ಟರ್ ನಿಧನ

    |

    ನಟನೆಗೆ ಮೊಟ್ಟ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದ್ದ ನಟ ಸಿಡ್ನಿ ಪೋಯ್ಟರ್ ನಿಧನ ಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

    ಜನಾಂಗೀಯ ದ್ವೇಷ ಪದ್ಧತಿ ಉಚ್ರಾಯದಲ್ಲಿದ್ದ ಕಾಲದಲ್ಲಿ ತನ್ನ ಪ್ರತಿಭೆಯಿಂದಲೇ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಮೂಲಕ ಕಪ್ಪು ವರ್ಣೀಯರು ಸಿನಿಮಾರಂಗಕ್ಕೆ ಅಡಿಯಿಡಲು ಪ್ರೇರಣೆ ಒದಗಿಸಿ ನಟ ಸಿಡ್ನಿ ಪೋಯ್ಟರ್‌.

    1967ರಲ್ಲಿ ಒಂದೇ ವರ್ಷದಲ್ಲಿ ಮೂರು ಸಿನಿಮಾಗಳನ್ನು ಮಾಡುವ ಮೂಲಕ ಜನಾಂಗೀಯ ದ್ವೇಷದ ವಿರುದ್ಧ ಸಮರ ಸಾರಿದ್ದರು ಸಿಡ್ನಿ. ಕಪ್ಪು ವರ್ಣೀಯರು ಸಿನಿಮಾಗಳಲ್ಲಿ ನಟಿಸುವುದೇ ಕಷ್ಟವಾಗಿದ್ದ ಕಾಲದಲ್ಲಿ ಸಿನಿಮಾಗಳ ಮೂಲಕವೇ ಜನಾಂಗೀಯ ದ್ವೇಷ, ವರ್ಣಭೇದವನ್ನು ಪ್ರತಿಭಟಿಸಿದರು. ಅಷ್ಟೇ ಅಲ್ಲದೆ, ಆಸ್ಕರ್ ಗೆಲ್ಲುವ ಮೂಲಕ ಸಾವಿರಾರು ಮಂದಿ ಕಪ್ಪು ವರ್ಣೀಯರಿಗೆ ಹೊಸ ಭರವಸೆ ಮೂಡಿಸಿದರು. ಕಪ್ಪು ಜನರೆಂದರೆ ಕೀಳು ಎಂಬ ಭಾವನೆಯಿದ್ದ ಸಮಾಜದಲ್ಲಿಯೇ 'ಅತ್ಯುತ್ತಮ' ನಟ ಪ್ರಶಸ್ತಿ ಪಡೆದದ್ದು ಸಾಮಾನ್ಯ ಸಾಧನೆಯಲ್ಲ.

    First Black Actor Who Recived Oscar Award Sidney Poitier Died

    1947ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಿಡ್ನಿ ಸಾಮಾನ್ಯವಾಗಿ ಪೋಷಕ ನಟ, ಎಕ್ಸ್ಟಾ ಹೀಗೆ ಮುಖ್ಯ ಪಾತ್ರದಿಂದ ಬಹಳ ದೂರದ ಪಾತ್ರಗಳನ್ನೇ ಮಾಡುತ್ತಿದ್ದರು. ಆದರೆ 1967ರಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ ಮೂರು ಸಿನಿಮಾಗಳು ಜನಾಂಗೀಯ ದ್ವೇಷದ ವಿರುದ್ಧದ ಪ್ರತಿಭಟನೆಗೆ ಇನ್ನಷ್ಟು ಇಂಬು ನೀಡಿದವು.

    1958 ರಲ್ಲಿ ಬಿಡುಗಡೆ ಆದ 'ದಿ ಡಿಫಿಯೇಂಟ್ ಒನ್ಸ್' ಸಿನಿಮಾದಲ್ಲಿನ ನಟನೆಗೆ ಸಿಡ್ನಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿತು. ಬಳಿಕ ಜೀವನಮಾನ ಸಾಧನೆಗೆ ಆಸ್ಕರ್ ನೀಡಲಾಯಿತು. ಸಿಡ್ನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಗೆಸ್ ಹೂ ಇಸ್ ಕಮಿಂಗ್ ಫಾರ್ ಡಿನ್ನರ್' ಸಿನಿಮಾವು 10 ವಿಭಾಗಗಳಲ್ಲಿ ಆಸ್ಕರ್‌ಗೆ ನಾಮಿನೇಟ್ ಆಗಿತ್ತು, ಅತ್ಯುತ್ತಮ ಚಿತ್ರಕತೆ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.

    English summary
    First black actor who recived Oscar as best actor award Sidney Poiter died on January 08. He was 94 years of age.
    Saturday, January 8, 2022, 17:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X