»   » ಆಸ್ಕರ್ ವಿಜೇತ ನಟ ಆತ್ಮಹತ್ಯೆಗೆ ಶರಣು

ಆಸ್ಕರ್ ವಿಜೇತ ನಟ ಆತ್ಮಹತ್ಯೆಗೆ ಶರಣು

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಆಸ್ಕರ್ ಪ್ರಶಸ್ತಿ ಪಡೆದಿದ್ದ ಹಾಲಿವುಡ್ ನ ಖ್ಯಾತ ನಟ ರಾಬಿನ್​ ವಿಲಿಯಮ್ಸ್ ಕ್ಯಾಲಿಫೋರ್ನಿಯಾದ ಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯಾದ ಟಿಬ್ಯೂರ್ನ್ ನ ಮನೆಯಲ್ಲಿ 63 ವರ್ಷ ರಾಬಿನ್ ಶವ ಪತ್ತೆಯಾಗಿದೆ. ಉಸಿರಾಟದ ತೊಂದರೆ ಉಂಟಾಗಿ ಆಮ್ಲಜನಕ ಕೊರತೆಯಿಂದ(Asphyxia) ಸಾವನ್ನಪ್ಪಿರುವ ಸಾಧ್ಯತೆಯಿದೆ. ಸಿನಿರಸಿಕರು ನಕ್ಕು ನಲಿಯುವಂತೆ ಮಾಡುತ್ತಿದ್ದ ಈ ನಟ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೊರ್ಕ್ ಅಂಡ್ ಮಿಂಡಿ ಎಂಬ ಯುಎಸ್ ಟಿವಿ ಸರಣಿ ಮೂಲಕ ಜನಪ್ರಿಯತೆ ಗಳಿಸಿದ ರಾಬಿನ್ 1987ರಲ್ಲಿ ಗುಡ್ ಮಾರ್ನಿಂಗ್ ವಿಯಟ್ನಾಂ, 1989ರಲ್ಲಿ ಡೆಡ್ ಪೊಯಟ್ಸ್ ಸೊಸೈಟಿ, 1997ರಲ್ಲಿ ಗುಡ್ ವಿಲ್ ಹಂಟಿಂಗ್ ಹಾಗೂ 1993ರಲ್ಲಿ ತೆರೆ ಕಂಡ Mrs Doubtfire ಚಿತ್ರಗಳು ಇವರಿಗೆ ಹೆಸರು ತಂದುಕೊಟ್ಟಿವೆ.

ಆತ್ಮಹತ್ಯೆ ಪ್ರಕರಣ ಪೊಲೀಸರ ಶಂಕೆ

ಆಸ್ಕರ್ ಪ್ರಶಸ್ತಿ ಪಡೆದಿದ್ದ ಹಾಲಿವುಡ್ ನ ಖ್ಯಾತ ನಟ ರಾಬಿನ್​ ವಿಲಿಯಮ್ಸ್ ಕ್ಯಾಲಿಫೋರ್ನಿಯಾದ ಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ರಾಬಿನ್ ಸಾವಿಗೆ ಕಂಬನಿ

ರಾಬಿನ್ ಸಾವಿಗೆ ಕಂಬನಿ ಸುರಿಸಿದ ಅಭಿಮಾನಿಗಳಿಂದ ಟ್ವೀಟ್

ರಾಬಿನ್ ಕೇವಲ ಕಾಮಿಡಿಯನ್ ಆಗಿರಲಿಲ್ಲ

ರಾಬಿನ್ ಕೇವಲ ಕಾಮಿಡಿಯನ್ ಆಗಿರಲಿಲ್ಲ ಶ್ರೇಷ್ಠ ನಟನಾಗಿದ್ದ

ರಾಬಿನ್ ದುರಂತ ಕಥೆ

ಜೀವನದಲ್ಲಿ ದುರಂತಗಳನ್ನು ಕಂಡ ರಾಬಿನ್ ಎಲ್ಲರಿಗೂ ನಗುವನ್ನು ಹಂಚಿದ

ಝುಮಾಂಜಿ ಚಿತ್ರದ ನಟನೆ ಅದ್ಭುತ

ಫ್ಲಬ್ಬರ್, ಝುಮಾಂಜಿ ಚಿತ್ರದ ನಟನೆ ಅದ್ಭುತ ಎಂದು ಅಭಿಮಾನಿಯೊಬ್ಬರಿಂದ ಟ್ವೀಟ್

English summary
Oscar winning Hollywood actor Robin Williams's body was found today in his home in California. Police suspect it is a case of suicide. In a statement from the Marin County Sheriff's department, it was revealed that the 63-year old comedian was found dead shortly before midday at his Tiburon home in northern California.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada