For Quick Alerts
  ALLOW NOTIFICATIONS  
  For Daily Alerts

  ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಕಾಲಿಡುತ್ತಿರುವ 'ಹ್ಯಾರಿಪಾಟರ್' ನಟಿ

  By ಸೋನು ಗೌಡ
  |

  ಹಾಲಿವುಡ್ ನ ಖ್ಯಾತ ಸಿರೀಸ್ ಸಿನಿಮಾ 'ಹ್ಯಾರಿಪಾಟರ್' ನಲ್ಲಿ ಅಫ್ಶಾನ್ ಅಜಾದ್ ಅವರು 'ಪದ್ಮಾವತಿ ಪಾಟೀಲ್' ಅಂತ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದರು. ಈ ಅಫ್ಶಾನ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುತ್ತೆ.

  ಅಂದಹಾಗೆ ಈಗ ಈ ನಟಿಯ ವಿಚಾರ ಯಾಕಪ್ಪಾ ಅಂದ್ರೆ, ಮುದ್ದು ಮುಖದ ನಟಿ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಕಾಲಿಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿರುವುದರಿಂದ ಕೊಂಚ ಜಾಸ್ತಿ ಎಕ್ಸೈಟ್ ಆಗಿದ್ದಾರೆ ನಟಿ ಅಫ್ಶಾನ್ ಅವರು.[ಚಿತ್ರಗಳು: 'ಹ್ಯಾರಿಪಾಟರ್' ನಟಿ ಸೆಕ್ಸಿ ಎಮ್ಮಾ ವ್ಯಾಟ್ಸನ್ ಭಾವ-ಭಂಗಿ]

  ಸೆಪ್ಪೆಂಬರ್ ನಲ್ಲಿ ನಡೆಯಲಿರುವ 'ಹೈದರಾಬಾದ್ ಕಾಮಿಕ್ ಕಾನ್-2016' ಕಾರ್ಯಕ್ರಮದಲ್ಲಿ ಭಾಗವಹಿಸಲು, ಹಾಲಿವುಡ್ ನಟಿ ಅಫ್ಶಾನ್ ಅಜಾದ್ ಅವರು ಸಂಭ್ರಮದಿಂದ ಭಾರತಕ್ಕೆ ಆಗಮಿಸುತ್ತಿದ್ದಾರೆ.

  ಸೆಪ್ಟೆಂಬರ್ 24 ಮತ್ತು 25 ರಂದು ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್ ನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ, ವಿಶೇಷ ಚರ್ಚೆಗಳಲ್ಲಿ ಭಾಗವಹಿಸಿ, ಪೋಸ್ಟರ್ ಗಳಿಗೆ ಸಹಿ ಮಾಡಿ , ಅಭಿಮಾನಿಗಳೊಂದಿಗೆ, ಬಾಂಗ್ಲಾ ಮೂಲದ ನಟಿ ಅಫ್ಶಾನ್ ಅವರು ಮಾತುಕತೆ ನಡೆಸಲಿದ್ದಾರೆ.[ವಿಮರ್ಶೆ : ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್]

  'Harry Potter' fame actress Afshan Azad to visit in India

  ಭಾರತದಲ್ಲಿರುವ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಉತ್ಸುಕರಾಗಿರುವ ನಟಿ ಅಫ್ಶಾನ್ ಅಜಾದ್ ಅವರು ಹಾಲಿವುಡ್ 'ಹ್ಯಾರಿಪಾಟರ್' ಸರಣಿ ಸಿನಿಮಾಗಳಲ್ಲಿ, ಸತತ 5 ಸಿನಿಮಾಗಳಲ್ಲಿ ಪದ್ಮಾವತಿ ಪಾಟೀಲ್ ಪಾತ್ರ ವಹಿಸಿ ಗಮನ ಸೆಳೆದಿದ್ದಾರೆ.

  ಸದ್ಯ ಇಂಗ್ಲೆಂಡ್ ನಲ್ಲಿ ನೆಲೆಸಿರುವ ನಟಿ ಅಫ್ಶಾನ್ ಅವರು 'ಹ್ಯಾರಿಪಾಟರ್' ಮುಂದುವರಿದ ಸಿರೀಸ್ ಸಿನಿಮಾ ನಿರ್ಮಾಣ ಮಾಡಲು ಉತ್ಸುಕರಾಗಿದ್ದಾರೆ.

  English summary
  'Harry Potter' fame Hollywood actress Afshan Azad will be visiting India to be part of the 'Hyderabad Comic Con-2016' here in September 24th and 25th. The English actress is excited ahead of her first trip to the country.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X