For Quick Alerts
  ALLOW NOTIFICATIONS  
  For Daily Alerts

  ಮಗಳಿಗೆ 'ಇಂಡಿಯಾ' ಎಂದು ನಾಮಕರಣ ಮಾಡಿದ ಹಾಲಿವುಡ್ ಖ್ಯಾತ ನಟ

  |

  ಅನೇಕ ವಿದೇಶಿ ಸೆಲೆಬ್ರಿಟಿಗಳಿಗೆ ಭಾರತದ ಮೇಲೆ ವಿಶೇಷವಾದ ಪ್ರೀತಿ, ಗೌರವ ಇಟ್ಟುಕೊಂಡಿರುತ್ತಾರೆ. ಭಾರತೀಯರ ಸಂಸ್ಕೃತಿ, ಇಲ್ಲಿನ ಜನರ ಪ್ರೀತಿ, ಕಾಳಜಿಗೆ ಮಾರುಹೋಗಿರುತ್ತಾರೆ. ಸಿನಿಮಾ ತಾರೆಯರಿರಬಹುದು ಅಥವಾ ಆಟಗಾರರಾಗಿರಬಹುದು ಅನೇಕರು ಇಂಡಿಯಾವನ್ನು ತುಂಬ ಇಷ್ಟಪಡಿತ್ತಾರೆ.

  ಎಷ್ಟರ ಮಟ್ಟಿಗೆ ಅಂದ್ರೆ ತಮ್ಮ ಮಕ್ಕಳಿಗೆ ಇಂಡಿಯಾ ಅಂತ ಹೆಸರಿಡುವ ಮೂಲಕ ಭಾರತದ ಮೇಲಿರುವ ಅಭಿಮಾನ ಮೆರೆಯುತ್ತಾರೆ. ಸದ್ಯ ಹಾಲಿವುಡ್ ನ ಖ್ಯಾತ ನಟನೊಬ್ಬ ಮಗಳಿಗೆ ಇಂಡಿಯಾ ಅಂತ ಹೆಸರಿಟ್ಟಿದ್ದಾರೆ.

  ಈ ಹಿಂದೆ ಕೂಡ ಅನೇಕ ನಟನಟಿಯರು ಮಕ್ಕಳಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದಾರೆ. ನಟಿ ಮಾರಿಸೋಲ್, ಗಾಯಕಿ ಸಾರಾ ಮ್ಯಾಕ್ಲಾನ್, ಖ್ಯಾತ ಬ್ರಿಟೀಶ್ ನಟಿ ಎಮ್ಮಾ ಫರ್ಗುಸನ್ ಸೇರಿದಂತೆ ಇನ್ನು ಅನೇಕರು ಇಂಡಿಯಾದ ಮೇಲಿನ ಪ್ರೀತಿಯನ್ನು ಮಕ್ಕಳಿಗೆ ಹೆಸರಿಡುವ ಮೂಲಕ ತೋರಿಸಿದ್ದಾರೆ. ಸದ್ಯ ಹಾಲಿವುಡ್ ನ ಮತ್ತೊಬ್ಬ ನಟ ಇಂಡಿಯಾ ಎಂದು ಹೆಸರಿಟ್ಟಿದ್ದಾರೆ. ಯಾರು ಆ ನಟ?ಇಂಡಿಯಾ ಅಂತ ಹೆಸರಿಡಲು ಕಾರಣವೇನು? ಮುಂದೆ ಓದಿ..

  ಕ್ರಿಸ್ ಹೆಮ್ಸ್ ವರ್ಥ್ ಮಗಳ ಹೆಸರು ಇಂಡಿಯಾ

  ಕ್ರಿಸ್ ಹೆಮ್ಸ್ ವರ್ಥ್ ಮಗಳ ಹೆಸರು ಇಂಡಿಯಾ

  ಹಾಲಿವುಡ್ ನ ಖ್ಯಾತ ನಟ ಕ್ರಿಸ್ ಹೆಮ್ಸ್ ವರ್ಥ್ ತಮ್ಮ ಮಗಳಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ. ಕ್ರಿಸ್ ಹೆಮ್ಸ್ ವರ್ಥ್, ಹಾಲಿವುಡ್ ನ ಖ್ಯಾತ ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ಮಿಂಚುವ ಮೂಲಕ ಖ್ಯಾತಿಗಳಿಸಿದ ನಟ. ಹಾಲಿವುಡ್ ನಲ್ಲಿ ಸ್ಟಾರ್ ಆದ್ರೂ ಭಾರತದ ಮೇಲೆ ಕ್ರಿಸ್ ಗೆ ವಿಶೇಷವಾದ ಪ್ರೀತಿ ಮತ್ತು ಗೌರವ ಇಟ್ಟುಕೊಂಡಿದ್ದಾರೆ. ಅದೆ ಪ್ರೀತಿಗೆ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದಾರೆ.

  ಚಿತ್ರೀಕರಣ ವೇಳೆ ಭಾರತೀಯರು ತೋರಿದ ಪ್ರೀತಿ

  ಚಿತ್ರೀಕರಣ ವೇಳೆ ಭಾರತೀಯರು ತೋರಿದ ಪ್ರೀತಿ

  ಕ್ರಿಸ್ ಹೆಮ್ಸ್ ವರ್ಥ್ ನೆಟ್ ಫ್ಲಿಕ್ಸ್ 'ಧಾಕಾ' ಶೂಟಿಂಗ್ ಗಾಗಿ ಭಾರತಕ್ಕೆ ಬಂದಿದ್ದರು. ಅಹಮದಾಬಾದ್ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಸಿದ್ದರಂತೆ. ಆ ಸಮಯದಲ್ಲಿ ಭಾರತೀಯರು ತೋರಿದ ಪ್ರೀತಿ, ಕಾಳಕಿ, ಗೌರವಕ್ಕೆ ಕ್ರಿಸ್ ಫಿದಾ ಆಗಿದ್ದಾರೆ. ಮೊದಲು ಭಾರತದಲ್ಲಿ ಶೂಟಿಂಗ್ ಮಾಡಲು ಆತಂಕ ಪಟ್ಟಿದ್ದರಂತೆ. ಸಾವಿರಾರು ಜನ ಬಂದು ಶೂಟಿಂಗ್ ನೋಡುತ್ತಿದ್ದ ರೀತಿಯನ್ನು ಕ್ರಿಸ್ ಹಿಂದೆಂದೂ ನೋಡಿರಲಿಲ್ಲವಂತೆ. ಮೊದಲ ಭಯಪಟ್ಟುಕೊಳ್ಳುತ್ತಿದ್ದ ಕ್ರಿಸ್ ಆನಂತರ ಜನರ ಪ್ರೀತಿ ಕಂಡು ಖುಷಿಯಾಗಿದ್ರಂತೆ.

  ಕ್ರಿಸ್ ಪತ್ನಿಗೂ ಭಾರತದ ಅಂದ್ರೆ ಪ್ರೀತಿ

  ಕ್ರಿಸ್ ಪತ್ನಿಗೂ ಭಾರತದ ಅಂದ್ರೆ ಪ್ರೀತಿ

  ನಟ ಕ್ರಿಸ್ ಪತ್ನಿ ಎಲ್ಸಾ ಅವರಿಗೂ ಭಾರತ ಅಂದ್ರೆ ತುಂಬಾ ಇಷ್ಟವಂತೆ. ಆಕೆ ಗರ್ಭಿಣಿ ಆಗಿದ್ದಾಗ ಭಾರತದಲ್ಲೆ ಸಾಕಷ್ಟು ಸಮಯ ಕಳೆದಿದ್ದರಂತೆ. ಹಾಗಾಗಿ ಇಬ್ಬರು ಸೇರಿ ಮಗಳಿಗೆ ಇಂಡಿಯಾ ಎಂದು ನಾಮಕರಣಮಾಡಿದ್ದಾರಂತೆ. ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ಮಕ್ಕಳಿಗೆ ಇಂಡಿಯಾ ಎಂದು ಹೆಸರಿಟ್ಟ ಸೆಲೆಬ್ರಿಟಿಗಳು

  ಮಕ್ಕಳಿಗೆ ಇಂಡಿಯಾ ಎಂದು ಹೆಸರಿಟ್ಟ ಸೆಲೆಬ್ರಿಟಿಗಳು

  ಭಾರತದ ಮೇಲಿನ ಪ್ರೀತಿಗೆ ಮಗಳಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದು ಕ್ರಿಸ್ ಹೆಮ್ಸ್ ವರ್ಥ್ ಮಾತ್ರವಲ್ಲ. ಈ ಸಾಲಿಗೆ ಅನೇಕ ಸ್ಟಾರ್ಸ್ ಕೂಡ ಸೇರುತ್ತಾರೆ. ಈ ಮೊದಲು ಇಂಡಿಯಾ ಎಂದು ಮಕ್ಕಳಿಗೆ ಅನೇಕರು ಹೆಸರಿಟ್ಟಿದ್ದಾರೆ. ಹಾಲಿವುಡ್ ನಟಿ ಮಾರಿಸೋಲ್ ಮಗಳಿಗೆ 'ರೇನ್ ಇಂಡಿಯಾ ಲೆಕ್ಟೊನ್' ಎಂದು ಹೇಸರಿಟ್ಟಿದ್ದಾರೆ. ಇನ್ನು ಕೆನಡದ ಗಾಯಕಿ ಸಾರಾ ಮ್ಯಾಕ್ಲಾನ್ ಭಾರತೀಯ ಮೂಲದವರನ್ನು ಮದುವೆಯಾಗಿದ್ದರು. ಮಗಳಿಗೆ 'ಇಂಡಿಯಾ ಆನ್ ಸುಶೀಲ್ ಸೂದ್' ಎಂದು ಹೆಸರಿಟ್ಟಿದ್ದಾರೆ. ಖ್ಯಾತ ಬ್ರಿಟೀಶ್ ನಟಿ ಎಮ್ಮಾ ಫರ್ಗುಸನ್ ಕೂಡ ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದಾರೆ. ಇನ್ನು ಅನೇಕ ಕ್ರಿಕೆಟ್ ಆಟಗಾರರು ಮಕ್ಕಳಿಗೆ ಇಂಡಿಯಾ ಎಂದು ಹೆಸರಿಟ್ಟು ಭಾರತದ ಮೇಲಿನ ಅಭಿಮಾನ ಮೆರೆದಿದ್ದಾರೆ.

  English summary
  Hollywood famous actor Chris Hemsworth naming his daughter India. He revealed the reason behind naming her daughter India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X