For Quick Alerts
  ALLOW NOTIFICATIONS  
  For Daily Alerts

  ವೃದ್ಧ ಪ್ರತಿಭಟನಾಕಾರ್ತಿಯನ್ನು 'ವಂಡರ್ ವುಮನ್' ಎಂದ ಹಾಲಿವುಡ್ ನಟಿ

  |

  ಡಿಸೆಂಬರ್ 25 ರಂದು ಭಾರತದಲ್ಲಿ ಬಿಡಗುಡೆ ಆಗಿರುವ ಹಾಲಿವುಡ್ ಸಿನಿಮಾ 'ವಂಡರ್ ವುಮನ್ 1984' ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ.

  ಸೂಪರ್ ಹೀರೊಗಳೆಲ್ಲಾ ಪುರುಷರೇ ಆಗಿದ್ದಾಗ ಮಹಿಳೆಯರೂ ಸಹ 'ಸೂಪರ್' ಗಳೇ ಎಂದು ಸಾರಲು 1940 ರ ದಶಕದಲ್ಲಿ ಸೃಷ್ಟಿಸಲ್ಪಟ್ಟ ಪಾತ್ರ 'ವಂಡರ್ ವುಮನ್'. ಪಾತ್ರ ಜನಪ್ರಿಯಗೊಂಡಿದ್ದ 70 ರ ದಶಕದ ನಂತರ.

  ಇದೀಗ ಬಿಡುಗಡೆ ಆಗಿರುವ 'ವಂಡರ್ ವುಮನ್ 1984' ಸಿನಿಮಾದಲ್ಲಿ ಅತಿಮಾನುಷ ಶಕ್ತಿಯ ವಂಡರ್ ವುಮನ್ ಆಗಿ ಗಲ್ ಗಡೋಟ್ ನಟಿಸಿದ್ದಾರೆ. ಸಿನಿಮಾ ವಿಶ್ವದಾದ್ಯಂತ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಕೋಟಿಗಟ್ಟಲೆ ಬಾಚುತ್ತಿದೆ.

  ವಿಶ್ವವೇ ಕೊಂಡಾಡುವ ಅದ್ಭುತ ಶಕ್ತಿಯುಳ್ಳ ವಂಡರ್ ವುಮನ್ ಆಗಿರುವ ಗಲ್ ಗಡೋಟ್‌ ಪಾಲಿಗೆ ಭಾರತದ ವೃದ್ಧ ಪ್ರತಿಭಟನಾಕಾರ್ತಿ ನಿಜವಾದ ವಂಡರ್ ವುಮನ್ ಅಂತೆ.

  ಶಾಹಿನ್ ಭಾಗ್‌ ಹೋರಾಟದಲ್ಲಿ ಭಾಗವಹಿಸಿದ್ದ ವೃದ್ಧೆ ಬಿಲ್ಕಿ ಅಜ್ಜಿಯ ಚಿತ್ರವನ್ನು ಗಲ್ ಗಡೋಟ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 'ಈಕೆಯೇ ನನ್ನ ಪಾಲಿಗೆ ವಂಡರ್ ವುಮನ್' ಎಂದು ಹೇಳಿದ್ದಾರೆ.

  ವಿಷ್ಣು ಎಂದೆಂದಿಗೂ ಅಮರ ಎಂದ ಸುಮಲತಾ | Sumalatha Ambareesh | Filmibeat Kannada

  ಶಾಹೀನ್ ಭಾಗ್‌ನಲ್ಲಿ ನಡೆದ ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು 82 ವರ್ಷದ ಬಿಲ್ಕಿ ಅಜ್ಜಿ. ಶಾಹಿಬ್ ಬಾಗ್ ದಾದಿ ಎಂದೇ ಈ ಅಜ್ಜಿ ಖ್ಯಾತರಾಗಿದ್ದರು. ಶಾಹೀನ್ ಬಾಗ್‌ನ ಪ್ರತಿಭಟನೆಯಲ್ಲಿ ಪ್ರತಿದಿನವೂ ಭಾಗವಹಿಸಿದ್ದರು ಬಿಲ್ಕಿ ಅಜ್ಜಿ.

  English summary
  Wonder Woman lead actress Gal Gadot named Shahin Bhag protest's Bilkis Dadi as her personal wonder woman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion