»   » ಶಿಲ್ಪಾ ಶೆಟ್ಟಿಗೆ ಕಿಸ್ ಶಾಕ್ ಕೊಟ್ಟಿದ್ದ ಗೇರ್ ಗೂ ಶಾಕ್

ಶಿಲ್ಪಾ ಶೆಟ್ಟಿಗೆ ಕಿಸ್ ಶಾಕ್ ಕೊಟ್ಟಿದ್ದ ಗೇರ್ ಗೂ ಶಾಕ್

Posted By:
Subscribe to Filmibeat Kannada

ನ್ಯೂಯಾರ್ಕ್: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಮ್ ಕನ್ನಡತಿ ಶಿಲ್ಪಾ ಶೆಟ್ಟಿ ಎಂಬ ಬಾಲಿವುಡ್ ಬೆಡಗಿಯನ್ನು ಉನ್ಮಾದದಲ್ಲಿ ಬರ ಸೆಳೆದು/ಬಾಚಿ ತಬ್ಬಿದ್ದ ರಿಚರ್ಡ್ ಗೇರ್ ಎಂಬ ಪುಣ್ಯಾತ್ಮನ ಬಗ್ಗೆ ನಿಮಗೆಲ್ಲಾ ಗೊತ್ತಿದೆಯಲ್ವೇ?

ಖುದ್ದು ಶಿಲ್ಪಿಯೇ ಹೌಹಾರುವ ಹಾಗೆ ಶಾಕ್ ಕೊಟ್ಟಿದ್ದ ನಟ ಗೇರ್ ಗೂ ಮೊನ್ನೆ ಜೀವಮಾನದ ಶಾಕ್ ಪ್ರಾಪ್ತಿಯಾಗಿದೆ. ಆದರೆ ಇದು ನಿಜಕ್ಕೂ ಗೇರ್ ಗೆ ಬೇಡವಾದಂತಹ ಶಾಕ್! ಏನಪ್ಪಾ ಅಂದರೆ

64 ವರ್ಷದ ಆಕರ್ಷಕ ವ್ಯಕ್ತಿಯೊಬ್ಬ ನ್ಯೂಯಾರ್ಕ್ ಮಹಾನಗರದ ಹೊರವಲಯದ ಬೀದಿಗಳಲ್ಲಿ ಕಸ ಕಡ್ಡಿ ಮಧ್ಯೆ ಅಂಡಲೆಯುತ್ತಿದ್ದ. ಅದು ಫ್ರಾನ್ಸ್ ಪ್ರವಾಸಿ ಮಹಿಳೆಯ ಕಣ್ಣಿಗೆ ಬಿದ್ದಿದೆ. ಪಾಪ ಆಕೆಗೆ ಆ ವ್ಯಕ್ತಿಯನ್ನು ಕಂಡು ಕನಿಕರ ಅನ್ನುವುದು ಉಕ್ಕಿ ಹರಿದಿದೆ.

french-tourist-mistakes-actor-richard-gere-for-beggar-gives-him-pizza

ತೂತು ತೂತಿನ ಟೋಪಿಯನ್ನು ಕಿವಿಯವರೆಗೂ ಎಳೆದುಕೊಂಡಿದ್ದ ವ್ಯಕ್ತಿ ಮನ್ ಹಟನ್ ನಲ್ಲಿ ಕಸದ ರಾಶಿಯ ಅಂಚಿನಲ್ಲಿ ನಡೆದುಹೋಗುತ್ತಿದ್ದದು ಕಣ್ಣಿಗೆ ಬಿದ್ದಿದೆ. ಸೀದಾ ಆ ವ್ಯಕ್ತಿಯವರೆಗೂ ನಡೆದುಹೋದ 42 ವರ್ಷದ ಕೆರೆನ್ ವಲ್ನಾಯಿಸ್ ಗೋಂಬ್ಯೂ ಎಂಬ ಪ್ರವಾಸಿ ಮಹಿಳೆ ಆತನ ಕೈಗೆ ಪಿಜ್ಜಾ ಕೊಟ್ಟಿದ್ದಾಳೆ. ಅಂದಹಾಗೆ ಆ ವೇಳೆ ಮಹಿಳೆಯ ಜತೆ ಆಕೆಯ ಗಂಡ ಮತ್ತು 15 ವರ್ಷದ ಮಗ ಸಹ ಇದ್ದ.

ಅಮೆರಿಕದ ಖ್ಯಾತ ನಟ ಗೇರ್ ಗೆ ಏನೋ ಅನುಮಾನ ಕಾಡಿದೆ. ಆದರೂ ತೋರ್ಪಡಿಸಿಕೊಳ್ಳದೆ ಏನಮ್ಮಾ ತಾಯಿ ಏನಿದು? ಚೀಲದಲ್ಲಿ ಏನಿದೆ? ಎಂದು ಕೇಳಿದ್ದಾರೆ.

ಅದಕ್ಕೆ ನಾನು ಇಂಗ್ಲೀಷಿನಲ್ಲಿ ಆತನಿಗೆ ಹೇಳೋಣ ಅಂದುಕೊಂಡೆ. ಆದರೆ ಫ್ರೆಂಚ್ ಭಾಷೆಯಲ್ಲಿಯೇ ಹೇಳಿದೆ ಎಂದು ಮಹಿಳೆ ತದನಂತರ ಹೇಳಿದ್ದಾರೆ. 'ಆಮ್ ಸಾರಿ. ಆದರೆ ಪಿಜ್ಜಾ ಬಿಸಿಯಾಗಿಲ್ಲ. ಸ್ವಲ್ಪ ತಣ್ಣಗಾಗಿದೆ' ಎಂದು ಆ ವ್ಯಕ್ತಿಗೆ (ತಾನಂದುಕೊಂಡಂತೆ ಭಿಕ್ಷುಕನಿಗೆ) ಹೇಳಿದೆ. ಆತನೋ ಥ್ಯಾಂಕ್ ಯು ಸೋ ಮಚ್. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ' ಎಂದು ಉತ್ತರಿಸಿದ' ಎಂದು ಗೋಂಬ್ಯೂ ಹೇಳಿದ್ದಾರೆ.

ಅಂದಹಾಗೆ ಗೇರ್ ಮಹಾನುಭಾವ Time Out of Mind ಚಿತ್ರಕ್ಕಾಗಿ ಶೂಟಿಂಗ್ ಮಾಡುತ್ತಿದ್ದಾಗ ಈ ಲೈಫ್ ಟೈಮ್ ಅನುಭವಕ್ಕೊಳಗಾಗಿದ್ದಾರೆ. ಇಷ್ಟಾಗಿ ಮಹಿಳೆಗೆ ಆ ವ್ಯಕ್ತಿ ಖ್ಯಾತ ನಿರ್ದೇಶಕ ಎಂಬುದು ಆ ಘಳಿಗೆಯಲ್ಲಿ ತಿಳಿದುಬಂದಿಲ್ಲ. 2 ದಿನಗಳ ನಂತರ ಪತ್ರಿಕೆಯಲ್ಲಿ ಸಚಿತ್ರ ವರದಿ ಪ್ರಕಟವಾದಾಗಲೇ ತಾನು ಬೇಸ್ತುಬಿದ್ದಿರುವ ಪ್ರಸಂಗದ ಬಗ್ಗೆ ಗೋಂಬ್ಯೂಗೆ ಗೊತ್ತಾಗಿದ್ದು.

English summary
French Tourist mistakes actor Richard Gere for beggar, gives him pizza in New York. A French tourist, Karine Valnais Gombeau, a 42-year-old Parisian, listened to her heart when she offered her pizza to a man (the actor, a knit cap pulled down over his ears, sifing through rubbish) spotted rummaging through trash in the streets of New York, not realizing it was Richard Gere making a movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada