»   » ಹಾಲೋವಿನ್ ಡೇ ವಿಶೇಷ: ಟಾಪ್ ಹಾರರ್ ಚಿತ್ರಗಳು

ಹಾಲೋವಿನ್ ಡೇ ವಿಶೇಷ: ಟಾಪ್ ಹಾರರ್ ಚಿತ್ರಗಳು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ ನಲ್ಲಿ ಹಾರರ್ ಮೂವಿಗಳ ಸೀಸನ್ ಯಾವಾಗ ಎಂದು ಹೇಳಲು ಬರುವುದಿಲ್ಲ. ತುಂಬಾ ಜನಪ್ರಿಯ ಸರಣಿಯ ಹಾರರ್ ಚಿತ್ರಗಳು ಕೂಡಾ ನೆಲಕಚ್ಚಿದ ಉದಾಹರಣೆಗಳಿವೆ.

ಇತ್ತೀಚೆಗೆ ಪ್ಯಾರನಾರ್ಮಲ್ ಆಕ್ಟಿವಿಟಿ ಸರಣಿ 4ನೇ ಭಾಗ(ದಿ ಮಾರ್ಕ್ಡ್ ಒನ್ಸ್) ಚಿತ್ರದ ಬಗ್ಗೆ ಬಂದ ಸಾರ್ವಜನಿಕರ ಅಭಿಪ್ರಾಯ, ವಿಮರ್ಶಕರ ಕಟು ಟೀಕೆಗಳನ್ನು ಮರೆಯುವಂತಿಲ್ಲ. ಅದರೂ ಈಗಲೂ ರೋಮಾಂಚನಕಾರಿ ಸನ್ನಿವೇಶಗಳನ್ನು ಒಳಗೊಂಡ ಥ್ರಿಲ್ಲರ್, ಹಾರರ್ ಮೂವಿಗಳಿಗೇನು ಕಡಿಮೆ ಇಲ್ಲ. ಹಾಲೋವಿನ್ ಡೇ ಹತ್ತಿರಾಗುತ್ತಿರುವ ಸಂದರ್ಭದಲ್ಲಿ ಭಯಾನಕ ಕಥೆಗಳನ್ನು ಹೇಳುವುದು, ಮತ್ತು ಭಯಾನಕ ಸಿನಿಮಾಗಳನ್ನು ನೋಡುವುದು ಕೂಡಾ ಹಿಂದಿನಿಂದ ನಡೆದುಕೊಂಡು ಬಂದಿದೆ.

ಹಾಲೋವಿನ್ ಮೂಲತ ಸ್ಕಾಟಿಷ್ ಮತ್ತು ಐರೀಷ್ ನಾಡಿನ ಆಚರಣೆ (ಸೆಲ್ಟಿಕ್ ) ಅಲ್ಲಿನ ಜನರು ವಿಶ್ವದ ವಿವಿಧ ಭಾಗಗಳಿಗೆ ವಲಸೆ ಹೋದಂತೆ ಹಾಲೋವಿನ್ ಅಮೆರಿಕ,ಆಸ್ಟ್ರೇಲಿಯ,ಕೆನಡಾ ದೇಶಗಳಿಗೂ ಹಬ್ಬಿ ಆಚರಣೆ ಮೊದಲಾಯಿತು. ಹಾಲೋವಿನ್ ಡೇ ದಿನದಲ್ಲಿ ಭೂತದ ಕಥೆಗಳನ್ನು ಹೇಳುವುದು ಮತ್ತು ದಿಗಿಲು ಹುಟ್ಟಿಸುವ ಸಿನಿಮಾಗಳನ್ನು ವೀಕ್ಷಣೆ ಹ್ಯಾಲೋವೀನ್ ವಿನೋದ ಕೂಟಗಳಲ್ಲಿ ಮಾಮೂಲು. ಅದಕ್ಕಾಗಿ 'ದಿ ಇವಿಲ್ ಡೆಡ್' ನಿಂದ 'ದಿ ಎಕ್ಸೊರ್ಸಿಸ್ಟ್' ತನಕ ಬೆಚ್ಚಿ ಬೀಳುವಂಥ ದೃಶ್ಯಗಳುಳ್ಳ ಹಾಲಿವುಡ್ ಚಿತ್ರಗಳ ಪಟ್ಟಿ ತಯಾರಿಸಿ ನಿಮ್ಮ ಮುಂದಿಡುತ್ತಿದ್ದೇವೆ.

2007ರ ರೆಕ್
  

2007ರ ರೆಕ್

2007ರಲ್ಲಿ ತೆರೆಕಂಡ ರೆಕ್ ಸ್ಪಾನೀಷ್ ಭಾಷೆಯ ಹಾರರ್ ಚಿತ್ರ. Record ಎಂಬ ಪದರ ಸಂಕ್ಷಿಪ್ತ ರೂಪವೇ ಚಿತ್ರದ ಹೆಸರು Rec. ಟಿವಿ ರಿಪೋರ್ಟರ್ ಏಂಜೆಲಾ ಹಾಗೂ ಕೆಮೆರಾಮ್ಯಾನ್ ಒಂದು ಮನೆಯಲ್ಲಿ ಸಿಲುಕುತ್ತಾರೆ. ಆ ಮನೆಯಲ್ಲಿ ನಡೆಯುವ ಭೂತಚೇಷ್ಟೆ ಕೊಲೆಗಳು ಚಿತ್ರದ ಮುಂದಿನ ಕಥೆಯಾಗಿದೆ.

ದಿ ಒಮನ್ 1976
  

ದಿ ಒಮನ್ 1976

70ರ ದಶಕದಲ್ಲಿ ಬಂದ ಚಿತ್ರವಾದರೂ ಇಂದಿಗೂ ಬೆನ್ನ ಹುರಿಯಲ್ಲಿ ಚಳಿಗುಳ್ಳೆಯನ್ನು ಮೂಡಿಸುತ್ತದೆ. ಚಿತ್ರದ ನೋಡಿದ ಹಲವು ದಿನಗಳ ಕಾಲ ನಿದ್ದೆಗೆಡುವಂತೆ ಮಾಡುವ ಸನ್ನಿವೇಶಗಳು ಇಲ್ಲಿವೆ.

Insidious
  

Insidious

ಜೇಮ್ಸ್ ವಾನ್ಸ್ ಅವರ ಚಿತ್ರದಲ್ಲಿ ಬಾಲನಟರದ್ದೇ ಕಾರುಬಾರು, 1982ರಲ್ಲಿ ತೆರೆ ಕಂಡ Poltergeist ಚಿತ್ರದ ಕಥೆಯನ್ನೇ ಹೋಲುವ ಚಿತ್ರವಾದರೂ ಬಾಲಕನೊಬ್ಬ ಪಿಶಾಚಿಗಳ ಗುಂಪಿಗೆ ಬಲಿಯಾಗಿ ಕಾಡುವ ಕಥೆ ಹೊಂದಿದೆ.

ದಿ ಇವಿಲ್ ಡೆಡ್
  

ದಿ ಇವಿಲ್ ಡೆಡ್

ದಿ ಇವಿಲ್ ಡೆಡ್ ಸರಣಿಯ 2013ರ ಚಿತ್ರ ಕೂಡಾ 1981ರ ಚಿತ್ರದಂತೆ ಬೆಚ್ಚಿ ಬೀಳಿಸುವುದರಲ್ಲಿ ಯಶಸ್ವಿಯಾಗಿತ್ತು. ಇನ್ನಷ್ಟು ನಿರೀಕ್ಷಿಸಿ

ದಿ ಬ್ಲೇರ್ ವಿಚ್ ಪ್ರಾಜೆಕ್ಟ್
  

ದಿ ಬ್ಲೇರ್ ವಿಚ್ ಪ್ರಾಜೆಕ್ಟ್

ಮೂವರು ವಿದ್ಯಾರ್ಥಿಗಳು ತಮಾಷೆಗಾಗಿ ತೆಗೆದ ವಿಡಿಯೋ ತುಣುಕುಗಳೇ ಹಾರರ್ ಚಿತ್ರದ ಜೀವಾಳವಾಗಿ ಹೊಸ ಬಗೆಯ ಹಾರರ್ ಚಿತ್ರ ಎನಿಸಿ ಜನಮೆಚ್ಚುಗೆ ಗಳಿಸಿತು.

ದಿ ಕಾಂಜೂರಿಂಗ್
  

ದಿ ಕಾಂಜೂರಿಂಗ್

ದಿ ಕಾಂಜೂರಿಂಗ್ 2013 ರಲ್ಲಿ ತೆರೆ ಕಂಡ ನೈಜ ಕಥೆ ಆಧರಿಸಿದ ಚಿತ್ರ. ಪ್ಯಾರನಾರ್ಮಲ್ ಆಕ್ಟಿವಿಟಿಗಳ ಸುತ್ತ ಹೆಣೆಯಲಾದ ಕಥೆಯುಳ್ಳ ಈ ಚಿತ್ರದ ಮೂಲ ಕಥಾ ವಸ್ತು 1970ರಲ್ಲಿ ರೋಡ್ ದ್ವೀಪದ ತೋಟದ ಮನೆಯಲ್ಲಿ ನಡೆದ ಘಟನಾವಳಿಗಳನ್ನು ಆಧಾರಿಸಿದೆ.

1973ರ ದಿ ಎಕ್ಸಾರ್ಸಿಸ್ಟ್
  

1973ರ ದಿ ಎಕ್ಸಾರ್ಸಿಸ್ಟ್

ಕಾದಂಬರಿ ಆಧಾರಿತ ದಿ ಎಕ್ಸಾರ್ಸಿಸ್ಟ್ 1973ರಿಂದಲೂ ಭಯಾನಕ ಚಿತ್ರಗಳ ಸಾಲಿನಲ್ಲಿ ಟಾಪ್ ಎನಿಸಿದೆ. ಸುಮಾರು 441 ಮಿಲಿಯನ್ ಡಾಲರ್ ಗಳಿಕೆ ಹೊಂದಿದ ಹಾರರ್ ಚಿತ್ರವಾಗಿದೆ.

ಕರ್ಸ್ ಆಫ್ ಚಕಿ
  

ಕರ್ಸ್ ಆಫ್ ಚಕಿ

ಆಂಡಿ ಬಾರ್ಕ್ಲೆ ಮೊದಲ ಚಿತ್ರಗಳ ನಂತರ ಮತ್ತೆ ಕಾಣಿಸಿಕೊಂಡ ಕರ್ಸ್ ಆಫ್ ಚಕಿ ಚಿತ್ರದಲ್ಲಿ ಮಗುವಿನ ರೂಪದ ಬೊಂಬೆ ಮಾಡುವ ಭೂತ ಚೇಷ್ಟೆ ಕಾಣಬಹುದು.

ಆಡಿಷನ್
  

ಆಡಿಷನ್

1999ರಲ್ಲಿ ತೆರೆ ಕಂಡ ಜಪಾನೀಸ್ ಸೈಕಾಲಾಜಿಕಲ್ ಹಾರರ್ ಚಿತ್ರ ಈಗಲೂ ಭಯ ಹುಟ್ಟಿಸುತ್ತದೆ.

ದಿ ರಿಂಗ್
  

ದಿ ರಿಂಗ್

1998 ಜಪಾನೀಸ್ ಚಿತ್ರವೊಂದರ ರಿಮೇಕ್ ದಿ ರಿಂಗ್ ಕೊಜಿ ಸುಜುಕಿ ಅವರ ಕಾದಂಬರಿ ಆಧಾರಿತ ಚಿತ್ರ.

English summary
Hollywood horror movies can be really frightening if shown properly. While critics and audience made fun of Paranormal Activity 4 (The Marked Ones) that released earlier this year, we are sure there are some hair-raising horror movies which can take the s**t out of you. Yes, we mean it!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada