For Quick Alerts
  ALLOW NOTIFICATIONS  
  For Daily Alerts

  ಬಲವಂತವಾಗಿ ನಗ್ನ ನಟನೆ ಮಾಡಿಸಿದ್ದನಂತೆ ಖ್ಯಾತ ನಿರ್ದೇಶಕ

  |

  ಮೀಟೂ, ಕಾಸ್ಟಿಂಗ್ ಕೌಚ್ ಅಂತಹ ಅಭಿಯಾನಗಳು ಬಂದಮೇಲೆ ಚಿತ್ರರಂಗದಲ್ಲಿ ನಟಿಯರ ಮೇಲೆ ಆಗಿದ್ದ ಲೈಂಗಿಕ ಮತ್ತು ಮಾನಸಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದವು. ಇದೀಗ, ಹಾಲಿವುಡ್ ನಟಿಯೊಬ್ಬರು ನಿರ್ದೇಶಕನಿಂದ ಅನುಭವಿಸಿದ ಹಿಂಸೆಯನ್ನು ಹೊರಹಾಕಿದ್ದಾರೆ.

  ಅಮೇರಿಕನ್ ಟೆಲಿವಿಷನ್ ಡ್ರಾಮಾ ಸಿರೀಸ್ 'ಗೇಮ್ ಆಫ್ ಥ್ರೋನ್ಸ್'ನಲ್ಲಿ ನಟಿಸಿದ್ದ ಎಮಿಲಿಯಾ ಕ್ಲಾರ್ಕ್ ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

  ಪಾತ್ರಕ್ಕಾಗಿ ಬೆತ್ತಲಾದ ನಟಿಗೆ ನಿರ್ಮಾಪಕರಿಂದ ಒತ್ತಡ: ಬೇಸರ ಹೊರಹಾಕಿದ ನಾಯಕಿಪಾತ್ರಕ್ಕಾಗಿ ಬೆತ್ತಲಾದ ನಟಿಗೆ ನಿರ್ಮಾಪಕರಿಂದ ಒತ್ತಡ: ಬೇಸರ ಹೊರಹಾಕಿದ ನಾಯಕಿ

  ''ಅಗತ್ಯವಿಲ್ಲದಿದ್ದರೂ ಕೆಲವು ದೃಶ್ಯಗಳಲ್ಲಿ ನನ್ನನ್ನು ಬಲವಂತವಾಗಿ ನಗ್ನವಾಗಿ ನಟಿಸುವಂತೆ ಮಾಡಿದ್ದರು. ಇದು ನನ್ನ ಜೀವನದಲ್ಲಿ ಅತಿಯಾಗಿ ಕಾಡಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಒತ್ತಾಯದಿಂದ ನಟನೆ ಮಾಡಿಸಿದ್ರು

  ಒತ್ತಾಯದಿಂದ ನಟನೆ ಮಾಡಿಸಿದ್ರು

  ''ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶಕರಿಗೂ ನನಗೂ ಪ್ರತಿ ದಿನವೂ ಸೆಟ್ ನಲ್ಲಿ ಚರ್ಚೆಯಾಗುತ್ತಿತ್ತು. ನಾನು ನಗ್ನವಾಗಿ ನಟಿಸಲ್ಲ ಎಂದು ಹೇಳುತ್ತಿದ್ದರೂ, ಇಲ್ಲ ನೀವು ನಗ್ನವಾಗಿ ನಟಿಸಲೇ ಬೇಕು. ಇಲ್ಲವಾದರೆ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ ಎಂದು ಒತ್ತಾಯಿಸಿ ನಟಿಸುವಂತೆ ಮಾಡುತ್ತಿದ್ದರು'' ಎಂದು ನಟಿ ಆರೋಪಿಸಿದ್ದಾಳೆ.

  ಗೊಂದಲದಿಂದ ನಟಿಸಬೇಕಾಯಿತು

  ಗೊಂದಲದಿಂದ ನಟಿಸಬೇಕಾಯಿತು

  ''ನಗ್ನವಾಗಿ ನಟಿಸುವ ಅಗತ್ಯವಿಲ್ಲದಿದ್ದರೂ ಆ ನಿರ್ದೇಶಕರು ಯಾಕೆ ನನ್ನಿಂದ ನಗ್ನ ನಟನೆ ಮಾಡಿಸಿದರೂ ಎನ್ನುವುದು, ಈಗಲೂ ನನಗೆ ಅರ್ಥವಾಗದ ವಿಷ್ಯ. ಆದರೆ, ಗೊಂದಲಮಯ ಪರಿಸ್ಥಿತಿಯಲ್ಲಿ ನಾನು ನಗ್ನ ನಟನೆ ಮಾಡಲೇಬೇಕಿತ್ತು'' ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

  ಎಡಿಟೆಡ್ ಫೋಟೋಗಳನ್ನೇ ಹಾಕುತ್ತಿದ್ದ ಬೆಡಗಿ: ನೆಟ್ಟಿಗರಿಂದ ಮಂಗಳಾರತಿಎಡಿಟೆಡ್ ಫೋಟೋಗಳನ್ನೇ ಹಾಕುತ್ತಿದ್ದ ಬೆಡಗಿ: ನೆಟ್ಟಿಗರಿಂದ ಮಂಗಳಾರತಿ

  ಮುಜುಗರ ಆಗುತ್ತಿತ್ತು

  ಮುಜುಗರ ಆಗುತ್ತಿತ್ತು

  ''ಬಟ್ಟೆ ಇಲ್ಲದೆ ನಟಿಸುವುದು ನನಗೆ ಮುಜುಗರ ಉಂಟು ಮಾಡುತ್ತಿತ್ತು. ಯಾಕಂದ್ರೆ ಈ ಹಿಂದೆಯೂ ನಾನು ಅಂತಹ ದೃಶ್ಯಗಳಲ್ಲಿ ನಟಿಸಿರಲಿಲ್ಲ. ಅಂದು ನಾನು ಯಾಕೆ ನಗ್ನವಾಗಿ ನಿಂತಿದ್ದೇನೆ ಎನ್ನುವುದು ಕೂಡ ನನಗೆ ಗೊತ್ತಿರಲಿಲ್ಲ ಎಂದು'' ನೋವು ಹಂಚಿಕೊಂಡಿದ್ದಾರೆ.

  ಫೇಮಸ್ ಟಿವಿ ಸೀರಿಸ್

  ಫೇಮಸ್ ಟಿವಿ ಸೀರಿಸ್

  'ಗೇಮ್ ಆಫ್ ಥ್ರೋನ್ಸ್' ಸೀರಿಸ್ ಜಗತ್ತಿನಾದ್ಯಂತ ಪ್ರಖ್ಯಾತಿಗಳಿಸಿಕೊಂಡಿದೆ. ಈ ಸೀರಿಸ್ ನಲ್ಲಿ ನಟಿಸಿದ ಕಲಾವಿದರು ಕೂಡ ಬಹುಬೇಗ ಫೇಮಸ್ ಆಗಿರುವ ಉದಾಹರಣೆಯೂ ಇದೆ. ಎಮಿಲಿಯಾ ಕ್ಲಾರ್ಕ್ ಕೂಡ ಹೊರತಾಗಿಲ್ಲ. 2011 ರಲ್ಲಿ ಬಂದ 'ಗೇಮ್ ಆಫ್ ಥ್ರೋನ್ಸ್' ಡಾನೆರಿಸ್ ಟಾರ್ಗೇರಿಯನ್ ಪಾತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

  English summary
  Hollywood actress emilia clarke spoke about casting couch. she faced several problems in the time of Game of Thrones' Shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X