For Quick Alerts
  ALLOW NOTIFICATIONS  
  For Daily Alerts

  ಇವರೇ ನೋಡಿ ಭಾರತ ಮೂಲದ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಭಾವಿ ಪತಿ.!

  |

  'ಸ್ಲಂ ಡಾಗ್ ಮಿಲಿಯನೇರ್', 'ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್', ಇಮ್ಮಾರ್ಟಲ್ಸ್' 'ಮೋಗ್ಲಿ: ಲೆಜೆಂಡ್ ಆಫ್ ದಿ ಜಂಗಲ್' ಮುಂತಾದ ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿರುವ ಭಾರತ ಮೂಲದ ಹಾಲಿವುಡ್ ನಟಿ ಫ್ರೀಡಾ ಪಿಂಟೋ.

  ಆಸ್ಕರ್ ಪ್ರಶಸ್ತಿ ಪಡೆದ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಮೂಲಕ ಪ್ರಖ್ಯಾತಿ ಪಡೆದ ಫ್ರೀಡಾ ಪಿಂಟೋ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಡ್ವೆಂಚರ್ ಫೋಟೋಗ್ರಾಫರ್ ಕೋರಿ ಟ್ರಾನ್ ಜೊತೆಗೆ ಫ್ರೀಡಾ ಪಿಂಟೋ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ಕೋರಿ ಟ್ರಾನ್ ಜನ್ಮದಿನದ ಪ್ರಯುಕ್ತ ತಮ್ಮ ಎಂಗೇಜ್ಮೆಂಟ್ ಸುದ್ದಿಯನ್ನ ಫ್ರೀಡಾ ಪಿಂಟೋ ಅನೌನ್ಸ್ ಮಾಡಿದ್ದಾರೆ. 35 ವರ್ಷದ ಫ್ರೀಡಾ ಪಿಂಟೋ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಭಾವಿ ಪತಿಯನ್ನ ಪರಿಚಯಿಸಿದ್ದಾರೆ.

  ''ನನ್ನ ಜೀವನದಲ್ಲಿನ ಅತ್ಯಂತ ಸುಂದರ ಸೃಷ್ಟಿ ಅಂದ್ರೆ ನೀನೇ. ನೀನು ಇಲ್ಲೇ ನೆಲೆಸಬೇಕು. ನೀನು ಇಲ್ಲೇ ನೆಲೆಸುವಂತೆ ನಾನು ಮಾಡುತ್ತೇನೆ. ನನ್ನ ಹೃದಯದ ತುಂಬಾ ನಿನ್ನ ಪ್ರೀತಿಯೇ ತುಂಬಿದೆ. ಪ್ರೀತಿಯ ಭಾವಿ ಪತಿ.. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು'' ಎಂದು ನಟಿ ಫ್ರೀಡಾ ಪಿಂಟೋ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ನೂತನ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿರುವ ಫ್ರೀಡಾ ಪಿಂಟೋ ಮದುವೆ ದಿನಾಂಕವನ್ನ ಬಹಿರಂಗ ಪಡಿಸಿಲ್ಲ.

  ಟಾಪ್‌ಲೆಸ್‌ನಲ್ಲಿ ಮಂಗಳೂರು ಕಪ್ಪುಬಿಳುಪು ಸುಂದರಿಟಾಪ್‌ಲೆಸ್‌ನಲ್ಲಿ ಮಂಗಳೂರು ಕಪ್ಪುಬಿಳುಪು ಸುಂದರಿ

  ಇದಕ್ಕೂ ಮುನ್ನ ರೋಹನ್ ಆನ್ಟಾವ್ ಎಂಬುವರೊಂದಿಗೆ ಫ್ರೀಡಾ ಪಿಂಟೋ ಎಂಗೇಜ್ ಆಗಿದ್ದರು. 2009 ರಲ್ಲಿ ಇಬ್ಬರ ನಡುವಿನ ಸಂಬಂಧ ಮುರಿದುಬಿತ್ತು. ಬಳಿಕ 'ಸ್ಲಂ ಡಾಗ್ ಮಿಲಿಯನೇರ್' ನಟ ದೇವ್ ಪಟೇಲ್ ಜೊತೆಗೆ ಆರು ವರ್ಷಗಳ ಕಾಲ ಫ್ರೀಡಾ ಪಿಂಟೋ ಡೇಟಿಂಗ್ ಮಾಡಿದ್ದರು. ನಂತರ ದೇವ್ ಪಟೇಲ್ ರಿಂದ ದೂರ ಸರಿದ ಫ್ರೀಡಾ ಪಿಂಟೋ ಇದೀಗ ಅಡ್ವೆಂಚರ್ ಫೋಟೋಗ್ರಾಫರ್ ಕೋರಿ ಟ್ರಾನ್ ರನ್ನ ಪ್ರೀತಿಸುತ್ತಿದ್ದಾರೆ. ಸದ್ಯದಲ್ಲೇ ಈ ಜೋಡಿ ಮದುವೆ ಆಗಲಿದೆ.

  ಹಾಲಿವುಡ್ ಚಿತ್ರಗಳಲ್ಲಿ ಬಿಜಿಯಿರುವ ಫ್ರೀಡಾ ಪಿಂಟೋ ಕೈಯಲ್ಲಿ ಮೂರ್ನಾಲ್ಕು ಚಿತ್ರಗಳಿವೆ.

  English summary
  Hollywood Actress Freida Pinto announces her engagement with Cory Tran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X