For Quick Alerts
  ALLOW NOTIFICATIONS  
  For Daily Alerts

  'ಬೇವಾಚ್' ನಲ್ಲಿ ಪಿಗ್ಗಿ ಜೊತೆ ಪಮೇಲಾ ಕಮಾಲ್

  By ಸೋನು ಗೌಡ
  |

  ಹಾಲಿವುಡ್ ನ ಖ್ಯಾತ ನಟಿ ಕಮ್ ರೂಪದರ್ಶಿ ಪಮೇಲಾ ಅಂಡರ್ಸನ್ ಅವರು ಪ್ರಿಯಾಂಕ ಚೋಪ್ರಾ ಕಾಣಿಸಿಕೊಳ್ಳುತ್ತಿರುವ ಹಾಲಿವುಡ್ ಸಿನಿಮಾ 'ಬೇವಾಚ್' ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಚಿತ್ರ ತಂಡವನ್ನು ಸೇರಿಕೊಂಡಿದ್ದಾರೆ.

  ಸುಮಾರು 48 ವರ್ಷದ ಹಾಲಿವುಡ್ ನಟಿ ಪಮೇಲಾ ಅವರು 'ಬೇವಾಚ್' ತಂಡವನ್ನು ಸೇರಿಕೊಂಡಿದ್ದಾಕ್ಕಾಗಿ ಹರ್ಷ ವ್ಯಕ್ತಪಡಿಸಿರುವ ನಟ ಡ್ವೈನ್ 'ದ ರಾಕ್ ಜಾನ್ಸನ್' ಅವರು ಇನ್ಸ್ಟಾಗ್ರಾಂ ನಲ್ಲಿ ಈ ಸುದ್ದಿಯನ್ನು ಘೋಷಿಸಿದ್ದಾರೆ.['ವೈಟ್ ಹೌಸ್' ಡಿನ್ನರ್ ಗೆ ಪ್ರಿಯಾಂಕಗೆ ಒಬಾಮಾರಿಂದ ಆಹ್ವಾನ]

  'ನಮ್ಮ 'ಬೇವಾಚ್' ತಂಡಕ್ಕೆ ಸುರ-ಸುಂದರಿಯಾಗಿರುವ ನಟಿ ಪಮೇಲಾ ಅವರು ಆಗಮಿಸಿದ್ದು, ಅವರಿಗೆ ಸ್ವಾಗತ. ನಿಮ್ಮನ್ನು ಬಿಟ್ಟು ಈ ಸಿನಿಮಾ ಮಾಡಲು ಖಂಡಿತ ಸಾಧ್ಯವಿರಲಿಲ್ಲ' ಎಂದು ನಟ ಡ್ವೈನ್ ಜಾನ್ಸನ್ ಅವರು ಬರೆದುಕೊಂಡಿದ್ದಾರೆ.

  ನಿರ್ದೇಶಕ ಸೇಥ್ ಗಾರ್ಡನ್ ಆಕ್ಷನ್-ಕಟ್ ಹೇಳುತ್ತಿರುವ 'ಬೇವಾಚ್' ಸಿನಿಮಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಮಿಂಚುತ್ತಿದ್ದು, ಈ ಸಿನಿಮಾವನ್ನು ಅಮೆರಿಕದಲ್ಲಿ ಮೇ 19, 2017ಕ್ಕೆ ತೆರೆಯ ಮೇಲೆ ತರಲು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದಾರೆ.[ಹಾಲಿವುಡ್ ನಲ್ಲಿ ಮಿಂಚಿದ ಟಾಪ್ 10 ಬಿಟೌನ್ ನಟಿಯರು]

  ಅಮೆರಿಕ ಧಾರಾವಾಹಿ 'ಕ್ವಾಂಟಿಕೋ' ಮೂಲಕ ಹಾಲಿವುಡ್ ಕ್ಷೇತ್ರದಲ್ಲಿ ಸೇರಿದಂತೆ ಜಾಗತಿಕವಾಗಿ ಜನಪ್ರಿಯವಾಗಿರುವ ನಟಿ ಪ್ರಿಯಾಂಕ ಚೋಪ್ರಾ ಅವರು ಇದೇ ಮೊದಲ ಬಾರಿಗೆ ಹಾಲಿವುಡ್ ಚಿತ್ರವೊಂದರಲ್ಲಿ ಸಖತ್ ಸೆಕ್ಸಿ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ..

  English summary
  Hollywood Actress Pamela Anderson has officially joined the cast of 'Paramount Pictures' 'Baywatch' movie. Hindi Actress Priyanka Chopra, Hollywood Actor Dwayne Johnson in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X