For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ನಲ್ಲಿ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದ 'ಗ್ರೀನ್ ಬುಕ್'

  |

  2019ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಸಾಲಿನಲ್ಲಿ 'ಗ್ರೀನ್ ಬುಕ್' ಅತ್ಯುತ್ತಮ ಸಿನಿಮಾವಾಗಿದೆ. ಪೀಟರ್ ಫರೇನಿ ನಿರ್ದೇಶನ ಈ ಸಿನಿಮಾಗೆ ಅತ್ಯುನ್ನತ ಆಸ್ಕರ್ ಗೌರವ ದೊರೆತಿದೆ.

  'ಗ್ರೀನ್ ಬುಕ್' ಸಿನಿಮಾ ಅಮೇರಿಕನ್ ಬಯೋಗ್ರಾಫಿಕಲ್ ಕಾಮಿಡಿ ಡ್ರಾಮಾ. ನೈಜ ಫಟನೆಯಿಂದ ಸ್ಫೂರ್ತಿ ಪಡೆದು ಈ ಸಿನಿಮಾವನ್ನು ಮಾಡಲಾಗಿತ್ತು. ಮಹೆರ್ಶಲಾ ಅಲಿ ಹಾಗೂ ವಿಗೋ ಮಾರ್ಟಿನ್ಸೆನ್ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

  The Oscars LIVE : ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ರೋಮಾ

  'ರೊಮಾ' ಹಾಗೂ 'ವೈಸ್' ಸಿನಿಮಾಗಳ ಪೈಪೋಟಿಯ ನಡುವೆಯೂ 'ಗ್ರೀನ್ ಬುಕ್' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಇದರ ಜೊತೆಗೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯನ್ನು ಮಹೆರ್ಶಲಾ ಅಲಿ ಪಡೆದುಕೊಂಡಿದ್ದಾರೆ.

  ಕಳೆದ ವರ್ಷ ಸಪ್ಟೆಂಬರ್ 11 ರಂದು 'ಗ್ರೀನ್ ಬುಕ್' ಸಿನಿಮಾ ಟೊರೆಂಟೊ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಲ್ಡ್ ಪ್ರಿಮೀಯರ್ ಆಗಿತ್ತು.

  ಅತ್ಯುತ್ತಮ ಸಾಕ್ಷ್ಯಚಿತ್ರ (ಶಾರ್ಟ್) ಆಸ್ಕರ್ ಪ್ರಶಸ್ತಿ ಪಡೆದ 'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್'

  ಜೊತೆಗೆ ಇಲ್ಲಿ ಪಿಪಲ್ ಚಾಯ್ಸ್ ಅವಾರ್ಡ್ ಕೂಡ ಪಡೆದುಕೊಂಡಿತ್ತು. 130 ನಿಮಿಷದ ಅವಧಿಯ ಈ ಸಿನಿಮಾ ಇಂಗ್ಲೀಷ್ ಭಾಷೆಯಲ್ಲಿದೆ. $23 ಮಿಲಿಯನ್ ಡಾಲರ್ ಬಂಡವಾಳದಲ್ಲಿ ನಿರ್ಮಾಣವಾದ ಈ ಸಿನಿಮಾ $144 ಮಿಲಿಯನ್ ಗಳಿಕೆ ಮಾಡಿದೆ.

  ಒಂದು ಕಡೆ ಬಾಕ್ಸ್ ಆಫೀಸ್ ಕಲೆಕ್ಷನ್ ಜೊತೆಗೆ ಪ್ರಶಸ್ತಿಗಳು ಸಹ ಸಿನಿಮಾಗೆ ಬರುತ್ತಿವೆ. ಕಳೆದ ತಿಂಗಳು ಇದೇ ಸಿನಿಮಾಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ನಲ್ಲಿ ಮೂರು ಪ್ರಶಸ್ತಿಗಳು ಬಂದಿತ್ತು. ಬೆಸ್ಟ್ ಮೋಷನ್ ಪಿಚ್ಚರ್ ಸೇರಿದಂತೆ ಮೂರು ಅವಾರ್ಡ್ 'ಗ್ರೀನ್ ಬುಕ್' ಪಾಲಾಗಿತ್ತು.

  English summary
  The Oscar winners 2019: Green book wins the Oscar for Best movie Award. The movie is directed by Peter Farrelly and it is Aaerican biographical comedy drama. The film is inspired by the true story starring Mahershala Ali and Viggo Mortensen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X