'77ನೇ ಗೋಲ್ಡನ್ ಗ್ಲೋಬ್' ಪ್ರಶಸ್ತಿ ರೇಸಿನಲ್ಲಿ ಮೇಲುಗೈ ಸಾಧಿಸಿದ ನೆಟ್ ಫ್ಲಿಕ್ಸ್ ಚಿತ್ರಗಳು
ಹಾಲಿವುಡ್ ನ ಪ್ರಸಿದ್ಧ 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. 2020ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 5 ರಿಂದ ಪ್ರಾರಂಭವಾಗಲಿದೆ. ಈಗಾಗಲೆ 77ನೇ ಗೋಲ್ಡನ್ ಗ್ಲೋಬ್ ಗೆ ನಾಮನಿರ್ದೇಶನವಾದ ಚಿತ್ರಗಳು ಮತ್ತು ಕಲಾವಿದ ಪಟ್ಟಿ ಬಹಿರಂಗವಾಗಿದೆ.
ವಿಶೇಷ ಅಂದರೆ ಈ ವರ್ಷದ ಪ್ರಶಸ್ತಿ ರೇಸ್ ನಲ್ಲಿ ಅತೀ ಹೆಚ್ಚು ನೆಟ್ ಫ್ಲಿಕ್ಸ್ ಸರಣಿಯೆ ಇದೆ. ನೆಟ್ ಫ್ಲಿಕ್ಸ್ ನ ಪ್ರಸಿದ್ಧ ಮ್ಯಾರೇಜ್ ಸ್ಟೋರಿ ಆರು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಇನ್ನು ನೆಟ್ ಫ್ಲಿಕ್ಸ್ 17 ವಿಭಾಗದಲ್ಲಿ ಸ್ಪರ್ಧೆಗಿಳಿದು ವರ್ಷದ ಅತೀ ಹೆಚ್ಚು ನಾಮನಿರ್ದೇಶನಗೊಂಡ ಖ್ಯಾತಿ ನೆಟ್ ಫ್ಲಿಕ್ಸ್ ಗೆ ಸಿಕ್ಕಿದೆ.
ಜನವರಿ 5 ರಿಂದ ಲಾಸ್ ಎಂಜಲೀಸ್ ನ ಬೆವರ್ಲಿ ಹಿಲ್ಸ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಯಾರೆಲ್ಲ ಪ್ರಶಸ್ತಿ ಗೆದ್ದು ಬೀಗಲಿದ್ದಾರೆ ಎನ್ನುವುದು ಅಂದು ಬಹಿರಂಗವಾಗಲಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಅಮೆರಿಕದ ಸಿನಿಮಾ ಮತ್ತು ಟಿವಿ ಕ್ಷೇತ್ರಕ್ಕೆ ನೀಡುವ ಪ್ರಸಿದ್ಧ ಅವಾರ್ಡ್ ಕಾರ್ಯಕ್ರಮ.

ಉತ್ತಮ ಚಿತ್ರ ವಿಭಾಗದಲ್ಲಿ 5 ಸಿನಿಮಾಗಳು ನಾಮನಿರ್ದೇಶನಗೊಂಡಿವೆ. 1917, ದಿ ಐರಿಶ್ ಮನ್, ಜೋಕರ್, ಮ್ಯಾರೇಜ್ ಸ್ಟೋರಿ ಮತ್ತು ದಿ ಟೂ ಪಾಪ್ಸ್ ಚಿತ್ರಗಳು ನಾಮನಿರ್ದೇಶನ ಗೊಂಡಿವೆ. ವಿಶೇಷ ಅಂದರೆ ಈ ಐದು ಚಿತ್ರಗಳಲ್ಲಿ ಮೂರು ಚಿತ್ರಗಳು ನೆಟ್ ಫ್ಲಿಕ್ಸ್ ನಿರ್ಮಾಣದ ಚಿತ್ರಗಳಾಗಿವೆ. ಇನ್ನು ಈ ವರ್ಷ ಸಖತ್ ಸದ್ದು ಮಾಡಿದ ಜೋಕರ್ ಸಿನಿಮಾ ಕೂಡ ಪ್ರಶಸ್ತಿ ರೇಸ್ ನಲ್ಲಿದೆ.


Click it and Unblock the Notifications











