For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ಗುಣವಾದ ಹ್ಯಾರಿ ಪಾಟರ್ ಲೇಖಕಿ ಹೇಳಿಕೊಟ್ಟಿದ್ದಾರೊಂದು ಟೆಕ್ನಿಕ್

  |

  ಕೊರೊನಾ ವೈರಸ್ ಗೆ ತುತ್ತಾಗಿದ್ದ ಹ್ಯಾರಿ ಪಾಟರ್ ಸರಣಿಯ ಲೇಖಕಿ ಜೆ.ಕೆ.ರೌಲಿಂಗ್ ಅವರು ಸೋಂಕಿನಿಂದ ಪೂರ್ಣ ಗುಣಮುಖರಾಗಿದ್ದಾರಂತೆ.

  ಇದಕ್ಕೆ ಅಲ್ವಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗ್ರೇಟ್ ಅನ್ಸೋದು | Filmibeat Kannada

  ಹೌದು, ಹೀಗೆಂದು ಸ್ವತಃ ಜೆ.ಕೆ.ರೋಲಿಂಗ್ ಅವರೇ ಟ್ವಿಟ್ಟರ್‌ ನಲ್ಲಿ ಪ್ರಕಟಿಸಿದ್ದಾರೆ. ''ನನಗೆ ಕೊರೊನಾ ಸೋಂಕಿನ ಎಲ್ಲಾ ಲಕ್ಷಣಗಳು ಇದ್ದವು, ಆದರೆ ನಾನು ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ, ಬದಲಾಗಿ ಮನೆಯಲ್ಲಿಯೇ ಸ್ವಚಿಕಿತ್ಸೆಗೆ ಒಳಗಾದೆ, ಈಗ ಪೂರ್ಣವಾಗಿ ಗುಣವಾಗಿದ್ದೇನೆ'' ಎಂದು ಹೇಳಿದ್ದಾರೆ.

  ಜೆ.ಕೆ.ರೌಲಿಂಗ್ ಪತಿ ಸಹ ವೈದ್ಯರೇ ಆಗಿದ್ದು ಅವರ ಮಾರ್ಗದರ್ಶನದಲ್ಲಿ ಕೆಲವು ಡಯೆಟ್, ಔಷಧಗಳು, ವ್ಯಾಯಾಮಗಳನ್ನು ಮಾಡಿ ಜೆ.ಕೆ.ರೋಲಿಂಗ್ ಕೊರೊನಾ ವನ್ನು ದೂರ ಓಡಿಸಿದ್ದಾರೆ.

  ಉಸಿರಾಟದ ವ್ಯಾಯಾಮ ಮಾಡಿದ ರೌಲಿಂಗ್

  ಉಸಿರಾಟದ ವ್ಯಾಯಾಮ ಮಾಡಿದ ರೌಲಿಂಗ್

  ಕೊರೊನಾ ಧೃಡವಾದವರು ಸಣ್ಣ ಉಸಿರಾಟದ ವ್ಯಾಯಾಮ ಮಾಡುವ ಮೂಲಕ ಕೊರೊನಾ ವೈರಸ್ ನಿಂದ ಬಹುಮಟ್ಟಿಗೆ ಬಿಡುಗಡೆ ಪಡೆಯಬಹುದು ಎಂದು ಹೇಳಿರುವ ಜೆ.ಕೆ.ರೌಲಿಂಗ್, ತಾವೂ ಸಹ ಈ ತಂತ್ರವನ್ನು ಅನುಸರಿಸರಿಸುವುದಾಗಿ ಹೇಳಿದ್ದಾರೆ.

  ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಿರುವ ರೌಲಿಂಗ್

  ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಿರುವ ರೌಲಿಂಗ್

  ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಹಾಕಿರುವ ರೌಲಿಂಗ್, ಬ್ರಿಟನ್‌ ನ ಕ್ವೀನ್ಸ್‌ ಆಸ್ಪತ್ರೆಯ ವೈದ್ಯರು ಕೋವಿಡ್ 19 ರೋಗಿಗಳಿಗಾಗಿ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕೆಲವು ರೀತಿಯ ಉಸಿರಾಟದ ವ್ಯಾಯಾಮ ಮಾಡುವಂತೆ ವೈದ್ಯರು ಹೇಳಿದ್ದಾರೆ.

  ಕೊರೊನಾ ಪರೀಕ್ಷೆ ಮಾಡಿಸಿರಲಿಲ್ಲ ರೌಲಿಂಗ್

  ಕೊರೊನಾ ಪರೀಕ್ಷೆ ಮಾಡಿಸಿರಲಿಲ್ಲ ರೌಲಿಂಗ್

  ಜೆ.ಕೆ.ರೌಲಿಂಗ್ ಅವರು ಹತ್ತು ದಿನ ವೈರಸ್‌ ನಿಂದ ಬಾಧಿತರಾಗಿದ್ದರಂತೆ. ಪತಿಯೂ ವೈದ್ಯರೇ ಆಗಿದ್ದ ಕಾರಣ ಮನೆಯಲ್ಲೇ ಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಅವರು ಯಾವುದೇ ಪರೀಕ್ಷೆ ಮಾಡಿಸಿರಲಿಲ್ಲ.

  ವಿಶ್ವವಿಖ್ಯಾತ ಲೇಖಕಿ ಹ್ಯಾರಿ ಪಾಟರ್‌

  ವಿಶ್ವವಿಖ್ಯಾತ ಲೇಖಕಿ ಹ್ಯಾರಿ ಪಾಟರ್‌

  ವಿಶ್ವವಿಖ್ಯಾತವಾಗಿರುವ ಹ್ಯಾರಿ ಪಾಟರ್ ಸರಣಿಯ ಲೇಖಕಿ ಇವರೇ ಆಗಿದ್ದು, ಹ್ಯಾರಿ ಪಾಟರ್ ಸರಣಿಯ ಮತ್ತೊಂದು ಪುಸ್ತಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅಷ್ಟೆ ಅಲ್ಲದೆ, ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಈ ಪುಸ್ತಕದ ಇ-ಬುಕ್ ಮಾದರಿಯನ್ನು ಈ ಬಾರಿ ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.

  English summary
  Harry Potter writer JK Rowling said she recovered from coronavirus. She also announced new book of Harry Potter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X